ಡಾ.ಬಿ.ಅರ್. ಅಂಬೇಡ್ಕರ್ ಸಾರ್ವಕಾಲಿಕ ಸ್ಮರಣಾರ್ಹರು : ಬಿ.ಎನ್. ಮರೀಗೌಡ
ಚನ್ನಪಟ್ಟಣ : ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿದ್ದು, ಆವರು ಸಾರ್ವಕಾಲಿಕ ಸ್ಮರಣಾರ್ಹರಾಗಿದ್ದಾರೆ . ಇಂದಿನ ಯುವ ಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಬಿ.ಇ.ಒ ಮರಿಗೌಡ ತಿಳಿಸಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 131 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ರವರು ಭಾರತದ ಸಂವಿಧಾನ ಶಿಲ್ಪಿ. ಸಮಾನತೆಗಾಗಿ ಹೋರಾಡಿದವರು. ಪ್ರಜಾಪ್ರಭುತ್ವದ ಅನುಯಾಯಿ. ಅಪ್ಪಟ ದೇಶಪ್ರೇಮಿ, ಮಹಾಮಾನವತಾವಾದಿ ಅಷ್ಟೇ ಅಲ್ಲ. 20 ನೇ ಶತಮಾನದ ಶ್ರೇಷ್ಠ ಸಮಾಜ ಸುಧಾರಕರಾಗಿ ಮನುಕುಲಕ್ಕೆ ಬೆಳಕು ತೋರಿದ ದಾರ್ಶನಿಕರಾಗಿದ್ದಾರೆ ಎಂದು ಬಣ್ಣಿಸಿದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ ಭಾರತ ಭಾಗ್ಯ ವಿಧಾತ, ಭಾರತ ರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಸೂರು ,ನೀರಿನ ಭೇದವನ್ನು ಹೋಗಲಾಡಿಸಿ ಸಮಾನತೆಯನ್ನು ತಂದವರು , ಇಂದು ನಾವು ನೋಟು, ಬೂಟು ,ಕೋಟುಗಳನ್ನು ಕಾಣುತ್ತಿದ್ದೇವೆ ಎಂದರು ಅದಕ್ಕೆ ಅಂಬೇಡ್ಕರ್ ರವರ ಸಂವಿಧಾನವೇ ಕಾರಣ , ಹಾಗಾಗಿ ಅವರ ಬದುಕು, ಬರಹ, ಹೋರಾಟ, ಸಾರಿದ ತತ್ವ, ಸಿದ್ಧಾಂತ ಅಂದಿಗೂ. ಇಂದಿಗೂ ಎಂದೆಂದಿಗೂ ಆದರ್ಶಪ್ರಾಯ, ಅನುಕರಣೀಯ ಹಾಗೂ ಮಾರ್ಗದರ್ಶಕ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ವೀರಾಜ್ ರವರು ಮಾತನಾಡಿ ಬಾಬಾ ಸಾಹೇಬ್ ಅವರು ಎಲ್ಲರಿಗೂ ಸಮಾನತೆ ಕಲ್ಪಿಸಿದ್ದಾರೆ. ಹೀಗಾಗಿ ಅವರು ನೀಡಿರುವಂತಹ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಇದು ನಿಜಕ್ಕೂ ಮೆಚ್ಚುವಂತಹ ಕೆಲಸವಾಗಿದೆ ಎಂದರು.
ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ನಾಗರತ್ನಮ್ಮ ,ಶಿಕ್ಷಣ ಸಂಯೋಜಕರಾದ ಗಂಗಾಧರ್ ಮೂರ್ತಿ , ಶಿಕ್ಷಕರಾದ ದೇವೇಗೌಡ ,ಮಂಜುಳಾ ,ವಿಷಯ ನಿರ್ವಾಹಕರಾದ ಮಧು , ಮಂಜು , ಚಂದ್ರೇಗೌಡ, ಹೇಮಾಲತಾ, ವಿಜಯಲಕ್ಷ್ಮೀ , ಸಿ ಆರ್.ಪಿ ಮುತ್ತಯ್ಯ , ಜಭೀಉಲ್ಲಾ,ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು .
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು .