ಬಾಬು ಜಗಜೀವನರಾಂ ಅವರು ದೇಶದ ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್

ರಾಮನಗರ : ಡಾ. ಬಾಬು ಜಗಜೀವನರಾಂ  ಅವರು  ಹಸಿರು  ಕ್ರಾಂತಿಯ ಹರಿಕಾರರಾಗಿ ಆಹಾರ  ಉತ್ಪಾದನೆ ಪ್ರಮುಖ  ಪಾತ್ರ ವಹಿಸಿದ್ದರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು  ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ  ಕಲ್ಯಾಣ  ಇಲಾಖೆ, ರಾಮನಗರ ನಗರಸಭೆ  ಇವರ  ಸಂಯುಕ್ತಶ್ರಯದಲ್ಲಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ  ಆಯೋಜಿಸಲಾಗಿದ್ದ ಹಸಿರು  ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಭಾರತದ  ಮಾಜಿ  ಉಪ  ಪ್ರಧಾನಿ ಡಾ ಬಾಬು ಜಗಜೀವನರಾಮ್ ರವರ  115 ನೇ ಜನ್ಮ  ದಿನಾಚರಣೆ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಜಿ ಎಮ್ ಎಫ್ ಕ್ಯಾಂಪೆನ್ ಮೂಲಕ  ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ವಿದೇಶಿಗಳಿಂದ  ವಿವಿಧ  ತಳಿಗಳನ್ನು  ತರಿಸಿ ನಮ್ಮ  ದೇಶದ ಆಹಾರ  ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚು  ಒತ್ತನ್ನು ನೀಡಿದ್ದು,ಅವರ  ಹಲವಾರು  ಅಂಶಗಳು  ನಮ್ಮ  ಜೀವನದಲ್ಲಿ ಪರಿಣಾಮಕಾರಿ ಬೀರಿದೆ ಎಂದರು. ಕಾರ್ಮಿಕರ  ಕಾಯ್ದೆಯಲ್ಲಿ ಸಾಕಷ್ಟು  ಸುಧಾರಣೆ  ತಂದು  ಬಡವರ  ಬದುಕು  ಅಸನಾಗುವುದರಲ್ಲಿ  ಶ್ರಮಿಸಿದರು ಎಂದರು.

ಬಾಬೂಜಿ ಅವರು ಒಳ್ಳೆಯ ರಾಜಕಾರಣಿ  ಹಾಗೂ ಸಂಘಟನಾಕಾರರಾಗಿದ್ದು, ಅವರ ತತ್ವ ಎಂದಿಗೂ ವ್ಯರ್ಥವಾಗಬಾರದು ಎಂದರು. ಸರ್ಕಾರ  ವಿವಿಧ ಅಭಿವೃದ್ಧಿ ನಿಗಮ  ಹಾಗೂ ಇಲಾಖೆಗಳಿಂದ  ಸಿಗುವ ಯೋಜನೆಗಳನ್ನು  ಸದುಪಯೋಗ  ಪಡಿಸಿಕೊಳ್ಳಿ ಎಂದರು.

ರಾಮನಗರ ನಗರಸಭೆ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ ಮಾತನಾಡಿ  ಆಹಾರ  ಕೊರತೆಯ ಸಂದರ್ಭದಲ್ಲಿ ಬಿತ್ತನೆ ಬೀಜದ ಕೊರತೆಯನ್ನು ನೀಗಿಸಿದರು. ಅವರು ಸ್ವತಂತ್ರ, ಸಾಮಾಜಿಕ  ಸಮಾನತೆಗೆ ಹೋರಾಡಿದವರು. ಅವರು ಹಾಕಿಕೊಟ್ಟ ಸಾಮಾಜಿಕ ಭದ್ರತೆಯ ಬುನಾದಿಯಲ್ಲಿ ನಡೆಯಬೇಕು  ಎಂದು ತಿಳಿಸಿದರು.

ರಾಮನಗರ  ಜಿಲ್ಲಾ ಆದಿಜಾಂಬವ  ಜಿಲ್ಲಾಧ್ಯಕ್ಷ ಗುರುಮೂರ್ತಿ.ಎನ್.ಸಿ ಮಾತನಾಡಿ  ಇವರೊಬ್ಬ  ಸ್ವಾತಂತ್ರ ಪ್ರೇಮಿಯಾಗಿದ್ದು, ರವಿದಾಸರ  ಕೀರ್ತನೆಗಳಿಂದ  ಪ್ರೆರೇಪಿತರಾದವರು. ಖಿಲಪಾತ್ ಚಳುವಳಿ  ಹಾಗೂ ಜಲಿಯನ್ ವಾಲಾಬಾಗ್ ಸ್ವಾತಂತ್ರ ಹೋರಾಟದಲ್ಲಿ  ಭಾಗವಹಿಸಿದ್ದು, ಸಂವಿಧಾನದ  5 ಸ್ಥಾಯಿ ಸಮಿತಿಯ  ಅಧ್ಯಕ್ಷರಾಗಿದ್ದರು ಎಂದರು

ಸಂವಿಧಾನ  ರಚಣೆಯಲ್ಲಿ  ಪ್ರಮುಖ  ಪಾತ್ರ ವಹಿಸಿದ್ದು, ಕೃಷಿ ಮಂತ್ರಿಯಾಗಿದ್ದಾಗ  grow more food ಎಂಬ  ಯೋಜನೆ  ಜಾರಿಗೆ ತಂದವರು. ಅಲ್ಲದೆ ರೈಲ್ವೆ, ರಕ್ಷಣಾ , ಕಾರ್ಮಿಕ ಸಚಿವರಾಗಿದ್ದಾಗ  ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದು ದೇಶದ  ಏಳಿಗೆಗೆ ಶ್ರಮಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಾಟರ್ ಟ್ಯಾಂಕ್ ಸರ್ಕಲ್‌ನಿಂದ  ಡಾ.ಬಿ.ಆರ್. ಅಂಬೇಡ್ಕರ್ ಭವನದ ವರೆಗೆ  ಡಾ. ಬಾಬು ಜಗಜೀವನರಾಂ ನವರ  ಭಾವಚಿತ್ರ ಮೆರವಣಿಗೆ  ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯ ನಿರ್ವಾಹಕ  ಅಧಿಕಾರಿ ಇಕ್ರಂ, ಹೆಚ್ಚುವರಿ  ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಂತೋಷ್ ಬಾಬು, ಜಿಲ್ಲಾ ಪಂಚಾಯತ್  ಉಪಕಾರ್ಯದರ್ಶಿ ರಮೇಶ್,  ರಾಮನಗರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್ ಎಂ, ಜಿಲ್ಲಾ ನೌಕರರ ಸಂಘದ  ಅಧ್ಯಕ್ಷ ಕೆ. ಸತೀಶ್, ರಾಮನಗರ ನಗರಸಭೆ  ಪೌರಯುಕ್ತ ನಂದಕುಮಾರ್, ಸಮಾಜ  ಕಲ್ಯಾಣ ಇಲಾಖೆ ಉಪ  ನಿರ್ದೇಶಕಿ ಲಲಿತಾಬಾಯಿ. ಎಲ್,  ಜಿಲ್ಲಾ ಜಾಗೃತಿ  ಸಮಿತಿ  ಉಸ್ತುವಾರಿ ಸದಸ್ಯರುಗಳು  ಹಾಗೂ ವಿವಿಧ ಎಲ್ಲಾ ಇಲಾಖೆಯ  ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ  ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *