ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ 2022-2025ನೇ ಸಾಲಿನ ಸಭಾಪತಿಯಾಗಿ ವಿಜಯಕುಮಾರ್ ಪಾಟೀಲ್ ಹಾಗೂ ಉಪಸಭಾಪತಿಯಾಗಿ ಆನಂದ್ ಎಸ್. ಜಿಗಜಿನ್ನಿ ಆಯ್ಕೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ 2022-2025ನೇ ಅವಧಿಗೆ ಸಭಾಪತಿಗಳಾಗಿ ರಾಯಚೂರು ಜಿಲ್ಲೆಯ ಶ್ರೀ ವಿಜಯಕುಮಾರ್ ಪಾಟೀಲ್ ಹಾಗೂ ಉಪಸಭಾಪತಿಗಳಾಗಿ ಬಾಗಲಕೋಟೆ ಜಿಲ್ಲೆಯ ಶ್ರೀ ಆನಂದ್ ಎಸ್. ಜಿಗಜಿನ್ನಿರವರು 30 ಜಿಲ್ಲಾ ಪ್ರತಿನಿಧಿಗಳ ಸಮ್ಮುಖದಲ್ಲಿ ಕರ್ನಾಟಕ ರೆಡ್ ಕ್ರಾಸ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿರುವ ಶ್ರೀ ವಿಜಯ ಕುಮಾರ್ ಪಾಟೀಲ್ ರವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಯಚೂರು ಜಿಲ್ಲಾ ಶಾಖೆಯಲ್ಲಿ ಸಭಾಪತಿಗಳಾಗಿ, ಕೇಂದ್ರ ಸಮಿತಿ ಸದಸ್ಯರು ಭಾರತ ಸೇವಾದಳ, ಮಾಜಿ ನಿರ್ದೆಶಕರು ಹಾಗೂ ಹಾಲಿ ಅಧ್ಯಕ್ಷರು ಜಿಲ್ಲಾ ಸಹಕಾರ ಒಕ್ಕೂಟ ನಿ. ರಾಯಚೂರು ಇನ್ನು ಮುಂತಾದ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಉತ್ತರ ಕರ್ನಾಟಕ ಪ್ರವಾಹ ಹಾಗೂ ಕೋವಿಡ್-19 ಸಂದರ್ಭದ ಪರಿಹಾರ ಕಾರ್ಯಗಳಲ್ಲಿ ಶ್ರೀಯುತರ ಪಾತ್ರ ಹಿರಿದಾದುದು.

ಉಪಸಭಾಪತಿಯಾಗಿ ಆಯ್ಕೆಯಾದ ಶ್ರೀ ಆನಂದ್ ಎಸ್. ಜಿಗಜಿನ್ನಿರವರು ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು 2019-2022ರ ಸಾಲಿನಲ್ಲಿ ರೆಡ್ ಕ್ರಾಸ್ ರಾಜ್ಯ ಶಾಖೆಯ ಗೌರವ ಖಜಾಂಚಿಯಾಗಿ ಹಲವಾರು ಮಹತ್ವದ ಕಾರ್ಯಕ್ರಮಗಳ ರೂವಾರಿಗಳಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡ ಶ್ರೀ ಆನಂದ್ ಎಸ್. ಜಿಗಜಿನ್ನಿರವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಾಗಲಕೋಟೆ ಜಿಲ್ಲಾ ಶಾಖೆಯ ಸಭಾಪತಿಗಳಾಗಿ ಮಾತ್ರವಲ್ಲದೇ, ಐ.ಎಫ್.ಡಬ್ಲೂ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಹೀಗೆ ಲಯನ್ಸ್ ಹಾಗೂ ರೋಟರಿಯಂತಹ ಅನೇಕ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಹೆಚ್.ಎಸ್. ಬಾಲಸುಬ್ರಮಣ್ಯ
ಪ್ರಧಾನ ಕಾರ್ಯದರ್ಶಿ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ,
ಕರ್ನಾಟಕ ರಾಜ್ಯ ಶಾಖೆ,
ಬೆಂಗಳೂರು

Leave a Reply

Your email address will not be published. Required fields are marked *