640+ ಮೂತ್ರಪಿಂಡ ಕಸಿ : ನೂತನ ಮೈಲಿಗಲ್ಲು ಸ್ಥಾಪಿಸಿದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್

• 2009 ರಲ್ಲಿಆರಂಭವಾದಾಗಿನಿಂದಇದುವರೆಗೆ 468 ಜೀವಂತ ಮತ್ತು 172 ಮರಣವನ್ನಪ್ಪಿದ ದಾನಿಗಳಿಂದ ಮೂತ್ರಪಿಂಡ ಪಡೆದು 640 ಕಸಿ ಯಶಸ್ವಿ
• ಡಯಟ್ ಮತ್ತು ಬೊಜ್ಜಿನಿಂದಜೀವನಶೈಲಿ ಬದಲಾವಣೆಯಿಂದಾಗಿ ಯುವಪೀಳಿಗೆಯಲ್ಲಿ ಮೂತ್ರಪಿಂಡರೋಗ ಹೆಚ್ಚಳ
• ಮೂತ್ರಪಿಂಡ ರೋಗ, ಅದರಿಂದ ಎದುರಾಗಬಹುದಾದ ಅಪಾಯಗಳು ಮತ್ತು ಗುಣಲಕ್ಷಣಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಮನಗರದಲ್ಲಿ ನಿರಂತರವಾಗಿ ಬಿಜಿಎಸ್ ಜಿಜಿಎಚ್ ಸೂಪರ್ ಸ್ಪೆಷಾಲಿಟಿ ಒಪಿಡಿ ಸೇವೆಗಳನ್ನು ನೀಡುತ್ತಾ ಬಂದಿದೆ
.

ರಾಮನಗರ : ಅಂಗಾಂಗ ಕಸಿಯಲ್ಲಿ ಪರಿಣತಿಯನ್ನು ಹೊಂದಿರುವ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ 12 ವರ್ಷದಲ್ಲಿ640+ ಮೂತ್ರಪಿಂಡ ಕಸಿ ಮಾಡುವ ಮೂಲಕ ತನ್ನ ಖ್ಯಾತಿಯ ಕಿರೀಟಕ್ಕೆ ಮತ್ತೊಂದು ಗರಿ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿಆಸ್ಪತ್ರೆಯಲ್ಲಿಅತ್ಯಂತಗಂಭೀರ ಹಂತದ ಪ್ರಕರಣಗಳ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಜೀವಗಳನ್ನು ಉಳಿಸುವುದು ತಮ್ಮ ಗುರಿ ಎಂಬುದನ್ನು ಸಾಬೀತುಪಡಿಸಿದೆ. ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ತಜ್ಞ ವೈದ್ಯರ ತಂಡವು 2020 ರಲ್ಲಿ 39 ಕಸಿ ಶಸ್ತ್ರಚಿಕಿತ್ಸೆಗಳು ಮತ್ತು 2021 ರಲ್ಲಿ 70 ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದರ ಪರಿಣಾಮ ಇಎಸ್‍ಆರ್‍ಡಿ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿವೆ. ಆಸ್ಪತ್ರೆಯು ಸುಸಜ್ಜಿತವಾದ ಮೂಲಸೌಕರ್ಯ ಮತ್ತು ಅತ್ಯುತ್ಕøಷ್ಠವಾದ ಪರಿಣತಿಯನ್ನು ಹೊಂದಿರುವ ವಿಶೇಷ ವೈದ್ಯರ ತಂಡವನ್ನು ಹೊಂದಿದ್ದು, ಈ ತಂಡವು ಅತ್ಯಂತ ಸಂಕೀರ್ಣವಾದ ಮೂತ್ರಪಿಂಡ ರೋಗಗಳು ಮತ್ತು ಎಬಿಒ, ಇಎಸ್‍ಆರ್‍ಡಿ ಮತ್ತು ಪ್ರೀಎಂಪ್ಟಿವ್ ಕಸಿಯಂತಹ ಚಿಕಿತ್ಸೆಗಳನ್ನು ನೀಡುವಲ್ಲಿ ನಿಷ್ಣಾತವಾಗಿದೆ. ಕಸಿ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಿದ ದಿನದಿಂದಲೂ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿ ಆಸ್ಪತ್ರೆಯಲ್ಲಿ ಈ ಎಲ್ಲಾ ಕಸಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಇಲ್ಲಿ ಆಸ್ಪತ್ರೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ರೋಗಿಗಳಿಗೆ ಸೂಕ್ತ ಚಿಕಿತ್ಸೆಗಳನ್ನು ನೀಡುತ್ತಾ ಬರುತ್ತಿದೆ.
