ಕನಕಪುರ : 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಕನಕಪುರ : ಬೀದಿ ನಾಯಿಗಳ ದಾಳಿಗೆ 7 ವರ್ಷದ ಬಾಲಕ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಬಾಣಂತ ಮಾರಮ್ಮ ಬಡಾವಣೆಯಲ್ಲಿ ನಡೆದಿದೆ.

ನಗರದ ವಾರ್ಡ್ ನಂ. 22 ಬಾಣಂತ ಮಾರಮ್ಮ ಬಡಾವಣೆಯ ಸುದರ್ಶನ್ ಎಂಬ ಏಳು ವರ್ಷದ ಬಾಲಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ ನಗರದ ಮೆಗಳ ಬಿದಿಯ ಬಾಣಂತ ಮಾರಮ್ಮ ಬಡಾವಣೆಯಲ್ಲಿ ಶನಿವಾರ ಸಂಜೆ ನಾಲ್ಕರ ಸಮಯದಲ್ಲಿ ಸುದರ್ಶನ್ ಎಂಬ ಬಾಲಕನ ಮೇಲೆ ಏಕಾಏಕಿ ಎರಗಿದ ನಾಲ್ಕರಿಂದ ಐದು ಬೀದಿನಾಯಿಗಳು ಬಾಲಕನ ತೊಡೆ ಮತ್ತು ಮೋಣಕಾಲು ಭಾಗದಲ್ಲಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ ಘಟನೆಯಿಂದ ಅಕ್ಕ-ಪಕ್ಕದ ಜನರು ಬೆಚ್ಚಿಬಿದ್ದಿದ್ದಾರೆ.
ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ:
ನಗರದಲ್ಲಿ ಮೀತಿ ಮೀರಿರುವ ಬೀದಿ ನಾಯಿಗಳ ಸಂತತಿಗೆ ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ಕಳೆದ ಹಲವಾರು ವರ್ಷಗಳಿಂದ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಬೀದಿ ನಾಯಿಗಳ ಸಂತತಿ ಹೆಚ್ಚಾಗಲು ಕಾರಣ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಇದೇ ಮೋದಲಲ್ಲ. ಈ ಹಿಂದೆಯೂ ಇಂತಹ ಆನೇಕ ಘಟನೆಗಳು ನಡೆದಿವೆ ಈ ಘಟನೆಯಿಂದ ಪೋಷಕರು ಮಕ್ಕಳನ್ನು ಮನೆಯಿಂದ ಹೋರಗೆ ಬಿಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ ಹೊಣಗೇಡಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಬೇಕು ಎಂಬುದು ಸ್ಥಳಿಯರ ಪ್ರಶ್ನೆ ನಗರ ಸಭೆ ಅಧಿಕಾರಿಗಳಿಗೆ ನಗರದ ಸಾರ್ವಜನಿಕರ ರಕ್ಷಣೆ ಬಗ್ಗೆ ಕಿಂಚ್ಚಿತ್ತು ಕಾಳಜಿಯೇ ಇಲ್ಲ ಈ ಘಟನೆಯಿಂದ ಮಕ್ಕಳು ಮಹಿಳೆಯರು ಜೀವ ಕೈಯಲ್ಲಿಡಿದುಕೊಂಡು ರಸ್ತೆಯಲ್ಲಿ ಓಡಾಡಲು ವಾತಾವರಣ ನಿರ್ಮಾಣವಾಗಿದೆ ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ನಗರ ಸಭೆ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ.

ನಗರಸಭೆ ಅಧಿಕಾರಿಗಳು ಹೇಳುವ ಹಾಗೆ ನಗರದಲ್ಲಿ ಸುಮಾರು ಐದು ಸಾವಿರ ಬೀದಿನಾಯಿಗಳಿವೆ ಆದರೆ ಈವರೆಗೂ ಅವುಗಳ ಸಂತತಿ ನಿಯಂತ್ರಣಕ್ಕೆ ತರಲು ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಮಾತ್ರ ವಿಪರ್ಯಾಸ. ಇಷ್ಟಾದರೂ ಎಚ್ಚೆತ್ತುಕೊಳ್ಳದ ನಗರ ಸಭೆ ಅಧಿಕಾರಿಗಳು ಕಳೆದ ಹತ್ತಾರು ವರ್ಷಗಳಿಂದ ಬೀದಿನಾಯಿಗಳ ಸಂತತಿಗೆ ಕಡಿವಾಣ ಹಾಕುವ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದು ದೌರ್ಭಾಗ್ಯವಾಗಿದೆ.
ನಗರದ ಬಾಣಂತ ಮಾರಮ್ಮ ಬಡಾವಣೆಯಲ್ಲಿ ಬೀದಿನಾಯಿ ದಾಳಿಯಿಂದ ಗಾಯಗೊಂಡಿರುವ ಬಾಲಕನನ್ನು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಗರಸಭಾ ಸದಸ್ಯರು ಬೀದಿನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಅನೇಕ ಸಂಸ್ಥೆಗಳಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದೆವೆ. ಆದರೆ ಪ್ರಯೋಜನವಾಗಿಲ್ಲ ಇನ್ನಾದರೂ ಅಧ್ಯಕ್ಷರು ಮತ್ತು ಪೌರಾಯುಕ್ತರು ಬೀದಿನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.