ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ReNew ಪವರ್‌ನಿಂದ GE ಯು ಗುತ್ತಿಗೆ ಪಡೆದಿದೆ

● ಒಪ್ಪಂದವು ಯೋಜಿತ ಅಂತರರಾಜ್ಯ-ಆಧಾರಿತ ಸ್ಥಳಾಂತರಿಸುವ ಮೂಲಸೌಕರ್ಯದ ಭಾಗವಾಗಿದ್ದು ಅದು ಭಾರತದಲ್ಲಿ 66.5 GW ನವೀಕರಿಸಬಹುದಾದ ಶಕ್ತಿ ವಲಯವನ್ನು ರೂಪಿಸಲಿದೆ.
● ಕರ್ನಾಟಕದಲ್ಲಿ ReNew ಪವರ್‌ಗಾಗಿ GE ಯು ಎರಡು 400 kV ಸಬ್‌ಸ್ಟೇಷನ್‌ಗಳನ್ನು ನಿರ್ಮಿಸುತ್ತಿದೆ
● ಗ್ರಿಡ್ ಸೊಲ್ಯೂಷನ್ಸ್ ವ್ಯವಹಾರದಲ್ಲಿ ReNew ಪವರ್‌ನೊಂದಿಗಿನ GE ಯ ಮೂರನೇ ಒಪ್ಪಂದವಾಗಿದ್ದು, GE ಯ ಇನ್-ಕಂಟ್ರಿ ಸುಧಾರಿತ ತಂತ್ರಜ್ಞಾನ ಮತ್ತು ಸೇವಾ ಸಾಮರ್ಥ್ಯಗಳಲ್ಲಿ ReNew ಪವರ್‌ನ ವಿಶ್ವಾಸವನ್ನು ಪ್ರದರ್ಶಿಸುತ್ತಿದೆ
.

ಬೆಂಗಳೂರು : – GE ಯ ಗ್ರಿಡ್ ಸೊಲ್ಯೂಷನ್ಸ್ ವ್ಯವಹಾರ [NYSE:GE] ಇಂದು ReNew ಪವರ್ ಪ್ರೈವೇಟ್‌ ಲಿಮಿಟೆಡ್‌ನಿಂದ ಗುತ್ತಿಗೆಯನ್ನು ಪಡೆದಿದೆ ಎಂದು ಘೋಷಿಸಿತು. ಒಟ್ಟು ಉತ್ಪಾದನಾ ಸಾಮರ್ಥ್ಯದ ವಿಷಯದಲ್ಲಿ ಭಾರತದ ಪ್ರಮುಖ ಕಂಪನಿಗಳು, ಭಾರತದ ನೈಋತ್ಯ ರಾಜ್ಯವಾದ ಕರ್ನಾಟಕದಲ್ಲಿ ಎರಡು 400 kV ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲು ಮುಂದಾಗಿವೆ ಅವುಗಳೆಂದರೆ – ಕೊಪ್ಪಳದಲ್ಲಿ 400/220 kV ವಾಯು-ನಿರೋಧಕ ಸಬ್‌ಸ್ಟೇಷನ್ ಮತ್ತು ನರೇಂದ್ರದನಲ್ಲಿ 400 kV ಅನಿಲ-ನಿರೋಧಕ ಸಬ್‌ಸ್ಟೇಷನ್ ಆಗಿವೆ. ಪ್ರತಿ ಸಬ್‌ಸ್ಟೇಷನ್‌ಗೆ ಎರಡು 125 MVAR 400 kV ರಿಯಾಕ್ಟರ್‌ಗಳ ಪೂರೈಕೆಯನ್ನು ಒಪ್ಪಂದವು ಒಳಗೊಂಡಿದೆ.

ReNew ಪವರ್‌ನೊಂದಿಗೆ GE ಯ ಬಹು-ಮಿಲಿಯನ್ ಡಾಲರ್ ಒಪ್ಪಂದವು ನರೇಂದ್ರ-ಕೊಪ್ಪಳ ಪ್ರಸರಣ ಯೋಜನೆಯ ಭಾಗವಾಗಿದೆ. ಈ ಯೋಜನೆಯು ಯೋಜಿತ ಅಂತರರಾಜ್ಯ-ಆಧಾರಿತ ಸ್ಥಳಾಂತರಿಸುವ ಮೂಲಸೌಕರ್ಯದ ಭಾಗವಾಗಿದ್ದು ಅದು ಭಾರತದಲ್ಲಿ 66.5 GW ನವೀಕರಿಸಬಹುದಾದ ಶಕ್ತಿ ವಲಯಗಳನ್ನು ರೂಪಿಸಲಿದೆ. ನರೇಂದ್ರ-ಕೊಪ್ಪಳ ಯೋಜನೆಯು ಕರ್ನಾಟಕದಲ್ಲಿ ಪವನ ಶಕ್ತಿ ವಲಯಗಳಿಂದ 2.5 GW ತೆರವು ಮಾಡುವುದನ್ನು ಒಳಗೊಂಡಿರುತ್ತದೆ, ಇದು ಒಟ್ಟಾರೆ ಯೋಜನೆಯ ಮೂರು ಹಂತಗಳ ಮೊದಲ ಭಾಗವಾಗಿದೆ.

