ಪ್ರಥಮ ಮಹಾ ಬಾಕ್ಸಿಂಗ್ ಪಂದ್ಯೋತ್ಸವ ಉದ್ಘಾಟನೆ : ಮೂರು ಬಾರಿ ಡಬ್ಲ್ಯುಬಿಸಿ ಏಷ್ಯಾ ಛಾಂಪಿಯನ್ ಆಗಿರುವ ನೀರಜ್ ಗೋಯಟ್
• ಮೂರು ಬಾರಿ ಡಬ್ಲ್ಯುಬಿಸಿ ಏಷ್ಯಾ ಟೈಟಲ್ ಗಳಿಸಿರುವ ನೀರಜ್ ಗೋಯಟ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಕುಸ್ತಿ ಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
• ಮುಖ್ಯ ಧ್ಯೇಯವಾಕ್ಯ : ‘ಮಣಿಯುವ ಮುನ್ನ ನೀನೇ ಮಣಿಸು’ – ಪಂಚ್ ಇಟ್ ಬಿಫೋರ್ ಇಟ್ ನಾಕ್ಸ್ ಯೂ ಔಟ್ (ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುವ ಆಶಯದೊಂದಿಗೆ)
• ಪಂದ್ಯಗಳು 2022, ಎಪ್ರಿಲ್ 9 ಮತ್ತು 10 ರಂದು ಎರಡು ದಿನ ನಡೆಯಲಿವೆ.

ಮಣಿಪಾಲ್ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಪ್ರಥಮ ಬಾರಿಗೆ ಮೆಗಾ ಬಾಕ್ಸಿಂಗ್ ಪಂದ್ಯವನ್ನು ಇಂದು ಎಂಐಟಿ ಸ್ಟೂಡೆಂಟ್ಸ್ ಪ್ಲಾಜಾದಲ್ಲಿ ಆಯೋಜಿಸುತ್ತಿದೆ. ‘ಮಾಹೆ ಮಣಿಪಾಲ್ ಫೈಟ್ ನೈಟ್’ ಎಂಬ ಶೀರ್ಷಿಕೆಯ ಈ ಪಂದ್ಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಟುಗಳು ಭಾಗವಹಿಸಲಿದ್ದಾರೆ. ಈ ಪಂದ್ಯಾಟದ ಮುಖ್ಯ ಧ್ಯೇಯವಾಕ್ಯ ‘ಮಣಿಯುವ ಮುನ್ನ ನೀನೇ ಮಣಿಸು’ ಎಂಬುದಾಗಿದ್ದು ಇದು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಆಶಯವನ್ನು ಹೊಂದಿದೆ. ಸುಪರ್ ಬಾಕ್ಸಿಂಗ್ ಲೀಗ್ [ಎಸ್‌ಬಿಎಲ್] ಪ್ರಸ್ತುತಿಪಡಿಸುತ್ತಿರುವ ಈ ಮಹಾಕ್ರೀಡಾಮೇಳವನ್ನು ಮಾಹೆಯು ನಿಪ್ಪಾನ್ ಟೆಲಿಗ್ರಾಫ್ ಮತ್ತು ಟೆಲಿಫೋನ್ ಪಬ್ಲಿಕ್ ಕಾರ್ಪೊರೇಶನ್ [ಎನ್‌ಟಿಟಿ- Nippon Telegraph and Telephone Public Corporation] ಸಹಭಾಗಿತ್ವದೊಂದಿಗೆ ಮತ್ತು ಐ-ಆನ್[i-On], ಡಿ- ವಿಯೋಸ್ [D-VIOS], ಡಿ2ಎಲ್ ಕಾರ್ಪೊರೇಶನ್ [D2L Corporation], ಸಿಯಾರ್ಸ್ [Searce] ಮತ್ತು ಟಿ. ಕೆ. ಎಲಿವೇಟರ್ [TK Elevator] ಸಂಸ್ಥೆಗಳ ಸಹಪ್ರಾಯೋಜಕತ್ವದೊಂದಿಗೆ ಸಂಘಟಿಸುತ್ತಿದೆ.

