ಆಲ್ಟೆನ್ ಸಮೂಹದಿಂದ 3,000 ಉದ್ಯೋಗಗಳ ಸೃಷ್ಟಿಯ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ವಿಸ್ತರಣೆ

• ಆಲ್ಟೆನ್ ಸಮೂಹವು ಎಂಜಿನಿಯರಿಂಗ್ ಮತ್ತು ಐಟಿ ಸೇವೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು ಬೆಂಗಳೂರಿನಲ್ಲಿ ಹೊಸ ಕಛೇರಿಯ ಮೂಲಕ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿದೆ.

ಬೆಂಗಳೂರು : ಫ್ರಾನ್ಸ್ ನ ಪ್ರಮುಖ ಕಂಪನಿ ಆಲ್ಟೆನ್ ಸಮೂಹದ ಸಂಪೂರ್ಣ ಮಾಲೀಕತ್ವದ ಸಂಸ್ಥೆ ಆಲ್ಟೆನ್ ಇಂಡಿಯಾ ತನ್ನ ಕಾರ್ಯಾಚರಣೆಗಳನ್ನು ಭಾರತದಲ್ಲಿ ವಿಸ್ತರಿಸುತ್ತಿದ್ದು 3,000 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಇದು ಕಂಪನಿಯೊಂದು ಕೈಗೊಳ್ಳುತ್ತಿರುವ ಅತ್ಯಂತ ದೊಡ್ಡ ನೇಮಕವಾಗಿದೆ ಮತ್ತು ಸಾಂಕ್ರಾಮಿಕದ ನಂತರದ ವಿಶ್ವದಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.

ಈ ಉದ್ಯೋಗಗಳು ಭಾರತದಲ್ಲಿ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಮತ್ತು ಭಾರತದಲ್ಲಿಯೇ ನಮ್ಮ ಉದ್ಯೋಗಿಗಳ ಸಂಖ್ಯೆಯನ್ನು 6,500ಕ್ಕೆ ಹೆಚ್ಚಿಸಿದ್ದು ಇದು ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಸಂಪನ್ಮೂಲಗಳು ಮತ್ತು ಮಾನವಶಕ್ತಿಯ ಈ ಅಪಾರ ಹೂಡಿಕೆಯಿಂದ ಆಲ್ಟೆನ್ ಇಂಡಿಯಾ ಸಮೂಹದ ಒಟ್ಟಾರೆ ಆದಾಯಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುವ ನಿರೀಕ್ಷೆ ಹೊಂದಿದೆ. ನಾವು ಭಾರತದ ಕಾರ್ಯಾಚರಣೆಗಳು ಆದಾಯದ ದೃಷ್ಟಿಯಿಂದ ಶೇ.100ರಷ್ಟು ಪ್ರಗತಿಗೆ ಕೊಡುಗೆ ನೀಡುವ ನಿರೀಕ್ಷೆ ಹೊಂದಿದ್ದೇವೆ. ಪ್ರಸ್ತುತ ಆದಾಯವು 51.5 ಬಿಲಿಯನ್ ಯೂರೋ ಆಗಿದೆ(2021ರಂತೆ).

ಆಲ್ಟೆನ್ ಸಮೂಹದ ಡೆಪ್ಯುಟಿ ಸಿಇಒ ಮತ್ತು ಗ್ಲೋಬಲ್ ಹೆಡ್ ಜೆರಾಲ್ಡ್ ಅಟ್ಟಿಯಾ ಅವರ ಹೊಸ ಕಛೇರಿಯಲ್ಲಿ ಆಲ್ಟೆನ್ 3,000 ಉದ್ಯೋಗಿಗಳ ಸೇರ್ಪಡೆ ಮಾಡುತ್ತಿದ್ದು ಇದು ನಮ್ಮ ಜಾಗತಿಕ ವಹಿವಾಟಿಗೆ ಗಮನಾರ್ಹ ಮೌಲ್ಯ ಸೇರ್ಪಡೆ ಮಾಡಲಿದೆ ಎಂದರು. “3,000 ಉದ್ಯೋಗಿಗಳ ಸೇರ್ಪಡೆಯಿಂದ ತಂತ್ರಜ್ಞಾನ ರೀತ್ಯಾ ಹೆಚ್ಚು ಪ್ರಗತಿಯನ್ನು ಈ ಹೊಸ ಕಛೇರಿಯಲ್ಲಿ ಕಾಣುತ್ತಿದ್ದೇವೆ ಮತ್ತು ಇದು ಯುವ ಭಾರತೀಯರಿಗೆ ಅವರ ವೃತ್ತಿಯಲ್ಲಿ ಪ್ರಗತಿ ಕಾಣಲು ಅವಕಾಶಗಳನ್ನು ಒದಗಿಸಲಿದೆ. ನಾವು ಭಾರತದಲ್ಲಿ ಸಾಕಷ್ಟು ಪ್ರತಿಭೆಗಳ ಲಭ್ಯತೆಯನ್ನು ಕಾಣುತ್ತಿದ್ದೇವೆ. ಆದ್ದರಿಂದ ಆಲ್ಟೆನ್ ಸಮೂಹವು ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗಳಿಗೆ ಹೂಡಿಕೆ ಮಾಡಲು ನಿರ್ಧರಿಸಿದೆ” ಎಂದರು.

ಆಲ್ಟೆನ್ ಸಮೂಹದ ಎಪಿಎಸಿ ಮುಖ್ಯಸ್ಥ ಪ್ಯಾಸ್ಕಲ್ ಅಮೋರ್, ಕಂಪನಿಯು ವಿಸ್ತಾರ ಪ್ರತಿಭೆಗಳನ್ನು ಹೊಂದಿದ ದೇಶವಾಗಿರುವುದರಿಂದ ಬಹಳ ಆಶಾವಾದ ಹೊಂದಿದೆ ಮತ್ತು ಇದು ಸಮೂಹಕ್ಕೆ ಹೊಸ ತಂತ್ರಜ್ಞಾನದ ಕ್ಷೇತ್ರಗಳಿಗೆ ತಮ್ಮನ್ನು ಸಜ್ಜುಗೊಳಿಸಲು ನೆರವಾಗಲಿದೆ. ಇದು ಭಾರತದಲ್ಲಿ ಹೂಡಿಕೆ ಮಾಡಲು ಸೂಕ್ತವಾದ ವಾತಾವರಣ ಹೊಂದಿದ್ದು ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೆ ವಿನ್-ವಿನ್ ಸನ್ನಿವೇಶವನ್ನು ತರಲಿದೆ” ಎಂದರು.

ಆಲ್ಟೆನ್ ಇಂಡಿಯಾದ ಸಿಇಒ ಉತ್ತಮ್‍ಕುಮಾರ್ ಸಂಕ್ಪಾಲ್ ಈ ಹೊಸ ಕಛೇರಿ ಮತ್ತು 3,000 ಉದ್ಯೋಗಿಗಳ ಸೇರ್ಪಡೆಯಿಂದ ಆಲ್ಟೆನ್ ಇಂಡಿಯಾದ ಸಾಮಥ್ರ್ಯ 6,500 ಉದ್ಯೋಗಿಗಳನ್ನು ವೃದ್ದಿಸುತ್ತದೆ. “ಇಂತಹ ಅಪಾರ ಸೇರ್ಪಡೆಯಿಂದ ನಾವು ಸಾಂಕ್ರಾಮಿಕದ ನಂತರದ ಅರ್ಥವ್ಯವಸ್ಥೆಯ ಮತ್ತು ಉದ್ಯೋಗಗಳ ಪುನರುತ್ಥಾನ ಕಾಣುತ್ತಿದ್ದೇವೆ. ಇದು ತಾಂತ್ರಿಕ ವಲಯದಲ್ಲಿ ವಿವಿಧ ಕೌಶಲ್ಯಗಳಿಗೆ ಅವಕಾಶಗಳನ್ನು ಸೃಷ್ಟಿಸಲಿದೆ. ಕಾನ್ಸೆಪ್ಟ್‍ಗಳಿಂದ ಮಾರುಕಟ್ಟೆ ನಂತರದ ಸೇವೆಗಳವರೆಗೆ ಆಲ್ಟೆನ್ ಇಂಡಿಯಾ ವಿವಿಧ ಕ್ಷೇತ್ರಗಳಲ್ಲಿ ಅಸಂಖ್ಯ ಸೇವೆಗಳನ್ನು ನೀಡುತ್ತದೆ. ನಮ್ಮ ಸೇವೆಗಳಲ್ಲಿ ಜನರಲ್ ಎಂಜಿನಿಯರಿಂಗ್, ಎಂಬೆಡ್ಡೆಡ್ ಮತ್ತು ಆಫ್ಟರ್ ಮಾರ್ಕೆಟ್ ಸಪೋರ್ಟ್ ಮತ್ತು ಡಿಜಿಟಲ್ ಹೊಂದಿವೆ” ಎಂದರು.

