ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ : ಸಿ.ಆರ್. ನವೀನ್ ಸೇರಿ ಏಳು ಮಂದಿಗೆ ಮುಂಭಡ್ತಿ

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರೂಪ್ `ಎ’ ವೃಂದದ ಹಿರಿಯ ಶ್ರೇಣಿಯ ಉಪನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಿ ಆದೇಶಿಸಲಾಗಿದೆ.

ಮುಂಭಡ್ತಿ ಹೊಂದಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆ : ಮಂಜುನಾಥ್ಡೊಳ್ಳಿನ-ಧಾರವಾಡ, ಪಲ್ಲವಿ ಹೊನ್ನಾಪುರ-ಕೋಲಾರ, ಸಿದ್ದೇಶ್ವರಪ್ಪ ಜಿ.ಬಿ.- ಕಲಬುರಗಿ, ಸಿ.ಆರ್. ನವೀನ್-ರಾಮನಗರ, ಗುರುನಾಥ ಕಡಬೂರ-ಬೆಳಗಾವಿ, ಅಶೋಕ್ ಕುಮಾರ್ ಡಿ.-ದಾವಣಗೆರೆ ಹಾಗೂ ರಾಮಲಿಂಗಪ್ಪ-ಬಳ್ಳಾರಿ ಜಿಲ್ಲೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *