ವೆಂಕಟಾಚಲ ಶಾಸ್ತ್ರೀ, ಗೊ.ರು.ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಪ್ರದಾನ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಾಹಿತಿಗಳಾದ ಗೊ.ರು.ಚನ್ನಬಸಪ್ಪ, ಟಿ.ವಿ. ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಿದರು.
ಕುಲಪತಿ ಸ.ಚಿ. ರಮೇಶ, ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಅಧ್ಯಯನಾಂಗದ ನಿರ್ದೇಶಕ ಪಿ. ಮಹದೇವಯ್ಯ, ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ, ವಿವಿಧ ನಿಕಾಯಗಳ ಡೀನ್, ಸಿಂಡಿಕೇಟ್ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *