ರೋಜ್ ಗಾರ್ ದಿವಸ್ ಆಚರಣೆ : ಗ್ರಾಮೀಣ ಜನರಿಗೆ ಮಾಹಿತಿ ರವಾನೆ

ಚನ್ನಪಟ್ಟಣ : ತಾಲ್ಲೂಕಿನ ನಾಗವಾರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹೊಸದಾಗಿ ಆಯ್ಕೆ ಯಾಗಿರುವ ಗ್ರಾಮ ಕಾಯಕ ಬಂಧುಗಳು, ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರನ್ನು ಒಟ್ಟುಗೂಡಿಸಿ ರೋಜ್ ಗಾರ್ ದಿವಸ್ ಆಚರಿಸಲಾಯಿತು.

ನರೇಗಾ ಯೋಜನೆಯ ಮಾಹಿತಿ ಹಾಗೂ ಮೇಟ್ ಗಳ ಪಾತ್ರ , ಇ -ಶ್ರಮ್ ಕಾಡ್ ೯ ಯೋಜನೆಯ ಉಪಯೋಗದ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ನರೇಗಾ ಯೋಜನೆಯಡಿಯಲ್ಲಿ ನಿಮಾ೯ಣ ಮಾಡಲಾಗಿರುವ ಮೇಕೆ ಶೆಡ್ಡು, ಚೆಕ್ ಡ್ಯಾಮ್, ಸೋಕ್ ಪಿಟ್, ಪಾಕ್೯, ಕುಡಿಯುವ ನೀರಿನ ತೊಟ್ಟಿಗಳನ್ನು ವೀಕ್ಷಿಸಲಾಯಿತು.

ಈ ಸಂದಭ೯ದಲ್ಲಿ ಗ್ರಾಮಪಂಚಾಯತಿ ಸೆಕ್ರೇಟರಿ ಶ್ರೀಕಂಠ ಕೆ.ಎನ್ ಗ್ರಾಮ ಕಾಯಕ ಮಿತ್ರ ರತ್ನ , ತಾಲ್ಲೂಕು ಐಇಸಿ ಸಂಯೋಜಕರು ಭವ್ಯಶ್ರೀ , ಗ್ರಾಮ ಕಾಯಕ ಬಂಧುಗಳು, ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರ ಹಾಜರಿದ್ದರು.

Leave a Reply

Your email address will not be published. Required fields are marked *