ಅಂಗನವಾಡಿ ಮಕ್ಕಳ ಕಲಿಕೆಯ ಗುಣಮಟ್ಟ ಕುರಿತು ಮುಖ್ಯ ಯೋಜನಾಧಿಕಾರಿಗಳಿಂದ ಪರಿಶೀಲನೆ
ರಾಮನಗರ : ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡವರ ಮಕ್ಕಳಿಗೂ ಖಾಸಗಿ ಕಾನ್ವೆಂಟ್‌ಗಳಲ್ಲಿ ಸಿಗುವಂತಹ ಮೂಲಭೂತ ಸೌಲಭ್ಯಗಳು ಹಾಗೂ ತಾಂತ್ರಿಕ ಅಂಶಗಳಾದ ಎಲ್.ಇ.ಡಿ ಲರ್ನಿಂಗ್ ಮೆಟೀರಿಯಲ್‌ಗಳನ್ನು ಆಯ್ದ ಗ್ರಾಮ ಪಂಚಾಯಿತಿಗಳ ಅಂಗನವಾಡಿಗಳಿಗೆ ವಿತರಣೆ ಮಾಡಲಾಗಿದೆ.
ಎಲ್.ಇ.ಡಿ ಮುಖಾಂತರ ಯಾವ ರೀತಿ ಮಕ್ಕಳು ಕಲಿಯುತ್ತಿದ್ದಾರೆ ಹಾಗೂ ಶಿಕ್ಷಕಿಯರು ಯಾವ ವಿಧಾನದಲ್ಲಿ ಭೋಧಿಸುತ್ತಿದ್ದಾರೆ ಮತ್ತು ಎಲ್.ಇ.ಡಿಗಳನ್ನು ವಿತರಣೆ ಮಾಡಿದ ನಂತರ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆಯೂ ಏರಿಕೆಯಾಗುವುದೇ ಎಂಬ ಮಾಹಿತಿಯನ್ನು ತಿಳಿಯಲು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಅವರು ಕನಕಪುರ ತಾಲ್ಲುಕಿನ ಕೊಳ್ಳಿಗಾನಹಳ್ಳಿ ಹಾಗೂ ಶಿವನಹಳ್ಳಿ ಗ್ರಾಮ ಪಂಚಾಯತಿಗಳ ಅಂಗನವಾಡಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ದೊಡ್ಡರಂಗೇಗೌಡರು ಎಲ್.ಇ.ಡಿ ಕಲಿಕೆಯ ಎಕ್ಸ್ಪರ್ಟ್ ಹಾಗೂ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಎಲ್.ಇ.ಡಿ ಸಮಾಲೋಚಕರು ಉಪಸ್ಥಿತರಿದ್ದರು.