ವಿಪ್ರೊ ಜಿಇ ಹೆಲ್ತ್ ಕೇರ್ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ಪಿಎಲ್ಐ ಅಡಿಯಲ್ಲಿ ನೂತನ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ
• 100 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ಆರಂಭವಾಗುತ್ತಿರುವ ಕಾರ್ಖಾನೆ ಆತ್ಮನಿರ್ಭರ ಭಾರತಕ್ಕಾಗಿ ಸರ್ಕಾರದ ಪಿಎಲ್ಐ ಯೋಜನೆಯಡಿ ಅನುಮೋದಿಸಲಾದ 15 ವೈದ್ಯಕೀಯ ಸಾಧನ ತಯಾರಕರಲ್ಲಿ ಈ ಗ್ರೀನ್ ಫೀಲ್ಡ್ ಸೌಲಭ್ಯವೂ ಒಂದಾಗಿದೆ.
• ಇ.ಎಸ್.ಡಿ.ಎಂ ಉದ್ಯಮದ ಬೆಳವಣಿಗೆಗೆ ನೆರವು ನೀಡುವ ಕರ್ನಾಟಕದ ಬದ್ಧತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಸಾಧನವಾಗಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಭಾರತದ ಬೆಂಗಳೂರಿನಲ್ಲಿ ವಿಪ್ರೊ ಜಿಇ ಹೆಲ್ತ್ ಕೇರ್ ನ ಉತ್ಪಾದನಾ ಸೌಲಭ್ಯವನ್ನು ಸ್ವಾಗತಿಸುತ್ತದೆ.
ಬೆಂಗಳೂರು : ಪ್ರಮುಖ ಜಾಗತಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಡಿಜಿಟಲ್ ಸೊಲ್ಯೂಷನ್ ಗಳ ಇನ್ನೊವೇಟರ್ ಆಗಿರುವ ವಿಪ್ರೊ ಜಿಇ ಹೆಲ್ತ್ ಕೇರ್ ಇಂದು ಬೆಂಗಳೂರಿನಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಭಾರತ ಸರ್ಕಾರದ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯಡಿ ಆರಂಭಿಸುತ್ತಿದೆ. ವಿಪ್ರೊ ಜಿಇ ಮೆಡಿಕಲ್ ಡಿವೈಸ್ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ (ಎಂಡಿಎಂ) ಎಂಬ ಹೊಸ ಘಟಕವು ‘ಆತ್ಮನಿರ್ಭರ ಭಾರತ’ದ ರಾಷ್ಟ್ರೀಯ ಕಾರ್ಯಸೂಚಿಗೆ ಹೊಂದಿಕೊಂಡಿದ್ದು, ಭಾರತದಲ್ಲಿ ವೈದ್ಯಕೀಯ ಸಾಧನಗಳ ಸ್ಥಳೀಯ ಉತ್ಪಾದನೆಯನ್ನು ಮತ್ತಷ್ಟು ಉತ್ತೇಜಿಸಲಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಕರ್ನಾಟಕದಲ್ಲಿ ಜಾಗತಿಕ ESDM ಇಕೋಸಿಸ್ಟಮ್ ಅನ್ನು ಸಕ್ರಿಯಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ವಿಪ್ರೋ ಜಿಇ ಹೆಲ್ತ್ ಕೇರ್ ನ ವೈದ್ಯಕೀಯ ಸಾಧನಗಳ ಉತ್ಪಾದನಾ ಘಟಕವನ್ನು ಉದ್ಘಾಟಿಸುವ ಮೂಲಕ ಎಲೆಕ್ಟ್ರಾನಿಕ್ಸ್, ಸಿಸ್ಟಮ್, ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ಕಾರ್ಯಕ್ರಮದ ಪ್ರಗತಿಯಲ್ಲಿ ತನ್ನ ಪಾಲುದಾರನ ಮೊದಲ ಅಸೋಸಿಯೇಷನ್ ಅನ್ನು ಸ್ವಾಗತಿಸಿದೆ. ಈ ಘಟಕವು ವಿಪ್ರೊ ಜಿಇ ಹೆಲ್ತ್ ಕೇರ್ ನ 100% ಅಂಗಸಂಸ್ಥೆಯಾಗಿದೆ. ಇದನ್ನು ಗ್ರೀನ್ ಫೀಲ್ಡ್ ಕಾನೂನು ಘಟಕವಾಗಿ ಸ್ಥಾಪಿಸಲಾಗಿದ್ದು, ಕಂಪನಿಯು ಇಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಿದೆ.
35000 ಚದರ ಅಡಿ ವಿಸ್ತೀರ್ಣದ ಈ ಕಾರ್ಖಾನೆಯನ್ನು ಸಿಟಿ ಯಂತ್ರಗಳು, ಕ್ಯಾಥ್ಲ್ಯಾಬ್ ಉಪಕರಣಗಳು, ಅಲ್ಟ್ರಾಸೌಂಡ್ ಸ್ಕ್ಯಾನರ್ಸ್, ರೋಗಿ ಮೇಲ್ವಿಚಾರಣಾ ಸೊಲ್ಯೂಷನ್ , ಇಸಿಜಿ ಯಂತ್ರ ಮತ್ತು ವೆಂಟಿಲೇಟರ್ ಗಳನ್ನು ತಯಾರಿಸಲು 24/7 ಕಾರ್ಯಾಚರಣೆಗೆ ಸ್ಥಾಪಿಸಲಾಗಿದೆ. ವೈದ್ಯಕೀಯ ಸಾಧನಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಇದು ಸ್ವಯಂಚಾಲಿತ ಪರೀಕ್ಷಕರನ್ನು ಹೊಂದಿದೆ. ಇದು ಪ್ರಸ್ತುತ ತನ್ನ ಶಾಪ್ ಫ್ಲೋರ್ ನಲ್ಲಿ 35 ಉದ್ಯೋಗಿಗಳನ್ನು ಹೊಂದಿದೆ. ಇದು ಮುಂದಿನ 3 ರಿಂದ 3 ವರ್ಷಗಳಲ್ಲಿ 100 ಕ್ಕೆ ಏರುವ ನಿರೀಕ್ಷೆಯಿದೆ.

ವಿಪ್ರೊ ಜಿಇ ಹೆಲ್ತ್ ಕೇರ್ ನ ಅಧ್ಯಕ್ಷ ಮತ್ತು ವಿಪ್ರೊ ಎಂಟರ್ಪ್ರೈಸಸ್ ನ ಅಧ್ಯಕ್ಷರಾದ ಅಜೀಂ ಪ್ರೇಮ್ ಜಿ ಅವರು ಈ ಕುರಿತು ಮಾತನಾಡಿ ” ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ಜಾಗತಿಕ ಪ್ರಾಮುಖ್ಯತೆಯನ್ನು ಪಡೆಯುವಲ್ಲಿ ಭಾರತವು ತ್ವರಿತ ಬೆಳವಣಿಗೆಯ ಹಾದಿಯಲ್ಲಿದೆ. ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯ ಬೆಂಬಲದೊಂದಿಗೆ ವಿಪ್ರೊ ಜಿಇ ಹೆಲ್ತ್ ಕೇರ್ ನ ಹೊಸ ಕಾರ್ಖಾನೆಯು ಆರೋಗ್ಯ ಸೇವಾ ಪೂರೈಕೆದಾರರಿಗೆ ಸ್ಥಳೀಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ತನ್ನ ನೈಜ ಸಾಮರ್ಥ್ಯವನ್ನು ಅರಿತುಕೊಳ್ಳಲು ಭಾರತದಲ್ಲಿನ ಆರೋಗ್ಯ ಪರಿಸರ ವ್ಯವಸ್ಥೆಗೆ ಸಹಾಯ ಮಾಡುತ್ತದೆ” ಎಂದರು.
