ಶಾಸಕ ಜಮೀರ್ ಆಹಮದ್ ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ : ಎಚ್.ಸಿ. ಬಾಲಕೃಷ್ಣ
ಮಾಗಡಿ : ಶಾಸಕ ಜಮೀರು ಆಹಮದ್ ಖಾನ್ ಜೆಡಿಎಸ್ಪಕ್ಷಕ್ಕೆ ಸೇರುವ ಬಗ್ಗೆ ಯಾವುದೆ ಚರ್ಚೆನಡೆಸಿಲ್ಲ ಇದು ಮಾದ್ಯಮದ ಸೃಷ್ಟಿ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಮಹಂತೇಶ್ ಅವರಿಂದ ವೀರಶೈವ ಬ್ಯಾಂಕ್ಗೆ ಜೆರಾಕ್ಸ್ ಮಿಷನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಜಮೀರು ಆಹಮದ್ ಯಾವ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಅವರು ಹೋಗುವುದಾದರೆ ನನ್ನ ಬಳಿ ಚರ್ಚೆಮಾಡುತ್ತಿದ್ದರು ಇದು ವರೆಗೂ ಚರ್ಚೆಮಾಡಿಲ್ಲ ಅವರು ಜೆಡಿಎಸ್ ಪಕ್ಷಕ್ಕೆ ಸೇರುವ ಬಗ್ಗೆ ಮಾದ್ಯಮದ ಸೃಷ್ಟಿಯಾಗಿದೆ ಎಂದುಕೊಂಡಿದ್ದೇನೆ ಎಂದು ಸ್ವಷ್ಟಪಡಿಸಿದರು.
ಶಾಸಕ ಜಮೀರು ಆಹಮದ್ ಖಾನ್ ಇಂದು ಮಾಗಡಿಗೆ ಬೇಟಿ ನೀಡಬೇಕಿತ್ತು ಹೈದರಾಬಾದ್ ನಲ್ಲಿ ಅವರ ಕುಟುಂಬದಖಾಸಗಿ ಕಾರ್ಯಕ್ರಮ ಇರುವುದರಿಂದ ಮಾಗಡಿಗೆ ಬರಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಅವರನ್ನು ಕರೆಸುತ್ತೇವೆ ಈ ವೇಳೆ ಮಾದ್ಯಮದವರೆ ಪ್ರಶ್ನಿಸಿ ಎಂದು ಮಾದ್ಯಮದವರನ್ನು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಇದರ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರು ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದು 2023ಕ್ಕೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಮುನ್ಸೂಚನೆ ಇರುವ ವೇಳೆ ಕಾಂಗ್ರೆಸ್ ಶಾಸಕರು ಬೇರೆ ಪಕ್ಷಗಳಿಗೆ ಏಕೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟ, ಈ ನಾಡು ಈ ತಾಲೂಕು ಅಭಿವೃದ್ದಿಗೊಂಡಿರುವುದು ಕಾಂಗ್ರೆಸ್ ಪಕ್ಷದಿಂದ ಎಂದರು.
ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಮಹಂತೇಶ್ ಮಾತನಾಡಿ, ರೋಟರಿ ಮಾಗಡಿ ಸೆಂಟ್ರಲ್ ತಾಲೂಕಿನಾದ್ಯಂತ ಶಾಲಾ, ಕಾಲೇಜುಗಳಿಗೆ ಬೇಕಾದ ಶೌಚಾಲಯ, ಕಾಪೋಂಡ್ ನಿರ್ಮಾಣ, ಶುದ್ದಕುಡಿಯುವ ನೀರಿನ ಘಟಕ, ಸೇರಿದಂತೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಒತ್ತು ನೀಡಲಾಗಿದೆ, ವೀರಶೈವ ಬ್ಯಾಂಕ್ಗೆ ಜೆರಾಕ್ಸ್ ಮಿಷನ್ ಅಗತ್ಯವಾಗಿರುವುದರಿಂದ ಇಂದು ನೀಡಲಾಗಿದೆ ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಸಹಕಾರಿ ಸಂಘ, ಸಂಸ್ಥೆಗಳಿಗೆ ವಿತರಿಸಲು ಚಿಂತಿಸಲಾಗಿದೆ ಎಂದರು.
ಜಿ.ಪಂ. ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಬೆಳಗುಂಬ ವಿಜಯ್ ಕುಮಾರು, ಪುರಸಭೆ ಸದಸ್ಯರಾದ ರಿಯಾಜ್, ಶಬೀರ್, ವೀರಶೈವ ಮುಖಂಡ ಪೊಲೀಸ್ ವಿಜಯ್ ಕುಮಾರು,ಸಮಾಜ ಸೇವಕ ದಂಡೇನಹಳ್ಳಿ ದೀಪು, ವೀರಶೈವ ಬ್ಯಾಂಕ್ ನಿರ್ದೆಶಕ ಎಂ.ಎಸ್.ಸಿದ್ದಲಿಂಗೇಶ್ವರ್, ಶಿವಪ್ಪ, ಡಿ.ಸಿ.ಕಾರ್ತಿಕ್, ನರಸಿಂಹಮೂರ್ತಿ, ಗಿರೀಶ್ ಇತರರು ಇದ್ದರು.