ಏ. 14ರಂದು ಬಸ್ ಶೆಲ್ಟರ್ ನಿರ್ಮಾಣಕ್ಕೆ ಶಂಕು ಸ್ಥಾಪನೆ : ಪ್ರಾಧಿಕಾರದಲ್ಲಿ 1.5 ಕೋಟಿಯಷ್ಟು ಹಣ ಸಂಗ್ರಹ : ಗರಡಿ ಮನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ : ಎಚ್ .ಎಸ್. ಮುರಳೀಧರ್
ರಾಮನಗರ : ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯಂದು ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಕಡೆ ಬಸ್ ಶೆಲ್ಟರ್ ಗುದ್ದಲಿ ಪೂಜೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಬನ್ನಿ ಮಂಟಪದಲ್ಲಿನ ಗರಡಿ ಮನೆಯನ್ನು ಉದ್ಘಾಟಿಸಲಾಗುವುದು ಎಂದು ಪ್ರಾಧಿಕಾರ ಅಧ್ಯಕ್ಷ ಎಚ್ .ಎಸ್. ಮುರಳೀಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕಡೆಗೆ ತೆರಳುವ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಪಿ.ಡಬ್ಲು.ಡಿ ವೃತ್ತ ಮತ್ತು ಐಜೂರು ವೃತ್ತದಲ್ಲಿ ಹಾಗೂ ಬೆಂಗಳೂರೂ ಕಡೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರೋಟರಿ-ಬಿಜಿಎಸ್ ಆಸ್ಪತ್ರೆಯ ಬಳಿ ಬಸ್ ಶೆಲ್ಟರ್ ನಿರ್ಮಿಸಲಾಗುವುದು ಎಂದರು.

ಮೈಸೂರು ಕಡೆಗೆ ತೆರಳುವ ಬಸ್‍ಗಳು ಐಜೂರು ವೃತ್ತದ ಬಳಿ ನಿಲ್ಲುತ್ತಿವೆ. ಬಿಸಿಲು, ಚಳಿ, ಗಾಳಿ,ಧೂಳು, ಮಳೆ ಎನ್ನದೆ ಪ್ರಯಾಣಿಕರು ರಸ್ತೆಯಲ್ಲೇ ಬಸ್‍ಗಾಗಿ ಕಾಯುತ್ತಿರ ಬೇಕು. ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಈ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರ ಮುಂದಾಗಿದೆ ಎಂದು ಹೇಳಿದರು.
ತಾವು ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಸ್ಥಿತಿ ಶೂನ್ಯದಲ್ಲಿತ್ತು. ಇಂದು ಪ್ರಾಧಿಕಾರ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ. ಸುಮಾರು 1.5 ಕೋಟಿಯಷ್ಟು ಹಣ ಸಂಗ್ರಹವಾಗಿದೆ . ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದು, ಜನರ ಸಹಕಾರವೂ ದೊರೆಯುತ್ತಿದೆ ಎಂದು ತಿಳಿಸಿದರು.
ಪ್ರಾಧಿಕಾರದ ಕಚೇರಿಯಲ್ಲಿ ಯಂತ್ರೋಪಕರಣಗಳು ಸಂಪೂರ್ಣವಾಗಿ ಸೌರ ವಿದ್ಯುತ್‍ನಿಂದ ಚಾಲನೆಯಲ್ಲಿದೆ. 40 ವಾಟ್ ಸಾಮಾಥ್ರ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಕೆಂಗಲ್ ಹನುಮಂತಯ್ಯ ಅಭಿವೃದ್ದಿ ಭವನದ ಮೇಲ್ಬಾಗ ಅಳವಡಿಸಲಾಗಿದೆ. ಇದೀಗ ಪ್ರಾಧಿಕಾರದ ಕಚೇರಿಯಲ್ಲಿ ಸೌರ ವಿದ್ಯುತ್‍ಬಳಕೆಯಲ್ಲಿದೆ. ಬೆಸ್ಕಾಂಗೆ ಹೆಚ್ಚುವರಿ ವಿದ್ಯುತ್ ನೀಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನಿರ್ದೇಶಕರಾದ ರಾಘವೇಂದ್ರ, ಕಾಳಪ್ಪ, ನಾಗೇಂದ್ರ, ಬಿಜೆಪಿ ನಗರ ಘಟಕ ಅಧ್ಯಕ್ಷ ಪಿ.ಶಿವಾನಂದ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್, ವಕೀಲ ವಿನೋದ್ ಭಗತ್ ಇದ್ದರು.