ಶ್ರೀರಾಮ ರಥೋತ್ಸವದಲ್ಲಿ ಪುನೀತ್ ರಾಜಕುಮಾರ್ ಪೋಟೊ ಹಿಡಿದು ಗಮನ ಸೆಳೆದ ಶ್ರೀರಾಮ ವೇಷಧಾರಿ ವಿರಾಂತ್ ವಿಕಾಸ್ ರಾಜ್

ರಾಮನಗರ : ಪುರಾಣ ಪ್ರಸಿದ್ಧ ಕ್ಷೇತ್ರ ರಾಮದೇವರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮದೇವರ ಮಹಾ ರಥೋತ್ಸವದಲ್ಲಿ ಪುನೀತ್ ರಾಜಕುಮಾರ್ ಪೋಟೊ ಹಿಡಿದು ಶ್ರೀರಾಮ ವೇಷಧಾರಿ ವಿರಾಂತ್ ವಿಕಾಸ್ ರಾಜ್ ಗಮನ ಸೆಳೆದರು.

ಪುನೀತ್ ರಾಜಕುಮಾರ್ ಅವರ ಪೋಟೊ ಹಿಡಿದು ಅಭಿಮಾನ ಮೆರೆದ ಶ್ರೀರಾಮ ವೇಷಧಾರಿ ವಿರಾಂತ್ ವಿಕಾಸ್ ರಾಜ್ ನೋಡುಗರ ಗಮನ ಸೆಳೆದರು. ಇವರ ಜೊತೆ ಸೆಲ್ಪಿ ತೆಗೆಯಲು ಜನರು ಮುಗಿಬಿದ್ದರು.

ರಾಮನಗರದ ವಿರಾಂತ್ ವಿಕಾಸ್ ರಾಜ್ ಬಿಜೆಪಿ ಯುವ ಮುಖಂಡ ಡಿ. ನರೇಂದ್ರ ಹಾಗೂ ಕೆ.ಎಸ್. ಚೈತ್ರ ಅವರ ಪುತ್ರ.

ಪುನೀತ್ ರಾಜಕುಮಾರ್ ಮಾದರಿ :
ಪುನೀತ್ ರಾಜ್ ಕುಮಾರ್ ರವರು ಮಾಡಿದ ಸಮಾಜ ಸೇವೆ ಎಲ್ಲರಿಗೂ ಮಾದರಿ. ಅವರು ಇನ್ನಷ್ಟು ಕಾಲ ಬದುಕಬೇಕಿತ್ತು. ಅವರು ಬದುಕಿದ್ದರೆ ಇನ್ನಷ್ಟು ಜನರಿಗೆ ಸಹಾಯ ಮಾಡುತ್ತಿದ್ದರು, ಚಿತ್ರ ರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು, ಭಾರತ ರತ್ನ ಪ್ರಶಸ್ತಿಗೆ ಅರ್ಹತೆ ಇರುವ ವ್ಯಕ್ತಿಯಾಗುತ್ತಿದ್ದರು. ಅವರ ಮಾರ್ಗದಲ್ಲಿ ನಾವು ಸಮಾಜದಲ್ಲಿ ಕೆಲಸವವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ಯುವಮುಖಂಡ ಡಿ. ನರೇಂದ್ರ ತಿಳಿಸಿದರು.