12-14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮ
ಚನ್ನಪಟ್ಟಣ : ತಾಲ್ಲೂಕಿನ ಸಣಬನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ SBCC ಘಟಕ, ಯುನಿಸೆಫ್ ಹಾಗೂ ಐಐಎಚ್ಎಂಆರ್ – ಬೆಂಗಳೂರು ವತಿಯಿಂದ 12ರಿಂದ14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಪಡೆಯುವುದರ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಎಸ್ ಬಿ ಸಿ ಸಿ ಸಂಯೋಜಕ ಸುರೇಶ್ ಬಾಬು ಮಾತನಾಡುತ್ತಾ,ಕೋವಿಡ್ ಲಸಿಕೆಗಳಿಂದ ಮೂರನೆ ಅಲೆಯಲ್ಲಿ ಯಾವುದೇ ರೀತಿಯ ಹೆಚ್ಚಿನ ಹಾನಿಯಾಗಿಲ್ಲ ಆದ್ದರಿಂದ 12-14 ವರ್ಷದೊಳಗಿನ ಮಕ್ಕಳಿಗೆ ಕೇಂದ್ರ ಸರ್ಕಾರವು ಇಂದಿನಿಂದ ಲಸಿಕೆಗಳನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 12-14 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ನೀಡಲಾಗುತ್ತದೆ. ಆದ್ದರಿಂದ ಯಾವುದೇ ಭಯವಿಲ್ಲದೆ ಲಸಿಕೆಗಳನ್ನು ಪಡೆದು ಕೋವಿಡ್ ಹರಡುವಿಕೆಯನ್ನು ತಡೆಯಬಹುದು ಎಂದು ಮಕ್ಕಳಿಗೆ ತಿಳಿಸಿದರು. ಅಲ್ಲದೇ ಮಕ್ಕಳು ಹೆಚ್ಚಿನ ಪೌಷ್ಟಿಕಾಂಶದ ಆಹಾರಗಳನ್ನು ಬಳಸಬೇಕು.

ಕೊರೋನ ಲಸಿಕೆ ಪಡೆದ ನಂತರವೂ ಕೂಡ, ಮಾಸ್ಕ್ ತೊಡಬೇಕು, ಅಗಾಗ್ಗೆ ಸ್ಯಾನಿಟೈಸ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಬೇಕು ಹಾಗೂ ಇತರರಿಗೂ ಕೊರೊನಾ ಸೂಕ್ತ ತಿಳುವಳಿಕೆಗಳು, ಕೊರೋನಾ ಲಸಿಕೆಯ ಮಹತ್ವವನ್ನು ತಿಳಿಸಿ, ಸರ್ಕಾರದ ಲಸೀಕಾಕರಣದಲ್ಲಿ ಪಾಲ್ಗೊಂಡು ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ SBCC ಸಂಯೋಜಕ ಸುರೇಶ್ ಬಾಬು, ಹೊಂಗನೂರು ಪ್ರಾಥಮಿಕ ಅರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಭಾಗ್ಯ, ಮುಖ್ಯ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.