ಆಸರೆ ನಿರಾಶ್ರಿತರ ಮತ್ತು ವೃದ್ಧಾಶ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ : ಇಂದು ಭಾರತದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾರಣ : ಗೌತಮ್ ಗೌಡ

ರಾಮನಗರ : ಇಡೀ ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇದಕ್ಕೆ ಡಾ. ಬಾಬಾಸಾಹೇಬ್ ಅವರ ಪ್ರೇರಣಾ ಶಕ್ತಿಯೇ ಕಾರಣ ಎಂದು ಬಿಜೆಪಿ ಯುವ ಮುಖಂಡ ಗೌತಮ್ ಗೌಡ ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಬಿಜೆಪಿ ಯುವ ಮುಖಂಡ ಗೌತಮ್ ಗೌಡ ಮಾತನಾಡಿದರು.

ದ್ಯಾವರಸೆಗೌಡನದೊಡ್ಡಿ ರಸ್ತೆಯ ಅರ್ಕಾವತಿ ಬಡಾವಣೆಯಲ್ಲಿರುವ ಆಸರೆ ನಿರಾಶ್ರಿತರ ಮತ್ತು ವೃದ್ಧಾಶ್ರಮದಲ್ಲಿ  ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅವರ ಜಯಂತಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಇಡೀ ವಿಶ್ವ ಆಚರಿಸುವಂತದ್ದಾಗಿದೆ. ಭಾರತದ ಸಮಸ್ತ ಎಲ್ಲ ಸಮಾಜಗಳಿಗೆ ಅವರು ಮಾರ್ಗದರ್ಶಕರಾಗಿದ್ದಾರೆ ಎಂದರು.

ಜಗತ್ತಿನಲ್ಲಿ ಯಾರೂ ಬರೆಯಲು ಸಾಧ್ಯವಾದಂತಹ ಸಂವಿಧಾನವನ್ನು ಬರೆದಿದ್ದಾರೆ. ಅಂತಹ ಸಂವಿಧಾನದಡಿಯಲ್ಲಿ ಇವತ್ತು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಭಾರತದಲ್ಲಿ ಎಲ್ಲರೂ ಸೋದರ, ಸಾಮರಸ್ಯದಿಂದ ಬದುಕಲು ಡಾ.ಬಿ.ಆರ್. ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ ಎಂದರು.

ಮಡಿಲು ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಎನ್. ಪುಷ್ಪಲತಾ ಆರಾಧ್ಯ ಮಾತನಾಡಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಾರ್ಗದರ್ಶನದಂತೆ ಎಲ್ಲರೂ ಸಮಾನತೆಯಿಂದ ನಡೆದುಕೊಂಡಾಗ ಮಾತ್ರ ಭಾರತ ಪ್ರಬಲ ರಾಷ್ಟ್ರವಾಗುತ್ತದೆ ಎಂದು ತಿಳಿಸಿದರು.

ಬಾಲ್ಯದಲ್ಲಿ ಅಂಬೇಡ್ಕರ್ ಅವರು ಬಹಳ ಕಷ್ಟದ ದಿನಗಳನ್ನು ಕಂಡಿದ್ದರು. ಆದರೆ, ತಮ್ಮ ಛಲ ಸಾಧನೆಯ ಮೂಲಕ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ದೇಶದ ಅದ್ಭುತ ನಾಯಕರಲ್ಲಿ ಒಬ್ಬರಾಗಿ ರೂಪುಗೊಂಡರು ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ. ಶಿವಾನಂದ, ಮುಖಂಡ ಬಿ. ನಾಗೇಶ್, ಎಸ್‌ ಸಿ ಮೋರ್ಚಾ ಅಧ್ಯಕ್ಷ ವಿ. ರಾಜು, ಮುಖಂಡ ಪ್ರವೀಣ್ ಗೌಡ, ಟ್ರಸ್ಟಿನ ಸದಸ್ಯರಾದ ಟಿ.ಎಂ. ಮಹದೇವಯ್ಯ, ಪರಿಮಳ, ಸಿದ್ದರಾಜು ಇದ್ದರು.

Leave a Reply

Your email address will not be published. Required fields are marked *