“ನಾವೂ ಮನುಷ್ಯರೇ, ನಮ್ಮನ್ನೂ ಬದುಕುಲು ಬಿಡಿ, ಇಲ್ಲವಾದರೆ ವಿಷ ಕೊಡಿ” ಇರುಳಿಗ ಸಮುದಾಯದ ಮಹಿಳೆಯರ ಆಕ್ರಂದನ
ರಾಮನಗರ : “ನಾವೂ ಮನುಷ್ಯರೇ, ನಮ್ಮನ್ನೂ ಬದುಕುಲು ಬಿಡಿ, ಇಲ್ಲವಾದರೆ ವಿಷ ಕೊಡಿ” ಎಂದು ತಾಲ್ಲೂಕಿನ ಕೈಲಾಂಚ ಹೋಬಳಿಯ ಗೊಲ್ಲರದೊಡ್ಡಿಯ ಇರುಳಿಗ ಬುಡಕಟ್ಟು ಸಮುದಾಯದ ಮಹಿಳೆಯರು ಇಲ್ಲಿನ ಮಿನಿವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿಗೆ ದಿನಾಂಕ 15-11-2021 ಹಾಗೂ 25-1-2022 ರಂದು ಮನವಿ ಪತ್ರ ನೀಡಿದ್ದು ಇಲ್ಲಿಯ ವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಹಾಗೂ ದಿನಾಂಕ: 25/02/2022 ರಂದು ನಡೆದ ತಾಲ್ಲೂಕು ಮಟ್ಟದ ಎಸ್ಸಿ ಎಸ್ಟಿ ಕೂದು ಕೊರತೆ ಸಭೆಯಲ್ಲಿ ಈ ವಿಷಯವನ್ನು ಪ್ರಸ್ಥಾಪಿಸಿದ್ದರೂ ಇಲ್ಲಿಯವರೆಗೂ ಇದ್ದರ ಬಗ್ಗೆ ಯಾವುದೇ ಕ್ರಮ ವಹಿಸದೇ ಇರುವುದರಿಂದ ನಮ್ಮ ಬುಡಕಟ್ಟು ಜನಾಂಗಕ್ಕೆ ಅನ್ಯಾಯ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಇರುಳಿಗ ಮಾತನಾಡಿ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ ನಾಗೋಹಳ್ಳಿ ದಾಖ್ಲೆ ಗೊಲ್ಲರದೊಡ್ಡಿ ಯಲ್ಲಿ ವಾಸವಿರುವ ಬುಡಕಟ್ಟು ಇರುಳಿಗ ಜನಾಂಗದ ನಮ್ಮಗೆ ಹಿಂದೆ 10 ಕುಟುಂಬಗಳಿಗೆ ಕೊಟ್ಟಿರುವ 30*40 ರ ಸೈಟ್ ಜಾಗದಲ್ಲಿ ಒದೊಂದು ಸೈಟ್ ನಲ್ಲಿ 3 ರಿಂದ 4 ಕುಟುಂಬಗಳು ಚಿಕ್ಕ-ಚಿಕ್ಕ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಈಗ ಅದೇ ಜಾಗದಲ್ಲಿ 45 ಕುಟುಂಬಗಳು ವಾಸವಿದ್ದು ಸರಿಯಾದ ರೀತಿಯಲ್ಲಿ ಮನೆ, ಶೌಚಾಲಯ ಮುಂತಾದ ಮೂಲಭೂತ ಶೌಕರ್ಯ ವ್ಯವಸ್ಥೆ ಇಲ್ಲದೆ ಬುದುಕುತ್ತಿರುವುದು ಶೋಚನಿಯ ಸಂಗಾತಿ ಎಂದರು.

8 ಅಡಿಯ ಕಾಲು ದಾರಿ ವಿಷಯಕ್ಕೆ ಸರ್ವೆ ಇಲಾಖೆಯ ಪ್ರಭಕರ್ ಎಂಬುವವರು ಪ್ರಭಾವಿಗಳ ಒತ್ತಡಕ್ಕೆ ಮಣಿದ್ದು ಸರಿಯಾಗಿ ಸರ್ವೆ ಮಾಡಿ ಜಾಗ ಗುರುತಿಸದೆ 10 ಅಡಿ ದಾರಿಗೆ ಜಾಗವಿದ್ದರು ಬೇಕು ಬೇಕಂತಲೆ ಮನೆಯೊಳಗೆ ದಾರಿ ಇದೆ ಎಂದು ತಪ್ಪು- ತಪ್ಪು ಸರ್ವೆ ಮಾಡಿರುತ್ತಾರೆ, ಎಂದು ಆರೋಪಿಸಿದರು.
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ ನಾಗೋಹಳ್ಳಿ ದಾಖ್ಲೆ ಸರ್ವೆ ನಂ 39 ರ ಗೊಮಾಳ ಜಾಗವನ್ನು ಗೊಲ್ಲರದೊಡ್ಡಿ ಸುತ್ತ-ಮುತ್ತ ಪ್ರಭಾವಿಗಳು ಆಕ್ರಮಿಸಿ ತಂತಿ ಬೇಲಿ ಹಾಕಿಕೊಂಡಿರುವುದರಿಂದ ನಮಗೆ ಶೌಚಾ ಮಾಡಲು ಸ್ಥಳವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದರು.
ಆದ್ದರಿಂದ ತಾವೂಗಳೇ ಬಂದು ಮುಂದೆ ನಿಂತು ಸರಿಯಾದ ರೀತಿಯಲ್ಲಿ ಗೊಲ್ಲರದೊಡ್ಡಿ ಬಳಿಯ ನಾಗೊಹಳ್ಳಿ ಸರ್ವೆ ನಂಬರ್ 39 ರ ಸರ್ಕಾರಿ ಗೊಮಾಳ ಜಾಗವನ್ನು ಸರ್ವೆ ಮಾಡಿ ನಮಗೆ ಸರಿಯಾದ ರೀತಿಯಲ್ಲಿ ವಾಸಿಸಲು ಯೋಗ್ಯವಾದ ನಿವೇಶನ, ಶೌಚಾಲಯ ಮುಂತಾದ ಮೂಲಭೂತ ಸೌರ್ಕಾಯ ವನ್ನು ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗೊಲ್ಲರದೊಡ್ಡಿಯ ಇರುಳಿಗ ಬುಡಕಟ್ಟು ಸಮುದಾಯದ ತಾಯಮ್ಮ, ಶಿವಮ್ಮ, ಹಲಗಮ್ಮ, ಚಿನ್ನಹಲಗಯ್ಯ, ತಾಯಮ್ಮ, ಚಿಕ್ಕಹಲಗಯ್ಯ, ವೆಂಕಟಪ್ಪ, ಚೌಮಮ್ಮ, ಅವಮಾದಮ್ಮ, ಹಲಗಮ್ಮ, ಲಕ್ಷ್ಮಮ್ಮ, ಮಹದೇವಿ, ಕುಮಾರ್, ಅಲಗಯ್ಯ, ಗೌರಮ್ಮ, ನವಣಯ್ಯ, ಜೈಯಶೀಲಾ, ಅನಿತಾ, ಧರ್ಮಯ್ಯ, ಬಸವರಾಜಮ್ಮ, ಶಿವಕುಮಾರ್, ಅಂದಾನಿ, ಸಣ್ಣಮ್ಮ, ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜೆ.ಎಲ್. ಶಿವರಾಜು ಇತರರು ಪಾಲ್ಗೊಂಡಿದ್ದರು.