‘ಬಾಲಣ್ಣ ಚೆನ್ನಾಗಿದ್ದೀರಾ’ ಎಂದ ನಿಖಿಲ್, ‘ನೀನು ಚೆನ್ನಾಗಿದ್ದೀಯಾ ಬ್ರದರ್’ ಎಂದ ಬಾಲಕೃಷ್ಣ
ಮಾಗಡಿ : ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ- ನಟ ನಿಖಿಲ್ ಕುಮಾರಸ್ವಾಮಿ ಮುಖಾಮುಖಿ ಬೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಭಾಗವಹಿಸಿದ ನಂತರ ವಿವಿಧ ಸಮುದಾಯಗಳ ಆರವಂಟಿಗೆಗಳಿಗೆ ತೆರಳುವ ವೇಳೆ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬೇಟಿ ನೀಡಿ ತೆರಳುವ ವೇಳೆ ನಿಖಿಲ್ ಕುಮಾರಸ್ವಾಮಿ ಎಚ್.ಸಿ.ಬಾಲಕೃಷ್ಣ ಬಳಿ ತೆರಳಿ ಬಾಲಣ್ಣ ಚೆನ್ನಾಗಿದ್ದೀರಾ ಎಂದು ವಿಚಾರಿಸಿದರೆ ಎಚ್.ಸಿ.ಬಾಲಕೃಷ್ಣ ನೀನು ಚೆನ್ನಾಗಿದ್ದೀಯಾ ಬ್ರದರ್ ಎಂದು ಆತ್ಮೀಯವಾಗಿ ಮಾತನಾಡಿದರು. ಇದೇ ವೇಳೆ ಶಾಸಕ ಎ.ಮಂಜುನಾಥ್ ನಿಖಿಲ್ ಕುಮಾರಸ್ವಾಮಿ ಜೊತೆಯಲ್ಲಿದ್ದರು ಇದನ್ನು ಕಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒಂದು ನಿಮಿಷಗಳ ಕಾಲ ದಿಗ್ಬ್ರಮೆಯಾದರು.
2018ರ ಚುನಾವಣೆಯಲ್ಲಿ ಎಚ್.ಸಿ.ಬಾಲಕೃಷ್ಣ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ನಡೆದ ವಿಧಾನಸಭಾ ಚುನಾವಣೆ ವೇಳೆ ಬಿಡದಿ ಬಳಿ ಎಚ್.ಸಿ.ಬಾಲಕೃಷ್ಣ ವಿರುದ್ದ ಮಾದ್ಯಮಗಳಲ್ಲಿ ಹೇಳಿಕೆ ನೀಡಿದ್ದರು ಇದಾದ ನಂತರ ಸುಮಾರು ವರ್ಷಗಳ ಕಾಲ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಶಾಸಕರ ನಡುವೆ ಆಂತರ ಕಾಯ್ದುಕೊಳ್ಳಲಾಗಿತ್ತು ಇಂದು ನಡೆದ ಶ್ರೀರಂಗನಾಥ ಬ್ರಹ್ಮರಥೋತ್ಸವದಲ್ಲಿ ಶಾಸಕ ಎ.ಮಂಜುನಾಥ್ ಸಮ್ಮುಖದಲ್ಲೆ ನಿಖಿಲ್ ಕುಮಾರಸ್ವಾಮಿ ಮತ್ತು ಎಚ್.ಸಿ.ಬಾಲಕೃಷ್ಣ ಸ್ನೇಹತ್ವವಾಗಿ ಇಬ್ಬರು ಮಾತನಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ಸ್ನೇಹತ್ವ ಯಾವ ಮಟ್ಟದಲ್ಲಿ ಬೆಳೆಯುತ್ತದೆ ಎಂಬುದು ಕಾದುನೋಡಬೇಕಿದೆ.