ಆಲ್ಟೆನ್ ಸಮೂಹದ ವಹಿವಾಟು 2.92 ಬಿಲಿಯನ್ ಯೂರೋಗಳಾಗಿದೆ ಮತ್ತು ಜಾಗತಿಕವಾಗಿ 42,000 ಉದ್ಯೋಗಿಗಳನ್ನು ಹೊಂದಿದೆ. ಪ್ರಸ್ತುತ ಶೇ.10ರಷ್ಟು ಜಾಗತಿಕ ಉದ್ಯೋಗಪಡೆಯುವ ಭಾರತದಿಂದ ಆಗಿದೆ ಮತ್ತು ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯು ದ್ವಿಗುಣಗೊಳ್ಳುವ ನಿರೀಕ್ಷೆ ಹೊಂದಿದ್ದೇವೆ.

ಕಂಪನಿಯ ಕುರಿತು: ಆಲ್ಟೆನ್ ಇಂಡಿಯಾ ಆಲ್ಟೆನ್ ಸಮೂಹದ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆಯಾಗಿದ್ದು ಜನರಲ್ ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಡಿಜಿಟಲ್ ಟ್ರಾನ್ಸ್‍ಫಾರ್ಮೇಷನ್ ಸೇವೆಗಳನ್ನು ಒದಗಿಸುತ್ತದೆ. ಪರಿಕಲ್ಪನೆಗಳಿಂದ ಮಾರುಕಟ್ಟೆಯ ನಂತರದ ಸೇವೆಗಳವರೆಗೆ ಆಲ್ಟೆನ್ ಇಂಡಿಯಾ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸೇವೆಗಳನ್ನು ಹೊಂದಿದೆ. ನಮ್ಮ ಸೇವೆಗಳಲ್ಲಿ ಸಾಮಾನ್ಯ ಎಂಜಿನಿಯರಿಂಗ್, ಎಂಬೆಡ್ಡೆಡ್ ಮತ್ತು ಆಫ್ಟರ್‍ಮಾರ್ಕೆಟ್ ಸಪೋರ್ಟ್ ಮತ್ತು ಡಿಜಿಟಲ್ ಒಳಗೊಂಡಿವೆ. ಇಂದಿನವರೆಗೂ 3500ಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಆಲ್ಟೆನ್ ಇಂಡಿಯಾ ಗ್ರಾಹಕರ ಅಗತ್ಯಗಳನ್ನು ನಿರ್ದಿಷ್ಟವಾಗಿ ಪೂರೈಸುವ ಕ್ಷೇತ್ರಗಳಲ್ಲಿ ಬೆಳೆದಿದೆ. ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕನ್ಸಲ್ಟಿಂಗ್‍ನಲ್ಲಿ ಮುಂಚೂಣಿಯಲ್ಲಿರುವ ಈ ಸಮೂಹವು 30ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಂಪನಿಯು ಐಟಿ ಎಂಜಿನಿಯರಿಂಗ್ ಸೇವೆಗಳಲ್ಲಿ ವಿಶ್ವದ ಮುಂಚೂಣಿಯಲ್ಲಿದ್ದು 1988ರಲ್ಲಿ ಪ್ರಾರಂಭವಾಯಿತು ಮತ್ತು ವೈಮಾನಿಕ, ಬಾಹ್ಯಾಕಾಶ, ರಕ್ಷಣೆ, ನೌಕಾಪಡೆ, ಆಟೊಮೇಷನ್, ರೈಲು, ಶಕ್ತಿ, ಜೀವ ವಿಜ್ಞಾನಗಳು, ಹಣಕಾಸು ಮತ್ತು ಟೆಲಿಕಾಂ ಕ್ಷೇತ್ರಗಳಲ್ಲಿ ಪ್ರಮುಖ ಸಂಸ್ಥೆಯಾಗಿದೆ.

Leave a Reply

Your email address will not be published. Required fields are marked *