ಇದು ReNew ಪವರ್‌ನೊಂದಿಗೆ ಗ್ರಿಡ್ ಸೊಲ್ಯೂಷನ್ಸ್ ವ್ಯವಹಾರದ ಮೂರನೇ ಸಬ್‌ಸ್ಟೇಷನ್ ಯೋಜನೆಯಾಗಿದೆ. “ನಮ್ಮ ನವೀನ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಮತ್ತು ಸೇವಾ ಸಾಮರ್ಥ್ಯಗಳಲ್ಲಿ ReNew ಪವರ್‌ನ ನಿರಂತರ ವಿಶ್ವಾಸದಿಂದ ನಾವು ಸಂತೋಷಗೊಂಡಿದ್ದೇವೆ” ಎಂದು ದಕ್ಷಿಣ ಏಷ್ಯಾದ ಗ್ರಿಡ್ ಸೊಲ್ಯೂಷನ್ಸ್‌ನ ಪ್ರಾದೇಶಿಕ ನಾಯಕ ಪಿತಾಂಬರ್ ಶಿವನಾನಿ ಹೇಳಿದರು. ಮುಂದುವರೆಯುತ್ತಾ, “ಈ ಸಬ್‌ಸ್ಟೇಷನ್‌ಗಳೊಂದಿಗೆ ದೇಶದ ನೈಋತ್ಯ ಭಾಗದಿಂದ ಹೆಚ್ಚು ನವೀಕರಿಸಬಹುದಾದ ಶಕ್ತಿಯನ್ನು ಸ್ಥಳಾಂತರಿಸಲು ಸಹಾಯ ಮಾಡುವ ಮೂಲಕ ಭಾರತದಲ್ಲಿ ಶಕ್ತಿಯ ಪರಿವರ್ತನೆಯನ್ನು ವೇಗಗೊಳಿಸಲು ಸಹಾಯ ಮಾಡಲು ನಾವು ಎದುರು ನೋಡುತ್ತಿದ್ದೇವೆ.” ಎಂದು ಹೇಳಿದರು.

“ReNew ಪವರ್ ಪಳೆಯುಳಿಕೆ ಇಂಧನಗಳಿಂದ ಭವಿಷ್ಯದ ಭಾರತದ ಪರಿವರ್ತನೆಯನ್ನು ಮುನ್ನಡೆಸಲು ಮತ್ತು ಶುದ್ಧ ಮತ್ತು ಚುರುಕಾದ ಶಕ್ತಿಯ ಆಯ್ಕೆಗಳನ್ನು ನೀಡುವ ಮೂಲಕ ಮತ್ತು ಆ ಮೂಲಕ ಭಾರತದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮೂಲಕ ಸಮರ್ಥನೀಯ ರೀತಿಯಲ್ಲಿ ಶಕ್ತಿಯ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬದ್ಧವಾಗಿದೆ. ನಮ್ಮ ಗ್ರಾಹಕರಿಗೆ ತಮ್ಮ ಅತ್ಯಾಧುನಿಕ ಗ್ರಿಡ್ ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾಗಿ ಮತ್ತು ವಿಶ್ವಾಸಾರ್ಹವಾಗಿ ಶಕ್ತಿಯನ್ನು ತರಲು GE ಗ್ರಿಡ್ ಸೊಲ್ಯೂಷನ್‍ಗಳೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಎಂದು ReNew ಪವರ್‌ನ ನ್ಯೂ ಬಿಸಿನೆಸ್ ಅಧ್ಯಕ್ಷ ಅಜಯ್ ಭಾರದ್ವಾಜ್ ಹೇಳಿದರು.

GE ತನ್ನ ಕೆಲಸವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಅಂದರೆ ಮೊದಲೆರಡನ್ನು ಡಿಸೆಂಬರ್ 2022 ರಲ್ಲಿ ಹಾಗೆಯೇ ಒಂದನ್ನು ಆಗಸ್ಟ್ 2023 ರಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.ವಿಶೇಷವೆಂದರೆ ಎಲ್ಲಾ ಉತ್ಪನ್ನಗಳನ್ನು ಭಾರತಕ್ಕಾಗಿ ಭಾರತದಲ್ಲಿ ತಯಾರಿಸಲಾಗುತ್ತಿದೆ.

ಡಿಕಾರ್ಬೊನೈಸೇಶನ್ ಮತ್ತು ರೌಂಡ್-ದಿ-ಕ್ಲಾಕ್ ಪವರ್ ಮೇಲೆ ನಿರಂತರ ಗಮನಹರಿಸುವುದರೊಂದಿಗೆ, ಭಾರತೀಯ ಶಕ್ತಿಯ ಭೂದೃಶ್ಯವು ಗಮನಾರ್ಹ ಧನಾತ್ಮಕ ರೂಪಾಂತರಕ್ಕೆ ಒಳಗಾಗುತ್ತಿದೆ. ದೇಶವು 2022 ರ ವೇಳೆಗೆ 175 GW ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಲು ಬದ್ಧವಾಗಿದೆ ಮತ್ತು 2030 ರ ವೇಳೆಗೆ ಅದರ ಪಳೆಯುಳಿಕೆಯಲ್ಲದ ಇಂಧನ ಗುರಿಯನ್ನು 450 GW ಗೆ ದ್ವಿಗುಣಗೊಳಿಸಲಿದೆ. ಸೆಪ್ಟೆಂಬರ್ 2021 ರ ಹೊತ್ತಿಗೆ ದೇಶವು ಈಗಾಗಲೇ 100 GW ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಮೈಲಿಗಲ್ಲನ್ನು ಸಾಧಿಸಿದೆ. ಪ್ರಸ್ತುತ, ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ಭಾರತವು ವಿಶ್ವದಲ್ಲಿ 4 ನೇ ಸ್ಥಾನದಲ್ಲಿದೆ. ಅದರಲ್ಲಿ ಸೌರ ಸಾಮರ್ಥ್ಯದ ವಿಷಯದಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಗಾಳಿಯ ಸಾಮರ್ಥ್ಯದಲ್ಲಿ 4 ನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *