ಶೋಭಾಯಾತ್ರೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಭಾಗಿ : ಕಲಾಮೇಳಗಳ ಮೆರಗು : ಯೋಗೇಶ್ವರ್ ನೇತೃತ್ವ
ಚನ್ನಪಟ್ಟಣ : ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಾಯಾತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ಅಕ್ಷರಶಃ ಈಡೀ ನಗರದ ಪ್ರಮುಖ ರಸ್ತೆಯಲ್ಲಾ ಕೇಸರಿಮಯವಾಗಿತ್ತು.
ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರ ಪೋಟೋವನ್ನು ಇರಿಸಿ ಪೂಜೆ ಸಲ್ಲಿಸಿ, ನಂತರ ಪ್ರಮುಖ ಸ್ಥಳಗಳಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿಯನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ರಾಮದೇವರ ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೆರವಣಿಗೆ ಮೆರಗು ಹೆಚ್ಚಿಸಿದರು.
ಶೋಭಾಯಾತ್ರೆಯಲ್ಲಿ ಕಲಾಮೇಳಗಳ ಮೆರಗು –
ಶೋಭಾಯಾತ್ರೆಯಲ್ಲಿ ಕರಾವಳಿ ಭಾಗದ ಚಂಡೆ, ಮಹಿಳಾ ಡೊಳ್ಳು ಕುಣಿತದ ತಂಡ, ರಾಮ,ಸೀತಾ,ಲಕ್ಷ್ಮಣ, ಹನುಮಂತನ ಪ್ರತಿಕೃತಿಯ ಬೃಹತ್ ಬೆದರು ಬೊಂಬೆಗಳು, ಪೂಜೆ ಮತ್ತು ವೀರಗಾಸೆ ಕುಣಿತದ ತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಸಿಪಿವೈ ನೇತೃತ್ವದಲ್ಲಿ ಶೋಭಾಯಾತ್ರೆ –
ಇದಕ್ಕೂ ಮೊದಲು ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆ ಗೆ ಯೋಗೇಶ್ವರ್ ಚಾಲನೆ ಕೊಟ್ಟರು.
ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಶೋಭಾಯಾತ್ರೆ ಯಲ್ಲಿ ಭಾಗಿಯಾಗಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಲಾಯಿತು.
ಎಲ್ಲರೂ ಒಟ್ಟಾಗಿ ಬಾಳಲು ಈ ಶೋಭಾಯಾತ್ರೆ ಮಾಡಲಾಗ್ತಿದೆ. ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ರಾಮನ ಉತ್ಸವ ನಡೆಯುತ್ತಿದೆ. ಇದು ಧಾರ್ಮಿಕವಾಗಿ ಪವಿತ್ರವಾದ ದಿನವಾಗಿದೆ ಎಂದರು.

ಇನ್ನು ಶೋಭಾಯಾತ್ರೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ದಿನದಂದು ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಮುಂದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಇದೇ ವೇಳೆ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಮಸ್ಲಿಂ ಬಾದಂವರು ಯಾತ್ರೆಯಲ್ಲಿ ಭಾಗಿ –
ಇನ್ನು ಈ ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಸಹ ಭಾಗಿಯಾಗಿ ಹಿಂದೂ ಮುಸ್ಲಿಂ ಬಾಯಿ ಬಾಯಿ ಎಂಬುದನ್ನ ಸಾಬೀತು ಪಡಿಸಿದರು. ಮೆರವಣಿಗೆಯನ್ನ ವೀಕ್ಷಣೆ ಮಾಡಿದ ನೂರಾರು ಮುಸ್ಲಿಂ ಯುವಕರು. ಈ ವೇಳೆ ಮುಸ್ಲಿಂ ಯುವಕನೋರ್ವ ಮಾತನಾಡಿ, ಮೊದಲು ನಾವು ಭಾರತೀಯರು. ಹಿಂದಿನಿಂದಲೂ ನಮ್ಮ ಚನ್ನಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂದವ್ಯದಿಂದ ಇದ್ದೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ. ಅವರ ಹಬ್ಬಕ್ಕೆ ನಾವು ಹೋಗುತ್ತೇವೆ. ಈ ಹಿನ್ನಲೆಯಲಿ ನಾವೆಲ್ಲರೂ ಕೂಡ ಶ್ರೀರಾಮ ನವಮಿಗೆ ನೀರು ಹಂಚುತ್ತಿದ್ದೇವೆ. ನಾವೆಲ್ಲರೂ ಕೂಡ ಬಾಂದವ್ಯದಿಂದ ಇರುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ಸಿ.ಪಿ.ಯೋಗೇಶ್ವರ್ ರವರಿಗೆ ನೂರಾರು ಮುಸ್ಲಿಂ ಬಾದಂವರು ಕೂಡ ಅಭಿನಂದನೆ ಸಲ್ಲಿಸಿದರು.