ನಾಳೆ (ಏ.9) ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೊರವರ ಕುಣಿತದ ಕಲಾವಿದ ಆಂಜನಪ್ಪ
ರಾಮನಗರ : ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಏಪ್ರಿಲ್ 9ರ ಶನಿವಾರ ಸಂಜೆ 4 ಗಂಟೆಗೆ ನಡೆಯುವ ತಿಂಗಳ ಅತಿಥಿ ಗೌರವ-ಮಾತುಕಥೆ-ಸಂವಾದ ಕಾರ್ಯಕ್ರಮದಲ್ಲಿ ಗೊರವ ಕುಣಿತದ ಕಲಾವಿದ ಆಂಜನಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಹರೀಶ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಡಾ.ಜಿ. ಪುಂಡರೀಕ ಪಾಲ್ಗೊಳ್ಳಲಿದ್ದಾರೆ.

ಗೊರವರ ಕುಣಿತದ ಹಿರಿಯ ಕಲಾವಿದ ಟಿ. ಆಂಜನಪ್ಪ ಕಿರು ಪರಿಚಯ :
ಕರ್ನಾಟಕದ ಧಾರ್ಮಿಕ ವೃತ್ತಿ ಗಾಯಕರುಗಳಲ್ಲಿ ಗೊರವರದು ಪ್ರಧಾನ ಪರಂಪರೆ. ಗೊರವರು ಮೈಲಾರಲಿಂಗನ ಪರಮ ಭಕ್ತರು. ಗೊರವರನ್ನು ದಕ್ಷಿಣಕರ್ನಾಟಕದಲ್ಲಿ ಗೊರವ, ಗೊಗ್ಗಯ್ಯ, ಗಗ್ಗಯ್ಯ, ಗೊಡಬಡಯ್ಯ ಎಂದು ಕರೆಯುತ್ತಾರೆ. ತಲೆಗೆಕರಡಿ ಕೂದಲಿನ ಕುಲಾವಿ, ಎದೆಯ ಮೇಲೆ ಕವಡೆ ಸರದಅಡ್ಡ ಪಟ್ಟಿ ಧರಿಸಿ ಕರಿಯ ನಿಲುವಂಗಿಯನ್ನು ಉಟ್ಟಿರುತ್ತಾರೆ. ಜೋಗಿಗೆ, ದೋಣಿ, ಭಂಡಾರಬಕ್ಸ, ಗಂಟೆತ್ರಿಶೂಲ, ನಾಗಬೆತ್ತ, ಡಮರು ಇವುಗಳು ಗೊರವರ ಸಾಮಾನ್ಯ ವೇಶಭೂಷಣಗಳು. ಹಬ್ಬ, ಜಾತ್ರೆಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವ ಗೊರವರಕುಣಿತ ನೋಡುಗರಿಗೆ ಮೆರಗು ನೀಡುತ್ತವೆ. ಅವರ ವೇಷಗಳೇ ನಿಂತು ನೋಡುವಂಥವು. ದೈವದ ಸ್ತುತಿ ಮಾಡುವ ಮೊದಲು ಹಿರಿಯಗೊರವ ಪಿಳ್ಳಂಗೋವಿ ಊದಿ ತನ್ನಡಮರುಗವನ್ನು ನುಡಿಸುತ್ತಾ ನಿಲ್ಲುತ್ತಾನೆ. ನಂತರಒಟ್ಟಾಗಿದೈವದ ಸ್ತುತಿಆರಂಭವಾಗುತ್ತದೆ. ತಂಡದವರೆಲ್ಲಡಮರುಗವನ್ನು ನುಡಿಸುತ್ತಾಡಮರುಗದ ಸದ್ದಿಗೆ ತಕ್ಕಂತೆ ಮುಂದ್ಹೆಜ್ಜೆ, ಹಿಂದ್ಹೆಜ್ಜೆ ಹಾಕುತ್ತಾಕುಣಿತಆರಂಭಿಸುತ್ತಾರೆ. ಮಧ್ಯೆ ಮಧ್ಯೆತಲೆಗೆ ಹಾಕಿದಕರಡಿಕೂದಲಿನ ಜುಂಜನ್ನುತೆಗೆದು ಮುಂದೆಚಾಚಿ ತೋರಿಸಿದಂತೆ ಮಾಡಿ ಮತ್ತೆಧರಿಸುತ್ತಾರೆ. ಆವೇಷಗೊಂಡಂತೆ ಹಿಂದೆ ಮುಂದೆತಿರುಗಿಗಿರಕಿ ಹೊಡೆದಂತೆಕುಣಿಯುತ್ತಾ ಮಂಡಲಾಕಾರದಲ್ಲಿ ಸುತ್ತುತ್ತಾರೆ. ಕುಣಿತಕ್ಕಿಂತ ಮುಖ್ಯವಾದದ್ದುಅವರಕಥಾ ನಾಯಕಮೈಲಾರಲಿಂಗನಕುರಿತು ಹಾಡುವುದು.

