ಜಂಗಮ ಮಠದ ಆವರಣದಲ್ಲಿ ಬಸವಲಿಂಗಯ್ಯ ಅವರ ಗದ್ದುಗೆ ನೆಲಸಮಗೊಳಿಸಿರುವವರ ವಿರುದ್ದ ಶಿಸ್ತುಕ್ರಮಕೈಗೊಳ್ಳಲು ಮಹದೇವಯ್ಯ ಒತ್ತಾಯ
ಮಾಗಡಿ : ಜಂಗಮ ಮಠದ ಆವರಣದಲ್ಲಿ ನಿರ್ಮಾಣ ಹಂತದ ಬಸವಲಿಂಗಯ್ಯ ಅವರ ಗದ್ದುಗೆ ನೆಲಸಮಗೊಳಿಸಿರುವರ ವಿರುದ್ದ ಶಿಸ್ತುಕ್ರಮಕೈಗೊಳ್ಳುವಂತೆ ಶ್ರೀಮಠದ ಮಹದೇವಯ್ಯ ಒತ್ತಾಯಿಸಿದರು.
ತಾಲೂಕಿನ ಬ್ಯಾಲಕೆರೆ ಜಂಗಮಮಠದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಬಸವಲಿಂಗಯ್ಯ ಅವರು ಶ್ರೀಮಠದಲ್ಲಿ ಪೂಜೆನೆರವೇರಿಸಿಕೊಂಡು ಬರುತ್ತಿದ್ದು 1969ರಲ್ಲಿ ಲಿಂಗೈಕ್ಯರಾದ ವೇಳೆ ಶ್ರೀಮಠದ ಆವರಣದಲ್ಲಿ ಅಂತ್ಯಸಂಸ್ಕಾರಮಾಡಿ ಕಲ್ಲು ಚಪ್ಪಡಿಗಳಿಂದ ಸಮಾಧಿ ನಿರ್ಮಿಸಲಾಗಿತ್ತು ನಂತರ ಇತ್ತಿಚೆಗೆ ಗದ್ದುಗೆಯನ್ನು ಗ್ರಾನೈಟ್ ನಿಂದ ಪುನಶ್ಚೇತನ ಮಾಡುವ ಕಾಮಗಾರಿ ನಡೆಯುತ್ತಿದ್ದು ಏ.4 ರ ರಾತ್ರಿ ಗ್ರಾಮದ ಬಿ.ಜಯಣ್ಣ, ಹರೀಶ್, ಶಿವಪ್ರಸಾದ್, ಶಿವ, ಮುದ್ದುಬಸವಯ್ಯ, ಗುರುಶಾಂತಯ್ಯ ಸೇರಿಕೊಂಡು ನಮ್ಮ ತಂದೆಯವರ ಸಮಾಧಿಯ ಗ್ರಾನೈಟ್ ಕಲ್ಲು ಕಿತ್ತುಹಾಕಿ ಸಮಾಧಿಯ ಪಾವಿತ್ರತೆಯನ್ನು ನಾಶಪಡಿಸಿ, ನಮ್ಮ ಕುಟುಂಬಕ್ಕೆ ಪ್ರಾಣಬೆದರಿಕೆ ಹಾಕಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಂಗಮಮಠದಲ್ಲಿ ಪೂಜೆ,ಪುನಸ್ಕಾರ, ವಿಧಿ ವಿಧಾನಗಳನ್ನು ನಡೆಸಲು ಬಿಡುತ್ತಿಲ್ಲ ಪ್ರತಿನಿತ್ಯ ಒಂದಲ್ಲಾ ಒಂದು ರೀತಿ ಕಿರುಕುಳ, ದೌರ್ಜನ್ಯ ನಡೆಸುತ್ತಿದ್ದಾರೆ ಸಾಕಷ್ಟು ಭಾರಿ ನಮ್ಮ ಕುಂಟುಂಬಸ್ಥರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದರು.
ಮೊದಲನೆ ಪುತ್ರ ವಿರುಪಾಕ್ಷಯ್ಯ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಮಠದ ಆವರಣದಲ್ಲಿ ಜಯಣ್ಣ ನೆಲಹಾಸು ಬದಲಾವಣೆ ಮಾಡುವ ವೇಳೆ ನಮ್ಮ ತಂದೆಯ ಗದ್ದುಗೆ ತೆರವುಗೊಳಿಸದಂತೆ ತಿಳಿಸಿದರು ಮುಚ್ಚಿದ್ದು ಆ ವೇಳೆ ಇಬ್ಬರು ಪೊಲೀಸ್ ಠಾಣೆಗೆ ದೂರು ನೀಡಲಾಯಿತು ಈ ವೇಳೆ ಗ್ರಾಮಸ್ಥರೆಲ್ಲರೂ ಕಿತ್ತಾಡದಂತೆ ಬುದ್ದಿವಾದ ತಿಳಿಸಿ ಕೇಸು ವಜಾಗೊಳಿಸಲಾಯಿತು. ನಂತರ ಪೊಲೀಸ್ ಇಲಾಖೆ 107 ನಡಿ ತಹಶೀಲ್ದಾರ್ ಕೋರ್ಟ್‍ಗೆ ವರ್ಗಾಯಿಸಿದ್ದು ಇಂದಿಗೂ ಕೇಸು ನಡೆಯುತ್ತಿದ್ದು, ನಮ್ಮ ಮನವಿ ಮೇರೆಗೆ ತಹಶೀಲ್ದಾರ್ ಆರ್‍ಐಗೆ ಸೂಚಿಸಿ ಗದ್ದುಗೆ ನಿರ್ಮಿಸಲು ಅವಕಾಶ ಕಲ್ಪಿಸಿದರು ಅದರಂತೆ ಗದ್ದುಗೆ ನಿರ್ಮಿಸುವ ವೇಳೆ ಸಮಾಧಿಗೆ ಬಳಸಿದ ಕಲ್ಲುಗಳನ್ನು ಎತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ಶ್ರೀಮಠದ ಅಸ್ತಿ 20 ಎಕರೆ ಜಮೀನಿದ್ದು ಹಿಂದಿನಿಂದ ಪೂಜೆ ನಡೆಸಿಕೊಂಡು ಬಂದಿರುವುದರಿಂದ ಜಯಣ್ಣ ಮತ್ತು ನಮ್ಮ ಕುಟುಂಬಸ್ಥರಿಗೆ ತಲಾ 10 ಎಕರೆಯಂತೆ ಜಮೀನು ನೀಡಿದ್ದು ಅದರಂತೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದರು ಗದ್ದುಗೆ ಇರುವ ಜಾಗ ನಮ್ಮಗೆ ಸೇರಬೇಕೆಂಬ ಗಲಾಟೆನಡೆಸುತ್ತಿದ್ದಾರೆ ಇದಲ್ಲದೆ ಸರಕಾರಿ ಜಮೀನಿನಲ್ಲಿನ ಕಲ್ಯಾಣಿ, ಮೂಲ ಮಂಟಪಗಳನ್ನು ತೆರವುಗೊಳಿಸಿ ಒತ್ತುವರಿಮಾಡಿಕೊಂಡು ನಮ್ಮಗೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಜಯಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.