ಈ ಮಹಾ ಪಂದ್ಯಾಟವನ್ನು ಮೂರು ಬಾರಿ ಡಬ್ಲ್ಯುಬಿಸಿ ಏಷಿಯಾ ಗೌರವ ಗಳಿಸಿರುವ ಮತ್ತು ಡಬ್ಲ್ಯುಬಿಸಿಯ ಜಾಗತಿಕ ಮಟ್ಟದ ಪ್ರಥಮ ಭಾರತೀಯ ಬಾಕ್ಸರ್ ಆಗಿರುವ ನೀರಜ್ ಗೋಯಟ್ ಅವರು ಉದ್ಘಾಟಿಸಲಿದ್ದಾರೆ. ಎಂಐಟಿಯ ನಿರ್ದೇಶಕರಾಗಿರುವ ಕಮಾಂಡರ್ [ಡಾ.] ಅನಿಲ್ ರಾಣಾ, ಮಾಹೆ ಕ್ರೀಡಾ ಮಂಡಳಿಯ ಕಾರ್ಯದರ್ಶಿಯಾಗಿರುವ ಡಾ. ವಿನೋದ್ ನಾಯಕ್, ಸಾರ್ವಜನಿಕ ಸಂಪರ್ಕ ವಿಭಾಗ ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ಸಂವಿಭಾಗದ ನಿದೇಶಕರಾಗಿರುವ ಎಸ್. ಪಿ. ಕಾರ್, ಮಾಹೆಯ ಐಟಿ ಮತ್ತು ಡಿಜಿಟಲ್ ವಿಭಾಗದ ನಿರ್ದೇಶಕರಾಗಿರುವ ಪ್ರೊ. ಬಾಲಕೃಷ್ಣ ರಾವ್, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಾಗಿರುವ ಡಾ. ಗೀತಾ ಮಯ್ಯ, ಮಾಹೆಯ ಪರ್ಚೇಸ್ ವಿಭಾಗದ ನಿರ್ದೇಶಕ ವಿಠಲದಾಸ ಭಟ್, ಮಾಹೆಯ ಜನರಲ್ ಸರ್ವಿಸಸ್-ವಿಭಾಗದ ನಿರ್ದೇಶಕ ಕರ್ನಲ್ ಪ್ರಕಾಶ್‌ಚಂದ್ರ ಉಪಸ್ಥಿತರಿದ್ದಾರೆ.

ನೀರಜ್ ಗೋಯಟ್ ಅವರು 2008ರಲ್ಲಿ ‘ಭಾರತದ ಅತ್ಯಂತ ಭರವಸೆಯ ಕುಸ್ತಿಪಟು’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಡಬ್ಲ್ಯುಬಿಸಿ ಜಾಗತಿಕ ಮಟ್ಟದ ಪ್ರಥಮ ಭಾರತೀಯ ಬಾಕ್ಸರ್ ಆಗಿದ್ದಾರೆ. ಅವರು ಮೂರು ಬಾರಿ ಡಬ್ಲ್ಯುಬಿಸಿ ಏಷ್ಯಾದ ಟೈಟಲ್ ಗೆದ್ದಿದ್ದಾರೆ. ಇತ್ತೀಚೆಗೆ ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್‌ನ ಸುಹೃದ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಗೌರವವನ್ನು ಪಡೆದ ಏಕಮಾತ್ರ ಭಾರತೀಯ ಅವರು. ಈ ಹುದ್ದೆಯ ಅವಧಿಯಲ್ಲಿ ಅವರು ಬಾಕ್ಸಿಂಗ್ ಪಂದ್ಯಕ್ಕೆ ವಿಶೇಷವಾದ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.
