ಭಾನುವಾರದಿಂದ ರಂಜಾನ್ ಉಪವಾಸ ಪ್ರಾರಂಭ
ರಾಮನಗರ : ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಉಪವಾಸ ಏಪ್ರಿಲ್ 3ರ ಭಾನುವಾರದಿಂದ ಆರಂಭಗೊಂಡಿದ್ದು, ಒಂದು ತಿಂಗಳು ಮುಂದುವರಿಯಲಿದೆ. ಶವ್ವಾಲ್ ತಿಂಗಳ ಒಂದರಂದು ಈದುಲ್ ಫಿತ್ರ್ ಆಚರಣೆ ನಡೆಯಲಿದೆ. ರಂಜಾನ್ ತಿಂಗಳು ಪೂರ್ತಿ ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಆಹಾರ ಸೇವನೆ ಮಾಡಿದರೆ ಮತ್ತೆ ಸೂರ್ಯಾಸ್ತಮಾನವಾದ ನಂತರವೇ ಆಹಾರ ಸೇವಿಸುವ ಪದ್ಧತಿ ರೂಢಿಯಲ್ಲಿದೆ. ಇದನ್ನು ಸಹರಿ ಮತ್ತು ಇಫ್ತಾರ್ ಎಂತಲೂ ಕರೆಯುತ್ತಾರೆ.
ಇಫ್ತಾರ್ ಎಂದರೆ ಉಪವಾಸ ತ್ಯಜಿಸುವುದು, ಫಿತ್ರು ಝಕಾತ್ ಎಂಬುವುದು ರಂಜಾನ್ ತಿಂಗಳ ಉಪವಾಸ ವ್ರತ ಪೂರ್ಣಗೊಂಡಾಗ ಕೊಡುವ ದಾನ, ಉಪವಾಸ ವ್ರತ ಕಾಲದಲ್ಲಿ ಆಗಿರಬಹುದಾದ ಪ್ರಮಾದಗಳಿಗೆ ಮತ್ತು ಅಶ್ಲೀಲ ಮಾತುಗಳಿಗೆ ಪ್ರಾಯಶ್ಚಿತ್ತವಾಗಲೆಂದು ಮತ್ತು ಬಡವರ, ನಿರ್ಗತಿಕರ ಊಟದ ವ್ಯವಸ್ಥೆ ಆಗಲೆಂದು ಪ್ರವಾದಿ ಮಹಮ್ಮದ್ ಅವರು ಫಿತ್ರ್ ಝಕಾತ್ ಅನ್ನು ತಮ್ಮ ಅನುಯಾಯಿಗಳ ಮೇಲೆ ಕಡ್ಡಾಯಗೊಳಿಸಿದ್ದು, ಅದನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ.