ಸಾವಿತ್ರಿಬಾಯಿ ಫುಲೆ ಮಹಿಳಾ ಸ್ವಾಭಿಮಾನದ ಸಂಕೇತ : ಸಿ.ಎಂ. ಲಿಂಗಪ್ಪ

ರಾಮನಗರ: ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಸಾವಿತ್ರಿಬಾಯಿ ಫುಲೆ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಆ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು. ಅವರ ತತ್ವಾದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು’ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಮಾಜಿ ಶಾಸಕರು , ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ ಅವರು ಹೇಳಿದರು.

ನಗರದ ಕೃಷ್ಣಸ್ಮ್ರುತಿ ಕಲ್ಯಾಣ ಮಂಟಪದಲ್ಲಿ  ಏರ್ಪಡಿಸಿದ್ದ ಶ್ರೀಮತಿ ಸಾವಿತ್ರಿಬಾಯಿ ಜ್ಯೋತಿ ಬಾಪುಲೆ ಕರ್ನಾಟಕ ರಾಜ್ಯ ಬಲಿಜ ಮಹಿಳಾ ಸಂಘದವತಿಯಿಂದ

ಭಾರತದ ಅಕ್ಷರದಾತ ಮಹಾತ್ಮ ಜ್ಯೋತಿ ಬಾಪುಲೆ ರವರ 196 ನೇ ಜನ್ಮದಿನ ಕಾರ್ಯಕ್ರಮದಲ್ಲಿ ರಾಮನಗರದಲ್ಲಿ ಮೊಟ್ಟಮೊದಲ ಬಾರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರನ್ನು ಗುರುತಿಸಿ ವೈದ್ಯರಿಗೆ ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು‘ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಸಾವಿತ್ರಿ ಅವರು ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಕಾರಣ. ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ಹಾಗೂ ಅವಕಾಶಗಳು ಲಭಿಸುತ್ತವೆ. ಎಲ್ಲರೂ ವಿಶೇಷವಾಗಿ ಹೆಣ್ಣುಮಕ್ಕಳು ಕೂಡ ಶಿಕ್ಷಣ ಪಡೆಯಬೇಕು. ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ, ಮತ್ತು ಮಹಾತ್ಮ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ’ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಅನೇಕ ಹಿರಿಯರ ಬಲಿಜ ಮುಖ್ಯಸ್ಥರ ಮಾರ್ಗದರ್ಶನ ಪಡೆದು ನಮ್ಮ ರಾಮನಗರದಲ್ಲು ಮಹಿಳಾ ಬಲಿಜಾ ಸಂಘವನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧ್ಯಕ್ಷರಾದ ಸುಧಾರಾಣಿ ಕಲಾಪ್ರಿಯ ಹೇಳಿದರು.

ರಾ.ಚನ್ನಪಟ್ಟಣ ಪ್ರಾಧಿಕಾರದ ಮಾಜಿ ಅಧ್ಯಕ್ಷರು , ಕಾಂಗ್ರೆಸ್ ಮುಖಂಡರಾದ ಸಿ.ಎನ್.ಆರ್.ವೆಂಕಟೇಶ್ ಮಾತನಾಡಿ ಲಕ್ಷಾಂತರ ದಲಿತ, ಶೂದ್ರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯೆದಾನ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ದಂಪತಿಗೆ ಸಲ್ಲುತ್ತದೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ವಿದ್ಯೆ ಮನುವಾದಿಗಳ ಹಿಡಿತದಲ್ಲಿತ್ತು. ಎಲ್ಲ ವರ್ಗದ ಜನರಿಗೆ ವಿದ್ಯೆ ಕಲಿಯಲು ಸಾಧ್ಯವಿದ್ದಿಲ್ಲ. ಅಂತಹ ಕಠಿಣ ಸಂದರ್ಭದಲ್ಲಿ ಫುಲೆ ದಂಪತಿಗಳು ಮನುವಾದಿಗಳಿಂದ ಅವಮಾನ, ನಿಂದನೆ ಹಾಗೂ ಹಲ್ಲೆ ಸಹಿಸಿಕೊಂಡು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು,
‘ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಸಮಾಜಕ್ಕೆ ಸ್ಫೂರ್ತಿ. ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯರಾದರು. ಸಮಾಜದಲ್ಲಿರುವ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ಎಲ್ಲರೂ ಶಿಕ್ಷಣವಂತರಾಗಬೇಕು’ ಎಂದರು.

ಮಹಾತ್ಮ ಜ್ಯೋತಿ ಬಾಪುಲೆ ಪ್ರಶಸ್ತಿಗೆ ಭಾಜನರಾಗಿರುವ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ನಟರಾಜ್ ಶೆಟ್ಟಿ ಮಾತನಾಡಿ, ‘ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ್ದು ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣದ ಹಿಂದಿನ ಸ್ಫೂರ್ತಿಯಾಗಿದ್ದಾರೆ. ಅಂದಿನ ಸಮಾಜದಲ್ಲಿ ಮಕ್ಕಳಿಗೆ ಮೊದಲು ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಅವರ ಹೆಸರಿನಲ್ಲಿಯೇ ಶಿಕ್ಷಕರ ದಿನವನ್ನು ಆಚರಿಸುವುದು ಹೆಚ್ಚು ಸೂಕ್ತ ಮತ್ತು ಅರ್ಥಪೂರ್ಣವಾದದ್ದು’ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಪ್ರದೇಶ ಬಲಿಜ ಸಂಘದ ಉಪಾಧ್ಯಕ್ಷ ಬಳೇಪೇಟೆ ವೆಂಕಟೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೃಂದಾ, ವೈದ್ಯರತ್ನ ಪ್ರಶಸ್ತಿಗಳನ್ನು ಡಾ.ವಾಣಿಶ್ರೀ, ಡಾ.ಎ.ಟಿ.ಎಸ್.ರಘುರಾಮ್, ಡಾ.ಕೆ.ಪಿ.ಹೆಗ್ಗಡೆ, ಆರೋಗ್ಯ ಸೇವಾ ರತ್ನ ಪ್ರಶಸ್ತಿಯನ್ನು ಗಣೇಶ್ ಅವರಿಗೆ, ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ವನಜಾ ಎ.ಎಸ್.ಕೃಷ್ಣಮೂರ್ತಿ, ಪದ್ಮಮ್ಮ ಕಲಾಪ್ರಿಯ, ಶೇಷಗಿರಿರಾವ್, ಕೆಂಪೇಗೌಡ, ಧಾರ್ಮಿಕ ಸೇವಾ ರತ್ನ ಪ್ರಶಸ್ತಿಯನ್ನು ಜಿ.ಚಂದ್ರು ಅವರಿಗೆ, ಸಂಗೀತಾ ಸೇವಾ ರತ್ನ ಪ್ರಶಸ್ತಿಯನ್ನು ಚಿಂತಲಪಲ್ಲಿ ಶ್ರೀನಿವಾಸ್ ರವರಿಗೆ, ಪಿಟೀಲು ಸೇವಾ ರತ್ನ ಪ್ರಶಸ್ತಿಯನ್ನು ರುದ್ರಾರಾಧ್ಯರವರಿಗೆ , ಮೃದಂಗ ಸೇವಾ ರತ್ನ ಪ್ರಶಸ್ತಿಯನ್ನು ಶ್ರೀನಿವಾಸ್ ಅನಂತರಾಮಯ್ಯ ಇವರುಗಳಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತ್ತು.
ಈ ಸಂದರ್ಭದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಲಯನ್ಸ್ ಸಂಸ್ಥೆ ರಾಮನಗರ ಸಿಲ್ಕ್ ಸಿಟಿ ವತಿಯಿಂದ ಪಾನಕ ವಿತರಿಸಲಾಯಿತು,
ಸಂಸ್ಥಾಪಕ ಜಿ.ಎಲ್.ಸಂಪಂಗಿರಾಮು, ರಾಜ್ಯ ಉಪಾಧ್ಯಕ್ಷೆ ಎಂ.ಶಾಂತಮ್ಮ, ನಿರ್ದೇಶಕರಾದ ಕೆ.ಆರ್.ಜ್ಯೋತಿ ಸತ್ಯನಾರಾಯಣ ಇನ್ನಿತರರು ಇದ್ದರು

Leave a Reply

Your email address will not be published. Required fields are marked *