ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಗೊತ್ತಾಗದ ರೀತಿ ಸರ್ಕಾರ ಇರಬಾರದು. ಇವತ್ತು ಹಲಾಲ್ ಮಾಂಸ ಬೇಡ ಅಂತಾರೆ, ಜಟ್ಕಾ ತಿನ್ನಿ ಅಂತಾರೆ. ಈಗ ಅಜಾನ್ ಬಗ್ಗೆ ಮಾತನಾಡುತ್ತಿದ್ದಾರೆ, ಇದು ಸರಿಯಲ್ಲ : ವಾಟಾಳ್ ನಾಗರಾಜ್ ಆಕ್ರೋಶ
ರಾಮನಗರ : ಗ್ಯಾಸ್, ಪೆಟ್ರೋಲ್, ಡೀಸೆಲ್ ಅಡುಗೆ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ ಅದ್ಯಾವುದರ ಬಗ್ಗೆಯೂ ಚರ್ಚೆ ಇಲ್ಲ, ಚಕಾರ ಇಲ್ಲ. ಬೇಡದ ವಿಚಾರಗಳ ಬಗ್ಗೆ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಐಜೂರು ವೃತ್ತದಲ್ಲಿ ಸೋಮವಾರ ಕೇಂದ್ರ ಸರ್ಕಾರ ವಿರುದ್ದ ಖಾಲಿ ಗ್ಯಾಸ್ ಸಿಲಿಂಡರ್, ಖಾಲಿ ಎಣ್ಣೆ ಕ್ಯಾನ್ ಹಿಡಿದು, ಜೊತೆಗೆ ಪೆಟ್ರೋಲ್ ಹಾಗೂ ಡಿಸೇಲ್ ಹೆಚ್ಚಳ ಆಗುತ್ತಿರುವುದಕ್ಕೆ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪೆಟ್ರೋಲ್ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆ ಮಾಡುವ ಮೂಲಕ, ಸಾಮಾನ್ಯ ಜನರ ಬೆನ್ನುಮೂಳೆ ಮುರಿದಿದೆ, ರಾಜ್ಯ ಸರ್ಕಾರ ಏನ್ ಮಾಡ್ತಿದೆ. ಬೆಲೆ ಏರಿಕೆ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಎಂಬಾತ ಆಜಾನ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಮಸೀದಿಗಳಲ್ಲಿ ಧ್ವನಿವರ್ದಕ ಹಾಕಬಾರದೆಂದು ಹೇಳಿದ್ದಾನೆ. ಈಗ ಅದನ್ನ ಇಟ್ಟುಕೊಂಡು ಇಲ್ಲಿಯೂ ಸಹ ಧ್ವನಿ ಎತ್ತುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಒಳ್ಳೆಯದಲ್ಲ ಎಂದರು.
ನಮ್ಮ ಸಂಸ್ಕೃತಿಗೆ ಇದು ಒಳ್ಳೆಯದಲ್ಲ. ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಗೊತ್ತಾಗದ ರೀತಿ ಸರ್ಕಾರ ಇರಬಾರದು. ಇವತ್ತು ಹಲಾಲ್ ಮಾಂಸ ಬೇಡ ಅಂತಾರೆ, ಜಟ್ಕಾ ತಿನ್ನಿ ಅಂತಾರೆ. ಈಗ ಅಜಾನ್ ಬಗ್ಗೆ ಮಾತನಾಡುತ್ತಿದ್ದಾರೆ, ಇದು ಸರಿಯಲ್ಲಎಂದು ವಾಟಾಳ್ ನಾಗರಾಜ್ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ಇದಲ್ಲದೆಯೇ ಗ್ಯಾಸ್, ಪೆಟ್ರೋಲ್, ಡೀಸೆಲ್ ಅಡುಗೆ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ ಅದ್ಯಾವುದರ ಬಗ್ಗೆಯೂ ಚರ್ಚೆ ಇಲ್ಲ, ಚಕಾರ ಇಲ್ಲ. ಬೇಡದ ವಿಚಾರಗಳ ಬಗ್ಗೆ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯ ಜನರ ಬೆನ್ನುಮೂಳೆ ಮುರಿದಿದೆ, ರಾಜ್ಯ ಸರ್ಕಾರ ಏನ್ ಮಾಡ್ತಿದೆ. ಬೆಲೆ ಏರಿಕೆ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು ಎಂದು ಇದೇ ವೇಳೆ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಜಗದೀಶ್ ಐಜೂರು ರಾಜ್ಯ ಉಪಾಧ್ಯಕ್ಷರು ಕರುನಾಡ ಸೇನೆ, ಶ್ರೀಮತಿ ಗಾಯಿತ್ರಿ ಬಾಯಿ ಜಿಲ್ಲಾ ಮಹಿಳಾಧ್ಯಕ್ಷರು , ಸಿ.ಎಸ್ ಜಯಕುಮಾರ್ ಜಿಲ್ಲಾಧ್ಯಕ್ಷರು, ಜಯರಾಮು ಅಧ್ಯಕ್ಷರು ಜಿಲ್ಲಾ ದಲಿತಘಟಕ, ಸಮದ್ ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕದ, ಕನ್ನಡ ಚಳುವಳಿ ಪಾಥ೯ಸಾರಥಿ, ಮರಿಸ್ವಾಮಿ, ಯಶವಂತ ಇತರರು ಹಾಜರಿದ್ದರು.