ರಾಮನಹಳ್ಳಿ ಡೇರಿ ನೂತನ ಅಧ್ಯಕ್ಷರಾಗಿ ಲೋಕೇಶ್, ಉಪಾಧ್ಯಕ್ಷರಾಗಿ ಮಂಗಳಗೌರಮ್ಮ ಅವಿರೋಧ ಆಯ್ಕೆ
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಎಸ್.ಲೋಕೇಶ್, ಉಪಾಧ್ಯಕ್ಷರಾಗಿ ಮಂಗಳಗೌರಮ್ಮ ಅವಿರೋಧ ಆಯ್ಕೆಯಾದರು.ಸಂಘದ ಆವರಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಎಸ್.ಲೋಕೇಶ್ ಹಾಗೂ ಮಂಗಳಗೌರಮ್ಮ ಅವರ ಹೊರತಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳಗೌರಮ್ಮ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎನ್.ಸುಭಾಷಿಣಿ ಅವರು ಘೋಷಣೆ ಮಾಡಿದರು.ಸಂಘದ ನಿರ್ದೇಶಕರಾದ ಮಾಜಿ ಅಧ್ಯಕ್ಷ ಆರ್.ಎ.ಗೋಪಾಲ್, ಆರ್. ಲೋಕೇಶ್, ಯಶೋಧಮ್ಮ, ಗುರುಮಲ್ಲಯ್ಯ, ರಾಮಕೃಷ್ಣಯ್ಯ, ಶಿವನಂಜಯ್ಯ,ನಾಗರಾಜು, ದಯಾನಂದ್,ಅರ್. ಪ್ರಸಾದ್, ಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.ಸಂಘದ ಮುಖ್ಯ ಕಾರ್ಯ ನಿರ್ವಾಹಕ ಆರ್.ಎಸ್.ರಮೇಶ್ ಹಾಗೂ ಡೇರಿ ಸಿಬ್ಬಂದಿ ಸುಗಮ ಚುನಾವಣೆಗೆ ಸಹಕಾರ ನೀಡಿದರು.ಎಂ.ಗೋಪಹಳ್ಳಿ ಗ್ರಾಪಂ ಅಧ್ಯಕ್ಷ ರಾಮಚಂದ್ರಯ್ಯ, ಸದಸ್ಯರಾದ ಸರೋಜಾ ನಾಗರಾಜು, ರಾಧಾ ಕುಮಾರ್, ಆರ್.ಎ.ಗೋಪಾಲ್,ಸ್ಥಳೀಯ ಮುಖಂಡರಾದ ಉಪನ್ಯಾಸಕ ಆರ್.ಎಸ್.ಗಿರೀಶ್, ತಾಪಂ ಮಾಜಿ ಸದಸ್ಯೆ ಗೀತಾ ಪುಟ್ಟರಾಜು, ಅಪ್ಪಾಜಿಗೌಡ, ಮಾದಯ್ಯ, ಗುರುಮಲ್ಲಯ್ಯ, ಅನಿಲ್, ಹೊಟ್ಟಪ್ಪ, ಸಿದ್ದರಾಜು, ಆರ್.ಸಿ.ನಾಗರಾಜು, ಪುರುಷೋತ್ತಮ್,ಕುಮಾರ್, ನವೀನ್ ಕುಮಾರ್, ಲಿಂಗೇಗೌಡ, ಬೋರಯ್ಯ, ಸಿದ್ದರಾಮಯ್ಯ ಸೇರಿದಂತೆ ಇನ್ನೂ ಅನೇಕರು ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಅವರನ್ನು ಅಭಿನಂದಿಸಿದರು.ಇದೇ ವೇಳೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಅವರ ಆಯ್ಕೆಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
ಸಂಘದ ಅಭಿವೃದ್ಧಿಗೆ ಆದ್ಯತೆ: ರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಆರ್.ಎಸ್.ಲೋಕೇಶ್ ಮಾತನಾಡಿ, ರಾಮನಹಳ್ಳಿಯ ಸಹಕಾರಿ ಧುರೀಣ ದಿ.ಆರ್.ಎಸ್.ನಾಗೇಶ್ ಅವರು ಹಾಕಿಕೊಟ್ಟ ಅಡಿಪಾಯ, ಮಾರ್ಗದರ್ಶನ, ಸಹಕಾರದೊಂದಿಗೆ ಸಂಘದ ಸದಸ್ಯರು, ನಿರ್ದೇಶಕರು ಹಾಗೂ ಗ್ರಾಮದ ಎಲ್ಲರೂ ಒಟ್ಟಾಗಿ ಸಹಕಾರ ಸಂಘದ ಸರ್ವತೋಮುಖ ಬೆಳವಣಿಗೆ ಹಾಗೂ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.