ವಿಪ್ರೊ ಜಿಇ ಹೆಲ್ತ್ ಕೇರ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರವಣ್ ಸುಬ್ರಮಣ್ಯಂ ಅವರು ಮಾತನಾಡಿ, “ಆತ್ಮನಿರ್ಭರ ಭಾರತದ ಬಗ್ಗೆ ನಮ್ಮ ನಿರಂತರ ಬದ್ಧತೆಗೆ ಈ ನೂತನ ಕಾರ್ಯಕ್ರಮ ಸಾಕ್ಷಿಯಾಗಿದೆ. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಒಂದು ಹೆಜ್ಜೆ ಮುಂದಿದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಉಪಕ್ರಮಗಳನ್ನು ನಾವು ಶ್ಲಾಘಿಸುತ್ತೇವೆ. ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ 2022 ರ ಹೊಸ ಕರಡು ಭಾರತದ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವತ್ತ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಹಾಗೂ ವಿಪ್ರೊ ಜಿಇ ಹೆಲ್ತ್ ಕೇರ್ ನ ನಾವು ಭಾರತದಲ್ಲಿ ಮೆಡ್ ಟೆಕ್ ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದೇವೆ ಎಂದರು.
ತಮ್ಮ ವರ್ಚುವಲ್ ಭಾಷಣದಲ್ಲಿ ಪ್ರತಿಕ್ರಿಯಿಸಿದ ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ, ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಅವರು, ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಸಮುದಾಯಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ವಿಪ್ರೊ ಜಿಇ ಹೆಲ್ತ್ ಕೇರ್ ನೀಡಿದ ಕೊಡುಗೆಗಾಗಿ ನಾವು ವಿಪ್ರೋ ಜಿಇ ಹೆಲ್ತ್ ಕೇರ್ ಅನ್ನು ಅಭಿನಂದಿಸುತ್ತೇವೆ. ನಮ್ಮ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ, ಇಎಸ್ ಡಿಎಂ ವಲಯವನ್ನು ಹೆಚ್ಚಿಸುವ ಮತ್ತು ಈ ಪ್ರದೇಶದ ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನಗಳಿಗೆ ನಾವು ನಿರಂತರ ಬೆಂಬಲವನ್ನು ಒದಗಿಸುತ್ತೇವೆ ಎಂದರು.
ಜಿಇ ಹೆಲ್ತ್ ಕೇರ್ ನ ದಕ್ಷಿಣ ಏಷ್ಯಾದ ಜಿಇಬಿಇಎಲ್ ಮತ್ತು ಐಎಸ್ಸಿಯ ಜನರಲ್ ಮ್ಯಾನೇಜರ್ ಮಹೇಶ್ ಕಾಪ್ರಿ ಅವರು ಮಾತನಾಡಿ, ವೈದ್ಯಕೀಯ ಸಾಧನಗಳಿಗಾಗಿ ದೇಶದ ಆಮದು ಅವಲಂಬನೆ 75-80% ರಷ್ಟಿದೆ. ಭಾರತವು ಪ್ರಮುಖ ಮೆಡ್ ಟೆಕ್ ಸಾಧನಗಳ ಮಾರುಕಟ್ಟೆಯಾಗಿ ಶ್ರೇಣಿಗಳನ್ನು ಹೆಚ್ಚಿಸಲು ಸ್ಥಳೀಯ ಆವಿಷ್ಕಾರ ಮತ್ತು ಉತ್ಪಾದನೆ ಪ್ರಮುಖವಾಗಿದೆ. ನಮ್ಮ ಹೊಸ ಕಾರ್ಖಾನೆಯು ಭಾರತದ ಸ್ವಾವಲಂಬನೆಯ ಗುರಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ಉತ್ಪನ್ನ ಅಭಿವೃದ್ಧಿ ನಕ್ಷೆಯಲ್ಲಿ ಭಾರತದ ಪ್ರೊಫೈಲ್ ಅನ್ನು ವೇಗಗೊಳಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ವಿದ್ಯುನ್ಮಾನ, ಐಟಿ ಬಿಟಿ ಎಸ್ ಅಂಡ್ ಟಿ ವಿಭಾಗದ ಎಸಿಎಸ್ ಡಾ.ಇ.ವಿ.ರಮಣ ರೆಡ್ಡಿ ಅವರು “ಕರ್ನಾಟಕವು ಯಾವಾಗಲೂ ದೇಶದ ತಾಂತ್ರಿಕ ಪ್ರಗತಿಯನ್ನು ಮುನ್ನಡೆಸಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದ ನೀತಿ ಉಪಕ್ರಮಗಳು ಹೆಚ್ಚುವರಿಯಾಗಿ ಇಎಸ್ ಡಿಎಂ ವಲಯದ ಬೆಳವಣಿಗೆಯನ್ನು ಉತ್ತೇಜಿಸುವ ಜೊತೆಗೆ ಉತ್ಕೃಷ್ಟ ತಂತ್ರಜ್ಞಾನ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ. ಕೈಗಾರಿಕೆ 4.0 ಮತ್ತು ವೈದ್ಯಕೀಯ ಸಾಧನಗಳ ವಲಯವು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ಸಾಮರ್ಥ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಈ ಬೆಳವಣಿಗೆಯನ್ನು ಪೋಷಿಸಲು ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ರಚಿಸುವುದು ರಾಷ್ಟ್ರವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ. ವಿಪ್ರೋ ಜಿಇ ಹೆಲ್ತ್ ಕೇರ್ ನ ಈ ರೀತಿಯ ಉಪಕ್ರಮಗಳು ರಾಜ್ಯವನ್ನು ನಾವಿನ್ಯತೆ ಮತ್ತು ಬೆಳವಣಿಗೆಯ ಕೇಂದ್ರ ಬಿಂದುವನ್ನಾಗಿ ಮಾಡುವತ್ತ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಕೆಡಿಇಎಂನ ಇಎಸ್ ಡಿಎಂ ನೇತೃತ್ವದ ಕಾರ್ಯಕ್ರಮಗಳನ್ನು ಉದ್ಯಮವು ಸ್ವೀಕರಿಸಿರುವುದು ರಾಜ್ಯದ ಐಟಿ ಮತ್ತು ಇಎಸ್ ಡಿಎಂ ವಲಯವನ್ನು ನಿರ್ಮಿಸಲು ಮತ್ತು ಅದನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಸಕಾರಾತ್ಮಕ ಸಂಕೇತವಾಗಿದೆ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಅಧ್ಯಕ್ಷರಾದ ಶ್ರೀ ಬಿ.ವಿ.