ಇಂದು, ಭಾರತ ಮತ್ತು ವಿಶ್ವದಾದ್ಯಂತ ಅಂಗಾಂಗಗಳಿಗೆ ಅದರಲ್ಲೂ ವಿಶೇಷವಾಗಿ ಮೂತ್ರಪಿಂಡಕ್ಕೆ ಭಾರೀ ಬೇಡಿಕೆ ಬರುತ್ತಿದೆ. ಸಾವನ್ನಪ್ಪಿದ ದಾನಿಗಳಿಗಿಂತ ಹೆಚ್ಚು ಜೀವಂತ ವ್ಯಕ್ತಿಗಳು ತಮ್ಮ ಅಂಗಗಳನ್ನು ದಾನ ಮಾಡಲು ಮುಂದೆ ಬರುತ್ತಿರುವುದನ್ನು (ಬಹುತೇಕ ಮಂದಿ ಕುಟುಂಬ ಸದಸ್ಯರು) ವೈದ್ಯರು ಗಮನಿಸಿದ್ದಾರೆ. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ 468 ಜೀವಂತ ವ್ಯಕ್ತಿಗಳ ಅಂಗಗಳು ಮತ್ತು 172 ಸಾವನ್ನಪ್ಪಿದ ವ್ಯಕ್ತಿಗಳಿಂದ ಅಂಗಗಳನ್ನು ದಾನ ಪಡೆದಿದ್ದಾರೆ. ದುರಾದೃಷ್ಠವಶಾತ್, ಇಎಸ್‍ಆರ್‍ಡಿ ಇರುವ ಅನೇಕ ರೋಗಿಗಳು ಅಂಗಗಳ ದಾನಕ್ಕಾಗಿ ಹಲವು ವರ್ಷಗಳಿಂದ ಕಾಯಬೇಕಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂಗಾಂಗಗಳ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ದಾನಿಗಳ ಅಂಗಾಂಗಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯತೆ ಕಾಣುತ್ತಿದೆ ಹಾಗೂ ಸಮಾಜದಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.
ಸರ್ಕಾರದ ಸಂಸ್ಥೆಯಾದ ಜೀವ ಸಾರ್ಥಕತೆ (ಅಂಗಾಂಗ ದಾನದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆ)ಯೊಂದಿಗೆ ಸೇರಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್‍ಗ್ಲೋಬಲ್ ಹಾಸ್ಪಿಟಲ್‍ನ ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಮತ್ತು ಸೀನಿಯರ್ ನೆಫ್ರೋಲಾಜಿಸ್ಟ್ & ಟ್ರಾನ್ಸ್‍ಪ್ಲಾಂಟ್ ಫಿಸಿಶಿಯನ್ ಡಾ.ಅನಿಲ್ ಕುಮಾರ್ ಬಿ.ಟಿ. ಅವರು ಈ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿರುವ ಬಗ್ಗೆ ಮಾತನಾಡಿ, ಸಾಂಕ್ರಾಮಿಕ (ಕೋವಿಡ್-19) ತೀವ್ರಗತಿಯಲ್ಲಿದ್ದ ಸಂದರ್ಭದಲ್ಲಿ ಅಂಗಾಂಗ ದಾನ ಮತ್ತು ಕಸಿ ಶಸ್ತ್ರಚಿಕಿತ್ಸೆ ಕಾರ್ಯಕ್ರಮಗಳಿಗೆ ಸಾಕಷ್ಟು ತೊಂದರೆ ಉಂಟಾಗಿ ತೀವ್ರ ಹಿನ್ನಡೆ ಉಂಟಾಯಿತು. ಈ ಸಾಂಕ್ರಾಮಿಕ ಅವಧಿಯಲ್ಲಿ ಕಸಿ ಪ್ರಮಾಣದಲ್ಲಿ 50-90% ರಷ್ಟು ಇಳಿಕೆಯಾಗಿದೆ. ಈ ಕೋವಿಡ್ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೀವ್ರ ಪರಿಣಾಮ ಉಂಟಾಯಿತು. ಮೂತ್ರಪಿಂಡ ಕಸಿ ಮಾಡಿಸಿಕೊಂಡ ರೋಗಿಗಳು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ, ಜೀವ ಉಳಿಸುವ ಚಿಕಿತ್ಸೆ ಮತ್ತು ಔಷಧಿಗಳನ್ನು ಸಕಾಲದಲ್ಲಿ ಪಡೆದುಕೊಳ್ಳುವುದು ಸೇರಿದಂತೆ ಇನ್ನಿತರೆ ವಿಧದಲ್ಲಿ ಮೂತ್ರಪಿಂಡ ರೋಗಿಗಳು ಪರೋಕ್ಷವಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಇವರಲ್ಲಿ ಅನೇಕರಲ್ಲಿ ಮೂತ್ರಪಿಂಡ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗಿ ಮೂತ್ರಪಿಂಡ ವೈಫಲ್ಯವೂ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿಗಳಿಂದ ಅಂಗಾಂಗ ಪಡೆಯಲು ಕಾಯುತ್ತಿದ್ದ ರೋಗಿಗಳು ಮತ್ತಷ್ಟು ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅದೇ ರೀತಿ, ಅಂಗಾಂಗ ದಾನ ಮಾಡಲು ಕಾಯುತ್ತಿದ್ದ ವ್ಯಕ್ತಿಗಳು ಇನ್ನಷ್ಟು ದಿನಗಳ ಕಾಲ ಕಾಯಬೇಕಾಯಿತು. ಏಕೆಂದರೆ, ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ಸೋಂಕು ಹರಡುತ್ತದೆ ಎಂಬ ಭಯದಿಂದ ಅವರು ಕಾಯಬೇಕಾಯಿತು. ಆದಾಗ್ಯೂ, ಟೆಲಿಕನ್ಸಲ್ಟೇಶನ್ ಮೂಲಕ ನಮ್ಮ ರೋಗಿಗಳೊಂದಿಗೆ ದಿನದ 24 ಗಂಟೆಯೂ ಸಂಪರ್ಕದಲ್ಲಿದ್ದೆವು ಮತ್ತು ಅವರಿಗೆ ಬೇಕಾದ ಚಿಕಿತ್ಸೆಗಳನ್ನು ಲಭ್ಯವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದೆವು. ಈ ಸಾಂಕ್ರಾಮಿಕದಿಂದಾಗಿ ನಾವು 2021 ರಲ್ಲಿ ಕೇವಲ 70 ಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಾಯಿತು. ಈ ಪೈಕಿ 22 ಮಂದಿಗೆ ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಕಸಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. 4 ಜೋಡಿಗೆ ಸ್ವ್ಯಾಪ್ ಕಸಿ ಮತ್ತು 4 ಎಬಿಒ ಇನ್‍ಕಾಂಪ್ಯಾಟಿಬಲ್ ಕಸಿಯನ್ನು ನಡೆಸಲಾಗಿದೆ’’ ಎಂದು ತಿಳಿಸಿದರು. ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ಸೀನಿಯರ್ ಯೂರೋಲಾಜಿಸ್ಟ್ ಮತ್ತು ಚೀಫ್ ಟ್ರಾನ್ಸ್‍ಪ್ಲಾಂಟ್ ಸರ್ಜನ್ ಡಾ.ನರೇಂದ್ರ ಎಸ್. ಅವರು ಮಾತನಾಡಿ,ಸಾಂಕ್ರಾಮಿಕವು ಕೇವಲ ರೋಗಿಗಳಿಗಷ್ಟೇ ಸಂಕಷ್ಟವನ್ನು ತಂದೊಡ್ಡಿಲ್ಲ. ಇದರ ಜೊತೆಗೆ ಸಾಂಕ್ರಾಮಿಕದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದೇಶಗಳಿಂದ ಅಂಗಾಂಗ ಕಸಿಗಾಗಿ ಬರಲು ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ವಿಮಾನ ಸಂಚಾರ ಆರಂಭವಾಗಲೆಂದು ತಿಂಗಳುಗಟ್ಟಲೆ ಕಾಯಬೇಕಾಯಿತು. ಏಕೆಂದರೆ, ನಮ್ಮಲ್ಲಿರುವ ಅತ್ಯಾಧುನಿಕ ಮೂಲಸೌಕರ್ಯಗಳು ಮತ್ತು ಅಂಗಾಂಗಗಳ ಲಭ್ಯತೆಯಿಂದಾಗಿ ಅವರು ನಮ್ಮನ್ನು ಭೇಟಿ ಮಾಡುತ್ತಾರೆ. ಅನೇಕ ದೇಶಗಳಲ್ಲಿ ಕಸಿ ಸೌಲಭ್ಯಗಳು ಇಲ್ಲದಿರುವುದರಿಂದ ವಿದೇಶಗಳ ರೋಗಿಗಳು ಇಲ್ಲಿಗೆ ಬರುತ್ತಾರೆ. ಡಯಾಲಿಸಿಸ್‍ಗೆ ಹೋಲಿಸಿದರೆ ಕಸಿಯು ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ ಮತ್ತು ಎಲ್ಲಾ ಹಂತದ ಮೂತ್ರಪಿಂಡ ರೋಗಿಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಡಯಾಬಿಟಿಸ್ ಮತ್ತು ಬೊಜ್ಜಿನಂತಹ ರೋಗಗಳಿಂದ ಬಳಲುತ್ತಿರುವ ವೃದ್ಧರು ಮತ್ತು ವಯಸ್ಕರಲ್ಲಿ ಮೂತ್ರಪಿಂಡ ರೋಗಗಳಲ್ಲಿ ಹೆಚ್ಚಳ ಕಂಡುಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸಾಂಕ್ರಾಮಿಕದಿಂದ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ. ಕಳಪೆ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಒತ್ತಡ, ಅಧಿಕ ಒತ್ತಡ, ಡಯಾಬಿಟಿಸ್ ಮತ್ತು ಬಿಎಂಐನಲ್ಲಿನ ಹೆಚ್ಚಳದಿಂದ ಜನರು ಬಳಲುವಂತಾಗಿದೆ. ಸುಧಾರಿತ ಜೀವನಶೈಲಿ ಮತ್ತು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವುದೊಂದೇ ಮೂತ್ರಪಿಂಡ ರೋಗವನ್ನು ತಡೆಗಟ್ಟುವ ಏಕೈಕ ಪರಿಹಾರವಾಗಿದೆ. ಅತ್ಯಂತ ಹೆಚ್ಚು ಯಶಸ್ವಿ ದರದಲ್ಲಿ 640 ಮೂತ್ರಪಿಂಡ ಕಸಿ ಮಾಡುವ ಮೂಲಕ ನಾವು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಪ್ರವರ್ತಕರಾಗಿದ್ದೇವೆ’’ ಎಂದು ಹೇಳಿದರು.
ಬೆಂಗಳೂರಿನ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ನ ಕ್ಲಸ್ಟರ್ ಸಿಒಒ ಬಿಜು ನಾಯರ್ ಅವರು ಮಾತನಾಡಿ, “ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಗೊಳಿಸಿದ ಕಸಿಯಲ್ಲಿ ವಿಶೇಷ ಪರಿಣತಿ ಹೊಂದಿದ ನಮ್ಮ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಹಾಗೂ ಕಸಿ ಸಂಯೋಜಕರಿಗೆ ನನ್ನ ಕೃತಜ್ಞತೆಗಳನ್ನು ಹೇಳಲು ಬಯಸುತ್ತೇನೆ. ನಮ್ಮ ಮೂತ್ರಪಿಂಡ ಕಸಿ ಸೇವೆಗಳು ನಮ್ಮ ಪ್ರಮುಖ ಬಹು-ಅಂಗಾಂಗ ಕಸಿ ಕಾರ್ಯಕ್ರಮದ ಪ್ರಮುಖಅಂಶವಾಗಿದೆ. ಇದುಕರ್ನಾಟಕದ ಪ್ರಮುಖ ಘಟಕಗಳಲ್ಲಿ ಒಂದಾಗಿದ್ದು, ಈ ವಿಚಾರದಲ್ಲಿ ನಾವು ಹಲವು ಪ್ರಥಮಗಳನ್ನು ಸಾಧಿಸಿದ್ದೇವೆ’’ ಎಂದರು.
