ಸಾಂಸ್ಕೃತಿಕ ಪರಿಚಾರಕ ಡಾ.ಎಸ್. ರಾಮಲಿಂಗೇಶ್ವರ (ಸಿಸಿರಾ) ಅವರ “ಭೂಮಿ ತಬ್ಬಿದ ಆಕಾಶ” ಕೃತಿ ಲೋಕಾರ್ಪಣೆ : ಸ್ಫೂರ್ತಿ ಮುರುಳೀಧರ್, ಪ್ರೇರಣ.ಎಸ್, ನಂರುಶಿ ಕಡೂರು ಅವರಿಗೆ ಸಾಹಿತಿ “ಎಸ್. ಗುಣಸಾಗರಿ ಸಿ. ನಾಗರಾಜ್ ದತ್ತಿ ಪ್ರತಿಭಾ ಪುರಸ್ಕಾರ” ಪ್ರದಾನ

ಬೆಂಗಳೂರು : ಜಗತ್ತು ಸುಂದರವಾಗಿರಬೇಕಾದರೆ ಈ ಭೂಮಿಯ ಮೇಲಿರುವ ನಾವು ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸದಿಂದ ಇರಬೇಕಾಗುತ್ತದೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಿಂದ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರು ಅಭಿಪ್ರಾಯಪಟ್ಟರು.

ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರಿನ ಶೇಷಾದ್ರಿಪುರಂ ನ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಏರ್ಪಡಿಸಿದ್ದ ಕವಿ,ಸಾಹಿತಿ, ಸಾಂಸ್ಕೃತಿಕ ಪರಿಚಾರಕ ಡಾ. ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರ ಕೃತಿ ” ಭೂಮಿ ತಬ್ಬಿ ದ ಆಕಾಶ ” ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ್ದರು.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರಿನ ಶೇಷಾದ್ರಿಪುರಂನ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಲೇಖಕ, ಉಪನ್ಯಾಸಕ ಡಾ.ರಾಮಲಿಂಗೇಶ್ವರ (ಸಿಸಿರಾ) ಅವರ “ಭೂಮಿ ತಬ್ಬಿದ ಆಕಾಶ ” ಕೃತಿಯನ್ನು ಸಾಹಿತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆ ಮಾಡಿದರು. ಶಿಕ್ಷಣ ತಜ್ಞ ನಾಡೋಜ ಡಾ ವೂಡೇ ಪಿ ಕೃಷ್ಣ ಅವರು, ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್; ಲೇಖಕಿ ಗುಣಸಾಗರಿ ಸಿ. ನಾಗರಾಜ್ ಇದ್ದಾರೆ.

ಇಂದು ಜಗತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲಿ ದ್ವೇಷ, ಅಸೂಯೆ , ಅಪನಂಬಿಕೆಗಳಿಂದಾಗಿ ಮನುಷ್ಯ ಮನುಷ್ಯನ ಅಂತರಂಗದಲ್ಲಿ ಹಾಗೂ ದೇಶ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಲು ಭೂಮಿಯು ಆಕಾಶವನ್ನು ತಬ್ಬಿರುವ ಹಾಗೆ ಮಾನವೀಯ ಮನಸ್ಸುಗಳಲ್ಲಿ ಪ್ರೀತಿ ತಬ್ಬಬೇಕಿದೆ ಈ ಕೆಲಸವನ್ನು ಕಾಲಿಯಾಗಿ, ಪ್ರಾಧ್ಯಾಪಕರಾಗಿ, ಕನ್ನಡದ ಪರಂಪರೆಯನ್ನು ಉದ್ದೀಪನಗೊಳಿಸುತ್ತಿರುವ ಡಾ.ರಾಮಲಿಂಗೇಶ್ವರ (ಸಿಸಿರಾ) ಅವರ ಕಾರ್ಯ ಶ್ಲಾಘನೀಯ, ಅವರು ಇವತ್ತಿನ ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ ಎಂದರು.

ಸಾಹಿತ್ಯ, ಸಂಸ್ಕೃತಿ ನಮ್ಮ ಈ ಭೂಮಿಯ ಮೇಲಿರುವ ಮನುಷ್ಯ ಗುಣದ ಒಂದು ಅಂಗ. ನಾವು ಏನಾದರೂ ಆಗಲು ಸಾಧ್ಯವಿದೆ, ಹಾಗೆ ಇರಲು ನಮ್ಮ ಸುತ್ತಲಿನ ಪರಿಸರ ಚೆನ್ನಾಗಿ ಇರಬೇಕಾಗುತ್ತದೆ . ಈ ನಿಟ್ಟಿನಲ್ಲಿ ಡಾ.ಸಿಸಿರಾ ಅವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕಾಣ್ಕೆಯನ್ನು ನೀಡುವ ಮೂಲಕ ಸನ್ಮಾರ್ಗದಲ್ಲಿ ಇತರರನ್ನೂ ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿರುವುದು ನಿಜಕ್ಕೂ ನಾವೆಲ್ಲಾ ಅವರನ್ನು ಅಭಿನಂದಿಸಬೇಕು ಎಂದರು.

ಕ್ರೈಸ್ಟ್ ಕಾಲೇಜಿನ ಕು.ಸ್ಫೂರ್ತಿ ಮುರುಳೀಧರ್, ಶೇಷಾದ್ರಿಪುರಂ ಕಾಲೇಜಿನ ಪ್ರೇರಣ.ಎಸ್ ಮತ್ತು ಯುವ ಬರಹಗಾರ ನಂರುಶಿ ಕಡೂರು ಅವರಿಗೆ ಸಾಹಿತಿ ಗುಣಸಾಗರಿ ಸಿ ನಾಗರಾಜ್ ದತ್ತಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಗಾಂಧಿ ಭವನದ ಅಧ್ಯಕ್ಷರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರು ಇಂದು ಹೊಸ ಹೊಸ ಮಾಧ್ಯಮಗಳು ದ್ವೇಷ ಬಿತ್ತು ಕಾರ್ಯ ಮಾಡುತ್ತೇವೆ ಸತ್ಯ ತಿಳಿಸುವ, ಅಸತ್ಯವನ್ನು ದೂರ ಮಾಡುವ,ತಪ್ಪು ತಿದ್ದಿ ಸಮಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ನಾವು ತೊಡಗಬೇಕು. ಸಕಾರಾತ್ಮಕ ಭಾವನೆಗಳನ್ನು ಪ್ರಚಾರಮಾಡಬೇಕು, ಮಹಾತ್ಮರಾದರು ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅವರುಗಳು ಇಲ್ಲದ ಈ ಜಗತ್ತು ಇರಲಾರದು. ಅವರ ಜೀವನ ಆದರ್ಶಗಳನ್ನು ಇಂದಿನ ನಾವೆಲ್ಲರೂ ಅರಿತು ನಡೆಯಬೇಕು. ಡಾ.ಸಿಸಿರಾ ಅವರು ಮನಸು ಮನಸ್ಸುಗಳನ್ನು ಬೆಸೆಯುವ ಕೆಲಸದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಯಾವ ಸ್ವಾರ್ಥವೂ ಇಲ್ಲದೆ ಸಮಾಜ ಸಾಹಿತ್ಯ ಸಂಸ್ಕೃತಿ ಬೆಳೆಸುವ ಅವರ ಕಾರ್ಯದಲ್ಲಿ ನಾವೆಲ್ಲರೂ ಜೊತೆಗೂಡೋಣ ಎಂದರು.

ಭೂಮಿ ತಬ್ಬಿದ ಆಕಾಶ ಕೃತಿಯನ್ನು ಡಾ.ಸಿಸಿರಾ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಪ್ರೋ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಅರ್ಪಿಸಿದರು. ಪ್ರತಿಭಾ ಪುರಸ್ಕಾರದ ದತ್ತಿ ದಾನಿಗಳು, ಲೇಖಕಿ ಗುಣಸಾಗರಿ ಸಿ ನಾಗರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕವಿ ಸಿಸಿರಾ ಮತ್ತು ಸಿ.ಹೇಮಾವತಿ ದಂಪತಿಗಳನ್ನು ಕನ್ನಡ ಪರ ಹೋರಾಟಗಾರರು ಡಾ.ಗುಣವಂತ ಮಂಜು, ಹನುಮಂತರಾಯ, ರು.ಬಸಪ್ಪ, ಕೆ.ಎಲ್.ನಟರಾಜ್, ಗೋವಿಂದಳ್ಳಿ ಕೃಷ್ಣೇಗೌಡ ಗೌರವಿಸಿದರು.

ವೇದಿಕೆಯಲ್ಲಿ ಪ್ರಾಧ್ಯಾಪಕರಾದರು ಡಾ.ಆರ್ ವಾದಿರಾಜು, ಡಾ.ಕೆ.ಸಿ.ಮುನಿಯಪ್ಪ, ಡಾ.ಕೃಷ್ಣ ಹಾನ್ ಬಾಳು , ಸಾಹಿತಿ ಕೆ.ಎಂ.ರೇವಣ್ಣ , ಇಂದಿರಾ ಕೃಷ್ಣಪ್ಪ, ಡಾ
ಸಂದೀಪ್.ಸಿ ಮುಂತಾದವರಿದ್ದರು.

ಪುಸಕ್ತ ಬಿಡುಗಡೆಯ ಆಹ್ವಾನ ಪತ್ರಿಕೆ

Leave a Reply

Your email address will not be published. Required fields are marked *