ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ಜಿಲ್ಲೆಯಲ್ಲಿ ಸಂಪೂರ್ಣ : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್

ರಾಮನಗರ : ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ತಿರಸ್ಕೃತಗೊಂಡಿರುವ ಅರ್ಜಿಗಳನ್ನು ನಿಯಮನುಸಾರ ಪರೀಶೀಲಿಸಿ ಕ್ರಮವಹಿಸಿ ಹಿಂಬರಹ ನೀಡಿ ಅರ್ಜಿಯನ್ನು ಮುಕ್ತಾಯಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 340 ಅರ್ಜಿ ಸ್ವೀಕೃತಿಯಾಗಿದ್ದು, 339 ಅರ್ಜಿ ಪುರಸ್ಕೃತವಾಗಿದ್ದು 01 ಅರ್ಜಿಗಳು ತಿರಸ್ಕೃತವಾಗಿರುತ್ತದೆ. ನಗರ ಪ್ರದೇಶದಲ್ಲಿ ಒಟ್ಟು 297 ಅರ್ಜಿ ಸ್ವೀಕೃತವಾಗಿದ್ದು, 225 ಅರ್ಜಿಗಳು ಪುರಸ್ಕೃತವಾಗಿದ್ದು, 72 ಅರ್ಜಿ  ತಿರಸ್ಕೃತವಾಗಿದೆ. ತಿರಸ್ಕಾರಗೊಂಡಿರುವ ಅರ್ಜಿಗಳನ್ನು ದಾಖಲೆಗಳು ಸರಿಯಾಗಿದ್ದಲ್ಲಿ  ಪುರಸ್ಕರಿಸುವಂತೆ ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಾಲ್ಲೂಕು ಪಂಚಾಯಿತಿಗಳಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಸೂಚನಾ ಫಲಕಗಳಲ್ಲಿ ಅಳವಡಿಸಿ ಅರ್ಜಿದಾರರ ಆಕ್ಷೇಪಣೆಗೆ ಅವಕಾಶ ಕೊಡಬೇಕೆಂದು ಸೂಚಿಸಿದರು. ಪ್ರತಿಯೊಂದು ಅರ್ಜಿಯನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ಯೋಜನಾ ನಿರ್ದೇಶಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕ್ರಮವಹಿಸಬೇಕು, ಎಂದು ತಿಳಿಸಿದರು.
ತೆರೆದ ಶೌಚಾಲಯ ಕೂಡಲೇ ಮುಚ್ಚಬೇಕು, ಮ್ಯಾನುಯಲ್  ಸ್ಕ್ಯಾವೆಂಜರ್ ಗಳನ್ನು ಸರ್ಕಾರದ ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಿದ್ದು , ಜಿಲ್ಲೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ಅವರು ಮಾತನಾಡಿ  ಮ್ಯಾನ್ಯುವಲ್ ಸ್ಕಾವೇಂಜರ್ ಸಮಸ್ಯೆಗಳು ಮುಂದೆ ಬಾರದಂತೆ ಸಂಬಂಧಿಸಿದ ಇಲಾಖೆಗಳಿಂದ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಆರ್ ನಾಗರಾಜು ಮಾತನಾಡಿ ರಾಮನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರನ್ನು ಕರೆದುಕೊಂಡು ವಿಚಾರಣೆ ಮಾಡುವ ಸಂದರ್ಭದಲ್ಲಿ ಆರೋಪಿಗಳು ಸ್ಥಳದಲ್ಲಿಯೇ ಮಲಮೂತ್ರ ಮಾಡಿಕೊಳ್ಳುವುದರಿಂದ ಅದನ್ನು ಸ್ವಚ್ಛತೆ ಮಾಡುವ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ  ಅವರನ್ನು ಮ್ಯಾನುಯೆಲ್ ಸ್ಕ್ಯಾವೆಂಜರ್ ಎಂದು ಗುರುತಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಅತೀ ಹೆಚ್ಚು ಸ್ಕ್ಯಾವೆಂಜರ್ ಗುರುತಿಸುವ ಕೆಲಸ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯ ನಡೆಯದ ರೀತಿಯಲ್ಲಿ ಯಂತ್ರೋಪಕರಣ ಬಳಸಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿರ್ಮೂಲನೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರ್ ಮಾತನಾಡಿ ವಾರ್ಡ್ ನಂ 21 ಸೀರಳ್ಳಾ ಸಂಪೂರ್ಣವಾಗಿ ಮಲೀನಗೊಂಡಿದ್ದು ಇದರಿಂದ ಮ್ಯಾನ್ಯವಲ್ ಸ್ಕಾವೇಂಜಿಗ್ ಜೀವಂತವಾಗಿರರುದರ ಕುರಿತು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಲಲಿತಾ ಬಾಯಿ, ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾಧಿಕಾರಿ ರಘು,  ರಾಮನಗರ ನಗರಸಭೆ ಪೌರಾಯುಕ್ತ ನಂದ ಕುಮಾರ್, ಜಿಲ್ಲಾ ಮಟ್ಟದ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಸಮೀಕ್ಷಾ ಸಮಿತಿ ಸದಸ್ಯರುಗಳಾದ ಹರೀಶ್ ಬಾಲು, ಜಾನಕಿ, ರಾಮಕೃಷ್ಣ ಸುಗ್ಗನಹಳ್ಳಿ, ಮ್ಯಾನುವಲ್ ಸ್ಕ್ಯಾವೆಂಜರ್ ಸಮಿತಿ ಮೊಬೈಲೈಸರ್‌ಗಳಾದ  ಮಂಜುನಾಥ್ ಅಪ್ಪಗೆರೆ, ಜಿಲ್ಲಾ ಮಟ್ಟದ ಮ್ಯಾನ್ಯುವಲ್ ಸಮೀಕ್ಷಾ ಸಮಿತಿ ಸಂಯೋಜಕ ಮಂಜುನಾಥ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *