ಮಾರ್ಚ್ 23ರಂದು ಸಾಹಿತಿ ಡಾ. ಎಂ. ಬೈರೇಗೌಡರ ಮೂರು ಪುಸ್ತಕಗಳ ಬಿಡುಗಡೆ
ರಾಮನಗರ : ಸಾಹಿತಿ, ಜಾನಪದ ವಿದ್ವಾಂಸ, ನಾಟಕಕಾರ ಡಾ. ಎಂ. ಬೈರೇಗೌಡ ಅವರ ವಿಮರ್ಶಾ ಸಂಕಲನ ಜನಪದ ಮಹಾಭಾರತ ವಿಭಿನ್ನ ಮುಖಗಳು, ನಾಟಕಗಳಾದ ಕರ್ಣಹತ್ಯೆ ಹಾಗೂ ಉರುಗವ್ವ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ರಾಮನಗರದ ಸ್ಪಂದನ ಚಾರಿಟಬಲ್ ಟ್ರಸ್ಟ್ ಮತ್ತು ಬೆಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ರಾಮನಗರ ಸಂಯುಕ್ತವಾಗಿ 23ನೇ ಮಾರ್ಚ್ 2022ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.ಕಾರ್ಯಕ್ರಮವು ಶ್ರೀ ಕೆಂಗಲ್ ಹನುಮಂತಯ್ಯ ಅಭಿವೃದ್ಧಿ ಭವನದ ತಳಮಹಡಿಯಲ್ಲಿ ನಡೆಯುವುದು.

ಬೆಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಕೆ. ರಾಮಕೃಷ್ಣಯ್ಯ ಪುಸ್ತಕ ಬಿಡುಗಡೆ ಮಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್ ಅತಿಥಿಗಳಾಗಿ ಪಾಲ್ಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುತ್ತಣ್ಣ ವಹಿಸಲಿದ್ದಾರೆ.
ಜನಪದ ಮಹಾಭಾರತ ವಿಭಿನ್ನ ಮುಖಗಳು ವಿಮರ್ಶಾ ಸಂಕಲನವನ್ನು ಕನ್ನಡ ಉಪನ್ಯಾಸಕ ಎಸ್. ನರಸಿಂಹಮೂರ್ತಿ, ಉರುಗವ್ವ ನಾಟಕ ಕೃತಿಯನ್ನು ಕುರಿತು ಇಂಗ್ಲಿಷ್ ಉಪನ್ಯಾಸಕ ಡಾ. ನವೀನ್ ಹಳೇಮನೆ ಹಾಗೂ ಕರ್ಣಹತ್ಯೆ ಕೃತಿ ಕುರಿತು ಕನ್ನಡ ಪ್ರಾಧ್ಯಾಪಕ ಡಾ. ಬೆಳ್ಳೂರು ವೆಂಕಟಪ್ಪ ಪರಿಚಯಿಸುವರು ಎಂದು ಸ್ಪಂದನ ಚಾರಿಟಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.