ಮಾಗಡಿ ರಂಗನಾಥಸ್ವಾಮಿ ರಥೋತ್ಸವ : ಗಂಗಾಮತಸ್ಥರಿಂದ ಶ್ರೀಮುಖ ಸೇವೆ
ರಾಮನಗರ: ಏ.14ರಂದು ಜಿಲ್ಲೆಯ ಮಾಗಡಿ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಗಣ್ಯರಿಗೆ ಆಹ್ವಾನ ನೀಡುವ ಸ್ವಾಮಿಯ ಶ್ರೀಮುಖ ಸೇವೆ ಲಗ್ನಪತ್ರಿಕೆ ನಡೆಸಲಾಯಿತು. ಪೂರ್ವಿಕರ ಕಾಲದಿಂದಲೂ ಈ ಕೈಂಕರ್ಯವನ್ನು ದೇವಸ್ಥಾನದ ವತಿಯಿಂದ ಗಂಗಾಮತಸ್ಥರಿಗೆ ವಹಿಸಲಾಗಿದೆ.
ಬ್ರಹ್ಮರಥೋತ್ಸವಕ್ಕೆ ಪುರದ ಗಣ್ಯರಾದ ಪ್ರಧಾನ ಬ್ರಾಹ್ಮಣರನ್ನು ಮಾಗಡಿ ತಾಲೂಕು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ರಾಮಮಂದಿರಗಳಲ್ಲಿ ಲಗ್ನ ಪತ್ರಿಕೆ ಓದಿ ಪೂಜೆ ಮಾಡಿ ಪ್ರಸಾದ ವಿನಿಯೋಗ ನಂತರ ದೇವಸ್ಥಾನಕ್ಕೆ ಹಿಂದಿರುಗಿ ಬರುವುದು ಪ್ರತಿ ವರ್ಷ ವಾಡಿಕೆಯಾಗಿದ್ದು, ಈ ಬಾರಿಯೂ ಕೂಡ ಮಾಗಡಿ ತಾಲೂಕು ಗಂಗಾಮತಸ್ಥರ ಸಂಘದಿಂದ ಶ್ರೀಮುಖ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.
ಮಾಗಡಿ ತಾಲ್ಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶ್ರೀಮುಖ ಸೇವಾಕಾರ್ಯ ನಡೆಯಿತು.
ಗಂಗಮತಸ್ಥ ಮುಖಂಡರಾದ ತಿರುಮಲೆ, ಮೋಹನ್, ಜಯರಾಮು, ಸಿ.ಪಿ ಪಾಳ್ಯದ ಯಾಲಕಪ್ಪ, ಸುನಿಲ್, ಮಂಡಿ ಸಿದ್ದರಾಜ, ಕಲ್ಯಾ ಕಾಂತರಾಜು, ದಯಾನಂದ್, ಧನಂಜಯ, ಟಿ.ಎ. ವಾಸುದೇವ, ಷಣ್ಮುಕಾನಂದ, ಭೈರಪ್ಪ, ಜೋತಿನಗರ ಧನಂಜಯ, ಮೂರ್ತಿ, ಕುಮಾರ್, ಲೋಕೇಶ್, ಪ್ರಧಾನ ಅರ್ಚಕರಾದ ವೆಂಕಟೇಶ್ ಐಯಂಗಾರ್, ಪಾರುಪತ್ತೆದಾರ ಸೋಮಶೇಖರ್ ಹಾಗೂ ದೇವಸ್ಥಾನದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.