2022, ಎಪ್ರಿಲ್ 9 ಮತ್ತು 10 ರ ಎರಡು ದಿನಗಳಲ್ಲಿ ಎಂಐಟಿ ಚೌಕಾಂಗಣ [ಕ್ವಾಡ್ರಾಂಗಲ್]ನಲ್ಲಿ ಪ್ರತಿದಿನ ನಾಲ್ಕರಂತೆ ಎಂಟು ಬಾಕ್ಸಿಂಗ್ ಪಂದ್ಯಗಳು ನಡೆಯಲಿವೆ. ಬಾಕ್ಸಿಂಗ್ ಪಟುಗಳು ಸೂಪರ್ ಫೆದರ್ ವೆಯ್ಟ್, ಸುಪರ್ ಲೈಟ್ ವೆಯ್ಟ್, ಸೂಪರ್ ಮಿಡ್ಲ್ ವೆಯ್ಟ್, ಲೈಟ್ ಹೆವಿ ವೈಟ್, ವೆಲ್ಟರ್ ವೆಯ್ಟ್‌ನಂಥ ಬೇರೆ ಬೇರೆ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ಮಾಹೆ [ಕ್ರೀಡಾಮಂಡಳಿ] ]ಸ್ಟೋರ್ಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಅವರ ಹೇಳುವುದು ಹೀಗೆ : ಮಾಹೆಯಲ್ಲಿ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಯಾವತ್ತೂ ಅವಕಾಶಗಳು ತೆರೆದಿಟ್ಟಿವೆ. ಮರೀನಾದ ಒಳಾಂಗಣ ಕ್ರೀಡಾಂಗಣದಲ್ಲಿ ಹೊಸ ಸವಲತ್ತುಗಳೊಂದಿಗೆ ಮತ್ತು ನುರಿತ ತರಬೇತುದಾರರ ಮೂಲಕ ಕ್ರೀಡಾಳುಗಳ ಕೌಶಲವನ್ನು ವೃದ್ಧಿಸಲು ಅವಕಾಶ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೇರುವ ಪ್ರತಿಭೆ ನಮ್ಮ ಕ್ರೀಡಾಪಟುಗಳಲ್ಲಿ ಇದೆ. ಪ್ರಸ್ತುತ ಈ ಮಹಾಬಾಕ್ಸಿಂಗ್ ಪಂದ್ಯವು ಮಾಹೆಯ ಕ್ರೀಡಾಪಟುಗಳ ಅವರ ಉತ್ಸಾಹವನ್ನು ಹಿಗ್ಗಿಸುತ್ತದೆ ಮತ್ತು ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಕೂಡ ಪ್ರೇರಣೆಯನ್ನು ನೀಡಲಿದೆ.
ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸಂವಿಭಾಗದ ನಿರ್ದೇಶಕ ಎಸ್. ಪಿ. ಕಾರ್ ಹೇಳುವುದು ಹೀಗೆ : ಇಂಥ ಪಂದ್ಯವನ್ನು ಪ್ರಥಮ ಬಾರಿಗೆ ಮಾಹೆಯಲ್ಲಿ ಆಯೋಜಿಸಲು ನಮಗೆ ತುಂಬ ಹೆಮ್ಮೆ ಎನಿಸುತ್ತದೆ. ಕ್ರೀಡೆಯು ವಿದ್ಯಾರ್ಥಿಯ ಒಟ್ಟಾರೆ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಾಕ್ಸಿಂಗ್ ಅಂತೂ ದೈಹಿಕ ಸಾಮರ್ಥ್ಯ, ಚುರುಕುತನ, ತ್ವರಿತ ಯೋಚನೆಯನ್ನು ಪ್ರೇರೇಪಿಸುತ್ತದೆ. ‘ಮಣಿಯುವ ಮುನ್ನ ನೀನೇ ಮಣಿಸು’ ಎಂಬ ಧ್ಯೇಯವಾಕ್ಯದೊಂದಿಗೆ ಮಾದಕ ವಸ್ತುಗಳ ಜಾಗೃತಿ ಮೂಡಿಸುವ ಆಶಯವನ್ನು ಇಲ್ಲಿ ಇಟ್ಟುಕೊಂಡಿರುವುದು ಅರ್ಥಪೂರ್ಣವಾಗಿದೆ.

