ಭಾರತದಾದ್ಯಂತ ಮೈಕ್ರೊ/ನ್ಯಾನೋ ಉದ್ಯಮಿಗಳನ್ನು ಸೃಷ್ಟಿಸಲು ಪ್ರಮುಖ ಸಹಭಾಗಿತ್ವ ಘೋಷಿಸಿದ ಎನ್‍ಎಸ್‍ಡಿಸಿ, ಲೆಟ್ಸ್ಎಂಡಾರ್ಸ್ (LetsEndorse) : ಮುಂದಿನ ಮೂರು ವರ್ಷಗಳಲ್ಲಿ 50,000 ಮೈಕ್ರೊ/ನ್ಯಾನೊ ಉದ್ಯಮಿಗಳಿಗೆ ನೆರವು

ಬೆಂಗಳೂರು : ಕುಶಲ ಭಾರತ ಯೋಜನೆಗೆ ಬೆಂಬಲ ಒದಗಿಸುವ ಗುರಿಯೊಂದಿಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ(ಎನ್‍ಎಸ್‍ಡಿಸಿ)ಮತ್ತು ಲೆಟ್ಸ್ಎಂಡಾರ್ಸ್, ಲೆಟ್ಸ್ಎಂಡಾರ್ಸ್ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ-ಮತ್ತು ಸ್ಪರ್ಶ(tech-and-touch) ಮಾದರಿಯ ಮೂಲಕ ಭಾರತದಾದ್ಯಂತ ಬೃಹತ್ ಮತ್ತು ಕ್ಷಿಪ್ರ ಮೈಕ್ರೊ/ನ್ಯಾನೋ ಉದ್ಯಮಶೀಲತಾ ಚಳುವಳಿಯನ್ನು ಸೃಷ್ಟಿಸಲು ಪ್ರಮುಖ ಸಹಭಾಗಿತ್ವ ಏರ್ಪಡಿಸಿಕೊಂಡಿವೆ.

ಈ ಸಹಯೋಗವು, ಉತ್ಪಾದನೆ, ಸೇವೆಗಳು, ವ್ಯಾಪಾರ ಮತ್ತು ನವಯುಗದ ಡಿಜಿಟಲ್ ಉದ್ಯಮಶೀಲತೆ ಕ್ಷೇತ್ರಗಳಾದ್ಯಂತ ಇರುವ 165ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಲು ಅಥವಾ ಪ್ರಸ್ತುತ ಇರುವ ಉದ್ಯಮಗಳನ್ನು ವರ್ಧಿಸಲು ಯೋಜಿಸುತ್ತಿರುವ ಗ್ರಾಮೀಣ ಹಾಗೂ ನಗರ ವ್ಯಕ್ತಿಗಳ ಜೀವನದ ಮೇಲೆ ಪ್ರಭಾವ ಬೀರಲಿದೆ. ತನ್ನ 100-ದಿನ ಪರಿಹಾರದ ಮೂಲಕ ಕೊನೆಮೈಲಿಯವರೆಗೆ ಮೈಕ್ರೊ/ನ್ಯಾನೋ ಉದ್ಯಮಿಗಳಿಗೆ ನೆರವಾಗುವಲ್ಲಿ ಭರವಸೆಯ ಫಲಿತಾಂಶಗಳನ್ನು ನೀಡಿದ ಲೆಟ್ಸ್ಎಂಡಾರ್ಸ್ ನ ಉದ್ಯಮಿತ (Udyamita) ಮಾದರಿಯನ್ನು ಈ ಸಹಭಾಗಿತ್ವದಲ್ಲೂ ವರ್ಧಿಸಲಾಗುತ್ತದೆ. ಈ ತಂತ್ರಜ್ಞಾನ ಚಾಲಿತ ಮಾದರಿಯು, ಪ್ರಮಾಣವರ್ಧನೆಯನ್ನು ಖಾತರಿಪಡಿಸುವುದರ ಜೊತೆಗೆ, ಪರಿಕಲ್ಪನೆಯ ನಿರ್ಮಾಣ, ವ್ಯಾಪಾರ ಯೋಜನೆಯ ರಚನೆಯಿಂದ ಹಿಡಿದು ಉದ್ಯಮವನ್ನು ಸ್ಥಾಪಿಸಿದ ಬಳಿಕ ಮಾರ್ಗದರ್ಶನ ನೀಡುವವರೆಗೆ, ಉದ್ಯಮದ ಯಶಸ್ಸು ಮತ್ತು ದೀರ್ಘಕಾಲ ಇರುವಂತಹ ಆದಾಯ ಗಳಿಕೆಗೆ ಮೊದಲಿನಿಂದ ಕೊನೆಯವರೆಗಿನ ಬೆಂಬಲ ಒದಗಿಸಿ, ವಿವಿಧ ಸರ್ಕಾರೀ ಯೋಜನೆಗಳು ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ನಿಯಮಗಳಡಿ ಕೈಗೆಟುಕುವ ಸಾಲಗಳ ನೆರವು ಪಡೆದುಕೊಳ್ಳುವುದಕ್ಕೆ ನೆರವಾಗಲಿದೆ.

