ಅಯೋಧ್ಯೆ ಕಾರ್ಯಕ್ರಮದಲ್ಲಿ ಡೋಲು ಕಲಾವಿದ ವಿಜಯ್ ಕುಮಾರ್ ಭಾಗಿ
ರಾಮನಗರ : ನಗರದ ಮಂಜುನಾಥನಗರದ ನಿವಾಸಿ ವಿಜಯ್ ಕುಮಾರ್ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ಏಪ್ರಿಲ್ 6 ರಿಂದ 11 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಾದಸ್ವರ ಮತ್ತು ಡೋಲು ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ.
ಇವರ ಜೊತೆಗೆ ರಾಜ್ಯದ ವಿವಿಧೆಡೆಯಿಂದ ಇತರೆ ನಾಲ್ವರು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ವಿಜಯ್ ಕುಮಾರ್ ಅವರು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಾಡಿನ ಇತರೆಡೆಗಳೆಲ್ಲೂ ಪ್ರದರ್ಶನ ನೀಡುತ್ತಿದ್ದಾರೆ.