ರಾಮನಗರ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ. ರವಿ, ಕಾರ್ಯಾಧ್ಯಕ್ಷರಾಗಿ ಗಿರೀಶ್ ಕುಮಾರ್ ಆಯ್ಕೆ
ರಾಮನಗರ : ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಜಿಲ್ಲಾ ಸಂಘ ರಾಮನಗರ, ಕೇಂದ್ರ ಸಂಘದ ಪದಾಧಿಕಾರಿ ಮತ್ತು ಕಾರ್ಯಾಧ್ಯಕ್ಷ ವಿಜಯ್ ಕುಮಾರ್ ರವರ ಸಮ್ಮುಖದಲ್ಲಿ ರಾಮನಗರ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಮರುಸ್ಥಾಪನೆಯನ್ನು ಇತ್ತೀಚೆಗೆ ಸ್ಥಾಪನೆಗೊಳಿಸಲಾಯಿತು.
ರಾಮನಗರ ಜಿಲ್ಲಾ ಆಸ್ಪತ್ರೆ ವಾಹನ ಚಾಲಕರಾದ ರವಿ.ಸಿ.ಕೆ. ಇವರನ್ನು ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಕನಕಪುರ ಸಾರ್ವಜನಿಕ ಆಸ್ಪತ್ರೆಯ ಗಿರೀಶ್ ಕುಮಾರ್ ಇವರನ್ನು ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸರ್ಕಾರಿ ವಾಹನ ಚಾಲಕರ ಯೋಗ ಕ್ಷೇಮ ಹಾಗೂ ಕುಂದು ಕೊರತೆಗಳನ್ನು ಸಂಘದ ಕೊರತೆಗಳನ್ನು ಸಂಘದ ಮುಖಾಂತರ ಸಂಘದ ಸಭೆಯಲ್ಲಿ ಸರ್ವಾನು ಮತದಿಂದ ತಿಳಿಸಲಾಯಿತು.
ಸಭೆಯಲ್ಲಿ ಎಲ್ಲಾ ಇಲಾಖೆಯ ವಾಹನ ಚಾಲಕರು ಪಾಲ್ಗೊಂಡಿದ್ದರು.