ಈ ಎರಡೂ ಸಂಸ್ಥೆಗಳು ಉದ್ಯಮಶೀಲತಾ ಸಾಮರ್ಥ್ಯಗಳನ್ನು ವರ್ಧಿಸುವ ಗುರಿಯೆಡೆಗೆ ಕಾರ್ಯನಿರ್ವಹಿಸಿ, ಕೈಗೆಟುಕುವ ಮೈಕ್ರೋ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಮ್‍ಎಸ್‍ಎಮ್‍ಇ) ಬಂಡವಾಳಕ್ಕೆ ಪ್ರವೇಶಾವಕಾಶ ಒದಗಿಸುವ ಮೂಲಕ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಒಟ್ಟಾರೆ ಮೈಕ್ರೊ-ಉದ್ಯಮಗಳ ಯಶಸ್ಸಿಗೆ ನೆರವಾಗಲಿವೆ.

ಈ ಸಹಭಾಗಿತ್ವವನ್ನು ಘೋಷಿಸುತ್ತಾ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಚೀಫ್ ಆಪರೇಟಿಂಗ್ ಆಫಿಸರ್ (ಮತ್ತು ಅಧಿಕಾರ ನಿಯೋಜಿತ ಸಿಇಒ) ವೇದ್ ಮಣಿ ತಿವಾರಿ, “ಈ ಸಹಭಾಗಿತ್ವವು, ಕುಶಲ ಕಾರ್ಯಪಡೆಯನ್ನು ರಚಿಸಬೇಕೆನ್ನುವ ಕುಶಲ ಭಾರತ ಯೋಜನೆಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿದ್ದು, ಅವರನ್ನು ಬಲಿಷ್ಟ ಉದ್ಯಮಿಗಳಾಗುವುದಕ್ಕೆ ನೆರವಾಗಲಿದೆ. ದೇಶಾದ್ಯಂತದಿಂದ ಮಾನವಶಕ್ತಿಯನ್ನು ಕೌಶಲ್ಯಗೊಳಿಸುವುದು ಮತ್ತು ದೀರ್ಘಕಾಲ ಇರುವಂತಹ ಜೀವನೋಪಾಯಗಳನ್ನು ಸೃಷ್ಟಿಸುವುದು ನಮ್ಮ ಸತತ ಪ್ರಯತ್ನವಾಗಿದೆ. ಆ ಪಯಣದಲ್ಲಿ ಉದ್ಯಮಶೀಲತೆಯು ಒಂದು ಮುಖ್ಯ ಸ್ತಂಭವಾಗಿದೆ. ಲೆಟ್ಸ್ಎಂಡಾರ್ಸ್ ನೊಂದಿಗಿನ ಎನ್‍ಎಸ್‍ಡಿಸಿದ ಸಹಯೋಗವು, ಕೊನೆಮೈಲಿಯವರೆಗೆ, ಪ್ರಭಾವೀ ಕಾರ್ಯಚೌಕಟ್ಟನ್ನು ಸೃಷ್ಟಿಸಲು ಮತ್ತು ಮೈಕ್ರೋ-ಉದ್ಯಮಶೀಲತೆಯನ್ನು ಪ್ರಗತಿಪರಗೊಳಿಸಲು ನೆರವಾಗುತ್ತದೆ.”ಎಂದರು.

2022ರಲ್ಲಿ 10,000 ಉದ್ದಿಮೆಗಳಿಗೆ ನೆರವಾಗುವ ಗುರಿಯನ್ನು ಅದು ಹೊಂದಿದ್ದು, 30,000 ಜನರಿಗೆ ನೇರವಾಗಿ ಜೀವನೋಪಾಯಕ್ಕೆ ಎಡೆಮಾಡಿಕೊಡುತ್ತದೆ. ಸುಧಾರಿತ ಉದ್ಯಮ ಯಶಸ್ಸಿನ ಜೊತೆಗೆ ಸಾಲಗಳ ಮರುಪಾವತಿ ಮತ್ತು ಉದ್ಯಮಿಗಳಾಗಿ ಸಾಮರ್ಥ್ಯ ವರ್ಧನೆ, ಮೈಕ್ರೊ/ನ್ಯಾನೊ ಉದ್ಯಮಗಳಿಗೆ ಹಣಕಾಸು ವೆಚ್ಚದಲ್ಲಿ 50%ವರೆಗೆ ಕಡಿತ-ಇವು ಗಮನಾರ್ಹ ಪ್ರಭಾವಗಳ ಪೈಕಿ ಕೆಲವು.