50 ವರ್ಷಗಳಿಂದ ಪ್ರದರ್ಶನ ನೀಡುತ್ತಿರುವ ಟಿ. ಆಂಜನಪ್ಪ :
ಈ ಕಲೆಯಲ್ಲಿತಮ್ಮನ್ನು ತೊಡಗಿಸಿಕೊಂಡು ಕಳೆದ ಐವತ್ತು ವಸಂತಗಳಿಂದ ಕಲಾಪ್ರದರ್ಶನಗಳನ್ನು ನೀಡುತ್ತಿರುವಕಲಾವಿದ ಶ್ರೀ ಟಿ.ಆಂಜಿನಪ್ಪ. ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರುತಾಲ್ಲೂಕಿನ ನಗರಗೆರೆಗ್ರಾಮದಲ್ಲಿ 1950ರಲ್ಲಿ ಜನಿಸಿದರು. ತಂದೆರಾಮಯ್ಯ, ತಾಯಿ ನಾಗಮುದ್ದಮ್ಮ. ಕಲೆ ವಂಶಪರಂಪರೆಯಿಂದ ಬಂದಿದ್ದುತಾತ ಮುತ್ತಾತರುಕಲಾವಿದರಾಗಿದ್ದರು. ಹೂವಿನಹಡಗಲಿ ತಾಲ್ಲೂಕಿನ ಹಿರೇಮೈಲಾರದ ಗುರುಗಳಾದ ಜಯಚಂದ್ರಒಡೆಯರ್ ಸ್ವಾಮಿಗಳು ಮತ್ತುಕಾಡಪ್ಪಒಡೆಯರ್ಇವರ ಬಳಿ ಕಲೆಯನ್ನುತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕಲಿತು ಗುರುಗಳ ಕುದುರೆಯ ಹಿಂದೆ ಬಿಲ್ಲಾಜವಾನನಾಗಿ ಸುತ್ತೇಳು ಜಿಲ್ಲೆಗಳಲ್ಲಿ ಸುತ್ತಿ ಕಲೆ ಪ್ರದರ್ಶನಗಳನ್ನು ನೀಡಿದ್ದಾರೆ. ಮುಡುಕುತೊರೆ, ಐನಗುಡಿ, ನಾಗಮಂಗಲದ ಮೈಲಾರಪಟ್ನ, ಬೆಂಗಳೂರು ಸಂಪಂಗಿರಾಮನಗರ, ಮಾದೇಶ್ವರ ಬೆಟ್ಟ ಸೇರಿದಂತೆ ಸಾವಿರಾರುಜಾತ್ರೆ, ಹಬ್ಬ, ಉತ್ಸವಗಳಲ್ಲಿ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥವಾಗಿ ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಲೋಕಸಿರಿ-72ರ ತಿಂಗಳ ಅತಿಥಿಕಾರ್ಯಕ್ರಮದಲ್ಲಿಗೌರವಿಸಲಾಗುತ್ತಿದೆ.