ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ : 8.45.601 ರೂ. ಲಾಭ

ರಾಮನಗರ : ರಮೇಶ್ ಅವರ ಅಧ್ಯಕ್ಷತೆಯಲ್ಲಿ 2020 – 21 ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.
ವಿಸ್ತರಣಾ ಅಧಿಕಾರಿಗಳಾದ ವಿನಯ್ ಅವರು ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿಯಾದ ಬಿ ಎಂ ಕುಮಾರ್ ರವರು 20 21 ನೇ ಸಾಲಿನ ಆಡಿಟ್ ವರದಿ ಜಮಾ-ಖರ್ಚು ಲಾಭಾಂಶದ ವನ್ನು ತಿಳಿಸಿದರು.
ಸಂಘಕ್ಕೆ ಹೊಸ ಸದಸ್ಯರ ಸೇರು ವಿಚಾರವಾಗಿ ಅರ್ಜಿ ಸಲ್ಲಿಸಿದರೆ ಅರ್ಹ ಫಲಾನುಭವಿಗಳಿಗೆ ಸದಸ್ಯತ್ವ ನೋಂದಣಿ ಮಾಡಿಕೊಡಬೇಕೆಂದು ಚಂದ್ರು ಅವರು ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ಮೇಲೆ ಒತ್ತಡ ಹೇರಿದರು.

ರಾಸುಗಳ ವಿಮೆ ವಿಚಾರದಲ್ಲಿ ತಮಗಾದ ನಷ್ಟದಿಂದ ಬಸವರಾಜ ಅವರು ವಿಸ್ತರಣಾ ಅಧಿಕಾರಿ ಕಾರ್ಯದರ್ಶಿ ಅಧ್ಯಕ್ಷರ ಮೇಲೆ ಕಿಡಿಕಾರಿದರು ಸಮಯಕ್ಕೆ ಸರಿಯಾಗಿ ರಾಸುಗಳ ವಿಮೆ ಮಾಡಿಸಲೇಬೇಕು ಆಗ್ರಹಿಸಿದರು.
ಕಾಲುಬಾಯಿ ರೋಗ ಹಾಗಾಗಿ ಹೋಗುತ್ತಿರುವುದರಿಂದ ಸರಿಯಾದ ಸಮಯಕ್ಕೆ ರಾಶಿಗಳಿಗೆ ಲಸಿಕೆಗಳನ್ನು ಹಾಕಿಸಬೇಕೆಂದು ಶಿವನಂಜಪ್ಪನವರು ತಿಳಿಸಿದರು.
ಒಂದು ವರ್ಷದಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ 10 ಜನರನ್ನು ಸನ್ಮಾನಿಸಲಾಯಿತು.
ನಿರ್ದೇಶಕರುಗಳಾದ ಬಿ ಪಿ ಕೆಂಪಣ್ಣ, ಗಂಗಾಧರ,ನಾಗರಾಜು, ಕೆಂಪಯ್ಯ ಸಿ,ಗೌರಮ್ಮ, ಶಿವಣ್ಣ ಬಿ ವಿ, ಗೌರಮ್ಮ, ಸುಮಿತ್ರಮ್ಮ ನವರು ಹಾಗೂ ಹಾಲು ಪರೀಕ್ಷೆ ಕರಾದ ಪ್ರವೀಣ್ ಬಿ ಸಿ ಶಿವಲಿಂಗಯ್ಯ ಇದ್ದರು.

Leave a Reply

Your email address will not be published. Required fields are marked *