ನಾಯ್ಡು ಅವರು ಮಾತನಾಡಿ ಈ ಘಟಕದ ಉದ್ಘಾಟನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, “ಕೆಡಿಇಎಂ ಯಾವಾಗಲೂ ನಾವಿನ್ಯತೆ, ಕೌಶಲ್ಯ ಅಭಿವೃದ್ಧಿ, ನವೋದ್ಯಮ ಮತ್ತು ಕರ್ನಾಟಕದ ಕ್ಲಸ್ಟರ್ ಗಳಲ್ಲಿನ ಇಎಸ್ ಡಿಎಂ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಗುರುತಿಸಲು ಮತ್ತು ಪೋಷಿಸಲು ಶ್ರಮಿಸುತ್ತಿದೆ. ಕಲಿಯಲು, ಆವಿಷ್ಕಾರ ಮಾಡಲು ಮತ್ತು ರಾಷ್ಟ್ರದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಲು ರಾಜ್ಯವು ಅಪಾರ ಉತ್ಸಾಹ ಮತ್ತು ಹಸಿವನ್ನು ಹೊಂದಿದೆ ಎಂದು ನಾವು ನಂಬುತ್ತೇವೆ. ನಾವು ನಮ್ಮ ಪ್ರಗತಿಯಲ್ಲಿ ಪಾಲುದಾರ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಉದ್ಯಮದ ನಾಯಕರು ಪಡೆದ ಅಭೂತಪೂರ್ವ ಪ್ರತಿಕ್ರಿಯೆಯು ಕರ್ನಾಟಕದಲ್ಲಿ ಬಲವಾದ ESDM ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಭರವಸೆ ನೀಡಿತು. ವಿಪ್ರೊ ಜಿಇ ಹೆಲ್ತ್ ಕೇರ್ ನ ಹೊಸ ಉತ್ಪಾದನಾ ಘಟಕದ ಉದ್ಘಾಟನೆಯು, ನಮ್ಮ ಮೊದಲ ಪಾಲುದಾರ, ನಮ್ಮ ಅತ್ಯಂತ ಸಮರ್ಥ ಮತ್ತು ವೈವಿಧ್ಯಮಯ ಕಾರ್ಯಪಡೆಗೆ ಪೋಷಕ ವೇದಿಕೆಯನ್ನು ನಿರ್ಮಿಸುವಾಗ ಈ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವತ್ತ ಒಂದು ಹೆಜ್ಜೆಯಾಗಿದೆ ಎಂದರು.
ಇಎಸ್ ಡಿಎಂ ಕ್ಷೇತ್ರದಲ್ಲಿ ಬಲವಾದ ಪ್ರತಿಭೆಯ ಕೊಳವನ್ನು ಪೋಷಿಸುವಲ್ಲಿ ಕೆಡಿಇಎಂನ ಕೊಡುಗೆಯ ಬಗ್ಗೆ ಮಾತನಾಡಿದ ಕೆಡಿಇಎಂನ ಸಿಇಒ ಶ್ರೀ ಸಂಜೀವ್ ಗುಪ್ತಾ ಅವರು “ಕರ್ನಾಟಕವನ್ನು ಇಎಸ್ ಡಿಎಂನ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಜ್ಞೆ ಮಾಡುವಲ್ಲಿ ಕೆಡಿಇಎಂನ ಪ್ರಗತಿಯಲ್ಲಿರುವ ಪಾಲುದಾರರು ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ವಿಪ್ರೊ ಜಿಇ ಹೆಲ್ತ್ ಕೇರ್ ಈ ಜವಾಬ್ದಾರಿಯನ್ನು ಮುನ್ನಡೆಸುವಲ್ಲಿ ಮೊದಲ ಪಾಲುದಾರರಲ್ಲಿ ಒಂದಾಗಿದೆ. ವೈವಿಧ್ಯತೆಯ ಮೇಲೆ ಗಮನ ಕೇಂದ್ರೀಕರಿಸಿ ವೈದ್ಯಕೀಯ ಸಾಧನಗಳಿಗಾಗಿ ಉತ್ಪಾದನಾ ಸ್ಥಾವರದ ಹೆಗ್ಗುರುತು ಯೋಜನೆಯೊಂದಿಗೆ, ರಾಷ್ಟ್ರದ ವೈವಿಧ್ಯಮಯ ಪ್ರತಿಭೆಯ ಶಕ್ತಿ ಮತ್ತು ಅವರ ಅಸಾಧಾರಣ ಸಾಮರ್ಥ್ಯಗಳನ್ನು ಗುರುತಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತದಲ್ಲಿ ಅಭಿವೃದ್ಧಿಯ ಮುಂದಿನ ಅಲೆಯ ಮೇಲೆ ಪರಿಣಾಮ ಬೀರುವ ಮತ್ತು ಪ್ರಜ್ವಲಿಸುವ ಬಿಯಾಂಡ್ ಬೆಂಗಳೂರು