ಲೆಟ್ಸ್ಎಂಡಾರ್ಸ್ ಡೆವಲಪ್ಮೆಂಟ್‍ನ ಸಹಸ್ಥಾಪಕಿ ಮತ್ತು ಸಿಇಒ ಮೋನಿಕ ಶುಕ್ಲ, “ದೀರ್ಘಕಾಲ ಇರುವಂತಹ ಅಭಿವೃದ್ಧಿ ಗುರಿಗಳು(Sustainable Development Goals)ಗೆ ಅನುಗುಣವಾಗಿ, 2030ರ ವೇಳೆಗೆ ದಾರಿದ್ರ್ಯವನ್ನು ಕೊನೆಗಾಣಿಸುವುದಕ್ಕೆ ಭಾರತಕ್ಕೆ ಅವಕಾಶವಿದ್ದು ದೀರ್ಘಕಾಲ ಇರುವಂತಹ ಜೀವನೋಪಾಯಗಳ ನಿರ್ಮಾಣ ಆ ಗುರಿಗಳನ್ನು ಸಾಧಿಸುವ ಒಂದು ಶಕ್ತಿಶಾಲಿ ವಿಧಾನವಾಗಿದೆ. ಜೀವನೋಪಾಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರಿಂದ, ಅದು ಶಿಕ್ಷಣ, ಆರೋಗ್ಯ, ಪೋಷಣೆ, ನೈರ್ಮಲ್ಯ, ಗೃಹನಿರ್ಮಾಣ, ಮುಂತಾದ ಸಾಮಾಜಿಕ ಸವಾಲುಗಳ ಮೇಲೂ ಪ್ರಭಾವ ಬೀರುತ್ತದೆ. ಬೃಹತ್ ಪ್ರಮಾಣದಲ್ಲಿ ಪ್ರಭಾವ ಸೃಷ್ಟಿಸುವುದಕ್ಕೆ, ಲೋಕೋಪಕಾರ/ಕ್ಷೇಮಾಭಿವೃದ್ಧಿ-ನಿರ್ದೇಶಿತ ದೃಷ್ಟಿಕೋನದಿಂದ ಜನರು ಉತ್ಪನ್ನಗಳು ಹಾಗೂ ಸೇವೆಗಳಿಗೆ ಪಾವತಿ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವಂತಹ ಮಾರುಕಟ್ಟೆ-ನಿರ್ದೇಶಿತ ದೃಷ್ಟಿಕೋನಕ್ಕೆ ಚಲನೆಯನ್ನು ಬದಲಾಯಿಸುವ ಅಗತ್ಯವಿದೆ. ಮೈಕ್ರೋ-ಉದ್ಯಮಶೀಲತೆಯ ಮೂಲಕ ದೀರ್ಘಕಾಲ ಇರುವಂತಹ ಜೀವನೋಪಾಯಗಳ ನಿರ್ಮಾಣ ಮಾಡುವುದರ ಬಗ್ಗೆ ನಮಗೆ ಉತ್ಕಂಟತೆ ಇದೆ ಮತ್ತು ಮಾದರಿಯ ತಲುಪುವಿಕೆಯನ್ನು ಹೆಚ್ಚಿಸಲು ಎನ್‍ಏಸ್‍ಡಿಸಿದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ಉತ್ಸಾಹವಾಗುತ್ತಿದೆ. 2027ರ ವೇಳೆಗೆ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಮತ್ತು 2030ರ ವೇಳೆಗೆ ಹತ್ತು ದಶಲಕ್ಷ ಮೈಕ್ರೊ/ನ್ಯಾನೊ ಉದ್ಯಮಿಗಳಿಗೆ ನೆರವಾಗುವ ಗುರಿ ನಮ್ಮದು. ಉದ್ಯಮಿತ(Udyamita) ಮಾದರಿಯನ್ನು ಮುನ್ನಡೆಸಿ ಒದಗಿಸುವಲ್ಲಿ ನಮ್ಮ ಸಮಾನಾಂತರ ವೇದಿಕೆ ಪರಿಹಾರವಾದ ಉದಿತಿ((UDITI)ಯನ್ನು ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು DESH-Stack ದೊಂದಿಗೆ ಕೂಡ ಅದನ್ನು ಸಂಯೋಜಿಸುವ ದಿಕ್ಕಿನಲ್ಲಿ ಆಲೋಚಿಸುತ್ತಿದ್ದೇವೆ.”ಎಂದರು.

Follow NSDC on:
Facebook: @NSDCIndiaOfficial
Twitter: @NSDCINDIA
LinkedIn: https://www.linkedin.com/company/1089361/admin/
YouTube: https://www.youtube.com/c/NSDCIndiaOfficial

Follow LetsEndorse on:
Facebook: @LetsEndorse
Twitter: @letsendorse
LinkedIn: https://www.linkedin.com/company/5400225/
Website: https://www.letsendorse.com, https://www.udyamita.org

Leave a Reply

Your email address will not be published. Required fields are marked *