ಕೋವಿಡ್ ಸಂದರ್ಭದಲ್ಲಿಎದುರಾದಎಲ್ಲಾ ಸವಾಲುಗಳನ್ನು ಎದುರಿಸಿದ ನೆಫ್ರಾಲಾಜಿ ವಿಭಾಗದ ಮುಖ್ಯಸ್ಥರಾಗಿರುವ ಸೀನಿಯರ್ ನೆಫ್ರಾಲಾಜಿಸ್ಟ್ ಮತ್ತು ಚೀಫ್‍ಟ್ರಾನ್ಸ್‍ಪ್ಲಾಂಟ್ ಫಿಸಿಶಿಯನ್ ಡಾ.ಅನಿಲ್‍ಕುಮಾರ್ ಬಿಟಿ ನೇತೃತ್ವದ ಡಾ.ರಾಜೀವ್‍ಇ.ಎನ್, ಡಾ.ಮೊಹ್ಮದ್ ಫಾರೂಕ್ ಅಹ್ಮದ್, ಡಾ.ನಿತಿನ್‍ಜೆ, ಯೋರೋಲಾಜಿ ವಿಭಾಗದ ಮುಖ್ಯಸ್ಥ ಸೀನಿಯರ್ ಯೂರೋಲಾಜಿಸ್ಟ್ ಮತ್ತು ಚೀಫ್ ಟ್ರಾನ್ಸ್‍ಪ್ಲಾಂಟ್ ಸರ್ಜನ್ ಡಾ.ನರೇಂದ್ರಎಸ್, ಡಾ.ಶೇಷಗಿರಿ ಟಿ.ವಿ. ಮತ್ತು ಡಾ.ನವೀನ್‍ಎಂ.ಎನ್ ಅವರನ್ನೊಳಗೊಂಡ ನಮ್ಮ ಪರಿಣತ ವೈದ್ಯರತಂಡವು ಈ ಯಶಸ್ಸಿಗೆ ಕಾರಣವಾಗಿದ್ದು, ಇವರೆಲ್ಲರೂ ತಮ್ಮ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ.
ಬೆಂಗಳೂರು-ಮೈಸೂರು ಭಾಗದ ರಾಮನಗರ, ಚನ್ನಪಟ್ಟಣ ಮತ್ತು ಬಿಡದಿಯಂತಹ ಎರಡನೇ ಶ್ರೇಣಿಯ ನಗರಗಳಲ್ಲಿ ನೆಫ್ರೋಲಾಜಿ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನೊಳಗೊಂಡ ತಂಡವು ರೋಗಿಗಳ ಸೇವೆಯಲ್ಲಿ ನಿರತವಾಗಿದೆ. ಮೂತ್ರಪಿಂಡ ರೋಗದಿಂದ ಎದುರಾಗಬಹುದಾದ ಅಪಾಯಗಳು ಮತ್ತು ಅದರ ಗುಣಲಕ್ಷಣಗಳು ಸೇರಿದಂತೆ ಮೂತ್ರಪಿಂಡ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತಂಡ ರೋಗಿಗಳಿಗಾಗಿ ಒಪಿಡಿಗಳನ್ನು ತೆರೆದಿದೆ. ಹಲವು ವರ್ಷಗಳಿಂದ ನಮ್ಮ ವೈದ್ಯರು ರಾಮನಗರ ಮತ್ತು ಬಿಡದಿಯಲ್ಲಿನ ರೋಗಿಗಳಿಗೆ ಟೆಲಿ ಕನ್ಸಲ್ಟೇಶನ್ ಮೂಲಕ ಮತ್ತು ವ್ಯಕ್ತಿಗತ ಭೇಟಿಯ ಮೂಲಕ ಸೂಕ್ತ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. ಈ ತಂಡವು ಹೆಲ್ತ್‍ಕೇರ್ ಸೆಂಟರ್‍ಗಳು ಮತ್ತು ಔಟ್‍ರೀಚ್ ಕ್ಲಿನಿಕ್‍ಗಳನ್ನು ಆರಂಭಿಸಿದೆ. ಇದಕ್ಕೆ ಸ್ಥಳೀಯ ಆಸ್ಪತ್ರೆಗಳ ಸಹಯೋಗವನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *