ಎಸ್‌ಎಸ್‌ಎಲ್‌ಸಿ ಮೌಲ್ಯಮಾಪಕರ ಸಂಭಾವನೆ ಹೆಚ್ಚಳ
ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಭತ್ಯೆ ಯನ್ನು ಹೆಚ್ಚಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.
ಭತ್ಯೆ ಪರಿಷ್ಕರಣೆಯಿಂದಾಗಿ ಮೌಲ್ಯ ಮಾಪನ ಕೇಂದ್ರಗಳ ಜಂಟಿ ಮುಖ್ಯ ಪರೀಕ್ಷಕರ ಸಂಭಾವನೆ 6,924 ರೂ. ರಿಂದ 7,270 ರೂ, ಉಪ ಮುಖ್ಯ ಪರೀಕ್ಷಕರ ಸಂಭಾವನೆ
ರೂ. 5,204 ರಿಂದ 5,464 ರೂ.ಗೆ ಹೆಚ್ಚಳ ಆಗಲಿದೆ.
ಮೌಲ್ಯಮಾಪಕರಿಗೆ ಪ್ರತಿ ಉತ್ತರ ಪತ್ರಿಕೆಯ ಮೌಲ್ಯಮಾಪನ ದರವನ್ನು 1 ರೂ.ಹೆಚ್ಚಿಸಲಾಗಿದೆ. ಇದರಿಂದ 22 ರೂ. ಇದ್ದ ಪ್ರಥಮ ಭಾಷೆ ಪತ್ರಿಕೆಯ ಮೌಲ್ಯ ಮಾಪನ ದರ 23 ರೂ. ದ್ವಿತೀಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಷಯ ಗಳಿಗೆ 20 ರೂ.ಇದ್ದ ಪ್ರತಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ 21 ರೂ.ಗೆ ಹೆಚ್ಚಿಸಲಾಗಿದೆ.
ಭತ್ಯೆ ಬೆಂಗಳೂರಿನಲ್ಲಿ 596 (ಹಿಂದಿನ ದರ 568 ರೂ.) ರೂ. ಹಾಗೂ ಇತರ ನಗರಗಳಲ್ಲಿ 469 ರೂ.(ಹಿಂದಿನ ದರ 447 ರೂ.), ಸ್ಥಳೀಯ ಭತ್ಯೆ ಬೆಂಗಳೂರಿಗೆ 224 ರೂ.(ಹಿಂದಿನ ದರ 224 ರೂ.), ಇತರ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು 189 ರೂ. (ಹಿಂದಿನ ದರ 180 ರೂ.) ಹೆಚ್ಚಳ ಮಾಡಲಾಗಿದೆ.
ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ 4,515 ರೂ. (ಹಿಂದಿನ ದರ 4,300 ರೂ.), ಕ್ಯಾಂಪ್ ಸಹಾಯಕರ ಸಂಭಾವನೆ 1,260 ರೂ. (ಹಿಂದಿನ ದರ 1,200 ರೂ.), ‘ಡಿ’ ದರ್ಜೆ ನೌಕರರ ಸಂಭಾವನೆ 630 ರೂ. (ಹಿಂದಿನ ದರ 600 ರೂ.) ಆಗಿ ಹೆಚ್ಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.