ಮೊದಲ ದಿನ ಸಂಗೀತ ಬಿರ್ಡಿ [ಬ್ರಿಟಿಷ್ ಚಾಂಪಿಯನ್], ನೀತೂ [ರಾಜ್ಯ ಮಟ್ಟದ ರಜತಪದಕ ವಿಜೇತ], ನಿತ್ವೀರ್ ಸಿಂಗ್ [ರಾಜ್ಯ ಮಟ್ಟದ ಸ್ವರ್ಣ ಪದಕ ವಿಜೇತ], ಅಂಕಿತ್ ಕುಮಾರ್ [ ಎರಡುಬಾರಿ ರಾಜ್ಯ ಮಟ್ಟದ ರಜತಪದಕ ವಿಜೇತ], ಸಂದೀಪ್ [ಎರಡು ಬಾರಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್], ಲವ್‌ಪ್ರೀತ್ [ಅಖಿಲಭಾರತ ವಿಶ್ವವಿದ್ಯಾನಿಲಯ ಕಂಜಿನ ಪದಕ ವಿಜೇತ], ಗುರುಪ್ರೀತ್ ಸಿಂಗ್ [ಕಿರಿಯ ರಾಜ್ಯಮಟ್ಟದ ರಜತ ಪದಕ ವಿಜೇತ] ಮತ್ತು ಅಕಾಶ್ ದೀಪ್ ಸಿಂಗ್ [ರಾಜ್ಯ ಮಟ್ಟದ ರಜತ ಪದಕ ವಿಜೇತ] ಇವರು ಭಾಗವಹಿಸುವುದು ವಿಶೇಷವಾಗಿದೆ.
ಎರಡನೆಯ ದಿನದ ಪಂದ್ಯವು ಬಹು ನಿರೀಕ್ಷಿತವಾಗಿದೆ. ನೀರಜ್ ಗೋಯಟ್ ಮತ್ತು ಸುರೇಶ್ ಪಶಾಮ್ [ 2018 ರ ರಾಷ್ಟ್ರೀಯ ಪದಕ ವಿಜೇತ ಮತ್ತು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಚಾಂಪಿಯನ್] ಅವರ ಹಣಾಹಣಿ ನಡೆಯಲಿರುವುದು ವಿಶೇಷವಾಗಿದೆ.
ಎರಡನೆಯ ದಿನ ವಿಕಾಸ್ ಫಂಗಲ್ [ಉತ್ತರಭಾರತ ಮಟ್ಟದ ಸ್ವರ್ಣ ಪದಕ ವಿಜೇತ], ಸಾಗರ್ ಚಂದ್ [4 ಶ್ರೇಷ್ಠ ರಾಷ್ಟ್ರೀಯ ಚಾಂಪಿಯನ್ ಕಂಚಿನ ಪದಕ ವಿಜೇತ] ಜಸ್‌ಪ್ರೀತ್ ಸಿಂಗ್ [ಹಿರಿಯ ರಾಜ್ಯ ಮಟ್ಟದ ಸ್ವರ್ಣ ಪದಕ ವಿಜೇತ], ಹರ್‌ಪಾಲ್ ಸಿಂಗ್ [ಐಯರ್ಲೆಂಡ್‌ನ ಟಿಆರ್‌ಜಿ-ಕಮ್-ಗ್ರೂಪ್‌ನ ಸ್ವರ್ಣ ವಿಜೇತ], ಮನ್‌ದೀಪ್ ದಲಾಲ್ [ಮಹಾರಾಷ್ಟ್ರದ ಸ್ವರ್ಣ ಪದಕ ವಿಜೇತ], ಮ್ಯಾಕ್ಸ್ [ಜರ್ಮನ್ ಪ್ರೊಫೆಶನಲ್ ಬಾಕ್ಸಿಂಗ್‌ನಲ್ಲಿ 13ನೆಯ Rank ವಿಜೇತ ]