ದೃಷ್ಟಿಕೋನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉದ್ಯಮದ ಚಿಂತಕರ ಚಾವಡಿಯೊಂದಿಗೆ ಪಾಲುದಾರರಾಗಲು ಕೆಡಿಇಎಂನಲ್ಲಿ ನಾವು ತುಂಬಾ ಸಂತೋಷಪಡುತ್ತೇವೆ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕರ್ನಾಟಕದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸಲು ಸ್ಥಾಪಿಸಲಾದ ವಿಶೇಷ ಘಟಕವಾಗಿದೆ. ಇದು ರಾಜ್ಯದ ಇಎಸ್ ಡಿಎಂ, ಐಟಿ, ಬಿಟಿ ಮತ್ತು ಎಸ್ & ಟಿ ವಲಯಗಳ ಬೆಳವಣಿಗೆ ಮತ್ತು ಹೂಡಿಕೆಗಳನ್ನು ತ್ವರಿತಗೊಳಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಜ್ಞಾನದ ಸೇತುವೆಯಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಮೊದಲ ರೀತಿಯ ಸಂಸ್ಥೆಯಾಗಿದೆ. ಎಲೆಕ್ಟ್ರಾನಿಕ್ಸ್, ಸಿಸ್ಟಮ್, ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್ ಡಿಎಂ) ಉದ್ಯಮದ ಬೆಳವಣಿಗೆಯನ್ನು ಅಳೆಯುವ ಕೆಡಿಇಎಂನ ಪ್ರಯತ್ನಗಳು ಉದ್ಯಮದಿಂದ ವ್ಯಾಪಕ ಅಂಗೀಕಾರವನ್ನು ಪಡೆದಿವೆ. ರಾಜ್ಯದಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು 18 ದೊಡ್ಡ ನಿಗಮಗಳು ಇದುವರೆಗೆ ತಮ್ಮ ಲೆಟರ್ ಆಫ್ ಇಂಟೆಂಟ್ (ಎಲ್ಒಐ) ಅನ್ನು ನೀಡಿವೆ. ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಇತ್ತೀಚೆಗೆ ತನ್ನ ಅರೆವಾಹಕ ನೀತಿಯನ್ನು ಘೋಷಿಸಿದ ಸಮಯದಲ್ಲಿ ಇದು ಬಂದಿದೆ.
ಕರ್ನಾಟಕ ಸರ್ಕಾರವು 2025 ರ ವೇಳೆಗೆ ಪ್ರಾದೇಶಿಕ ಜಿಡಿಪಿಯ 20% ಕ್ಕಿಂತ ಹೆಚ್ಚು ಕೊಡುಗೆ ನೀಡಲು ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ವಲಯವನ್ನು ಯೋಜಿಸಿದೆ. ಐಟಿ, ಇಆರ್ & ಡಿ, ಇಎಸ್ ಡಿಎಂ ಮತ್ತು ಕೌಶಲ್ಯ ಅಭಿವೃದ್ಧಿ ವಲಯಗಳಲ್ಲಿ ಹೊಸ ನೀತಿಗಳೊಂದಿಗೆ ರಾಜ್ಯ ಸರ್ಕಾರವು ತನ್ನ ಡಿಜಿಟಲ್ ಆರ್ಥಿಕತೆಯನ್ನು ರೂಪಿಸುತ್ತಿದೆ. ವಿಪ್ರೊ ಜಿಇ ಹೆಲ್ತ್ ಕೇರ್ ನ ಹೊಸ ಸೌಲಭ್ಯವು ಕರ್ನಾಟಕದಲ್ಲಿ ಇಎಸ್ ಡಿ0ಎಂ ವಲಯವನ್ನು ಉತ್ತೇಜಿಸುತ್ತದೆ. ಭಾರತದಲ್ಲಿ ತಯಾರಿಸಿದ ಅತ್ಯಾಧುನಿಕ ವೈದ್ಯಕೀಯ ಸಾಧನಗಳ ಮೂಲಕ ಜಗತ್ತಿಗೆ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ರಾಜ್ಯ ಸರ್ಕಾರದ ಗುರಿಯೊಂದಿಗೆ ಇದು ಹೊಂದಾಣಿಕೆಯಾಗಿದೆ.