ಮಾರ್ಚ್ 25 ರಂದು ಉದ್ಯೋಗ ಮೇಳ
ರಾಮನಗರ : ಕೌಶಲಾಭಿವೃದ್ಧಿ ಅಧಿಕಾರಿ, ಜಿಲ್ಲಾ ಕೌಶಲ್ಯ ಕೇಂದ್ರ ರಾಮನಗರ ಇವರ ಸಹಯೋಗದೊಂದಿಗೆ ಮಾರ್ಚ್ 25 ರಂದು ಬೆಳಿಗ್ಗೆ 10.30 ಗಂಟೆಗೆ ನೇರ ಸಂದರ್ಶನದ ಮೂಲಕ ಉದ್ಯೋಗ ಮೇಳವನ್ನು ಏರ್ಪಡಿಸಿಲಾಗಿದೆ.
ಸಂದರ್ಶನದಲ್ಲಿ ಇನ್‌ಸ್ಟಾ ಕಾರ್ಟ್, ಕಾನ್ಫಿಡೆಂಟ್ ಡೆಂಟಲ್ ಇಕ್ಯೂಪ್‌ಮೆಂಟ್ ಲಿ., ಮೆಡಿಸೇವ್ ಹೆಲ್ತ್, ರಿಲಿಯಾನ್ಸ್ ರಿಟೇಲ್, ಫಿನ್‌ಕೇರ್ ಸ್ಮಾಲ್ ಫಿನಾನ್ಸ್, ದಿ ಮಿಲೆನಿಯಂ ಎಂಟರ್ ಪ್ರೈಸಸ್ ಮತ್ತು ನೀಡ್ಸ್ ಸಂಸ್ಥೆಯವರು ಭಾಗವಹಿಸಲಿದ್ದಾರೆ.
ಉದ್ಯೋಗಕಾಂಕ್ಷಿಗಳು 18 ರಿಂದ 28 ವರ್ಷದೊಳಗಿನವರಾಗಿದ್ದು ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಆಸಕ್ತರು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ, #115/364, ಪ್ರಕಾಶ್‌ಚಂದ್ರ ಕಾಂಪ್ಲೆಕ್ಸ್, ಕೆ.ಎಸ್.ಆರ್.ಟಿ.ಸಿ ಬಸ್‌ಡಿಪೋ ಎದುರು, ಅರ್ಚಕರಹಳ್ಳಿ, ಬಿ.ಎಂ ರಸ್ತೆ, ರಾಮನಗರ, ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜಾರಾಗಿ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.