ಈ ಒಬ್ಬ ಶಿವಕುಮಾರ್ ಜೈಲಿಗೆ ಹಾಕಿದರೆ ನೂರುಜನ ಶಿವಕುಮಾರ್, ನೂರು ಜನ ಸಿದ್ದರಾಮಯ್ಯ, ನೂರು ಜನ ಖರ್ಗೆ ಅವರು ಹುಟ್ಟಿಕೊಳ್ಳುತ್ತಾರೆ. ಅವರು ಏನು ಮಾಡುತ್ತಾರೋ ಮಾಡಲಿ, ನಾವು ಅರಗಿಸಿಕೊಳ್ಳುತ್ತೇವೆ : ಡಿ.ಕೆ. ಶಿವಕುಮಾರ್

ರಾಮನಗರ : ಕುಮಾರಸ್ವಾಮಿ ಅವರು ಗೋಹತ್ಯೆ, ಮತಾಂತರ ವಿಚಾರದಲ್ಲಿ ನಮ್ಮ ಪರ ಯಾಕೆ ನಿಲ್ಲಲಿಲ್ಲ? ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಪರ ನಿಂತಿರುವುದೇಕೆ? ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ ಎಂದಿದ್ದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ರಾಮನಗರದಲ್ಲಿ ಕಾಂಗ್ರೆಸ್ ವತಿಯಿಂದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾರಾದರೂ ಮುಸಲ್ಮಾನರು, ಕ್ರೈಸ್ತರು ಬಲವಂತದ ಮತಾಂತರ ಮಾಡುತ್ತಿದ್ದಾರಾ? ಆದರೂ ಅದರ ವಿರುದ್ಧ ಯಾಕೆ ಧ್ವನಿ ಎತ್ತಲಿಲ್ಲ? ಈ ರಾಜ್ಯದ ಜನರ ಜವಾಬ್ದಾರಿ ಮೇಲೆ ರಾಜಕಾರಣ ಮಾಡಿದರೆ ಮಾತ್ರ ನಾವು ರಾಜಕೀಯದಲ್ಲಿ ಬದುಕಲು ಸಾಧ್ಯ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾವು ಕೆಲಸ ಮಾಡಬಾರದು. ನೀವು ಒಳ್ಳೆ ಕೆಲಸ ಮಾಡಿ, ನಾನು ನಿಮಗೆ ಸಹಕಾರ ನೀಡುತ್ತೇವೆ. ಆದರೆ ದ್ವಂದ್ವ ನಿಲುವು ಬೇಡ ಎಂದರು.

ಇಂದು ನಮ್ಮಕ್ಕ ಅನಿತಕ್ಕ ಮೇಕೆದಾಟಿಗೆ ಹೋಗಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ. ಅವರು ನೀರು ತಂದು ಹಂಚಲಿ. ಅವರ ಜಲಧಾರೆ ಯಾತ್ರೆಗೆ ನಿಮ್ಮ ಬಳಿ ಇರುವ ಮೇಕೆದಾಟು ಟೋಪಿ ಕೊಡಿ, ನಾವು ಅವರಿಗೆ ಸಹಕಾರ ಕೊಡೋಣ. ಅವರು ರಾಜ್ಯದ ಎಲ್ಲ ಆಣೆಕಟ್ಟು ಕಟ್ಟಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ. ನಾವು ಅಸೂಯೆ ಪಡುವುದಿಲ್ಲ ಎಂದರು.

ರಾಮನಗರ ಎಸ್ಪಿ, ಡಿಸಿ ಅವರು ನಮ್ಮ ನಾಯಕರ ಮೇಲೆಲ್ಲ ಕೇಸ್ ಹಾಕಿದ್ದಾರೆ. ನಾವು ಜೈಲು, ಕೇಸಿಗೆ ಹೆದರುವುದಿಲ್ಲ ಎಂದರು.

ಸಂತೋಷ್ ಪಾಟೀಲ್ ಸಹೋದರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸಂತೋಷ್ ಕುಟುಂಬದವರನ್ನು ನಾವು ಭೇಟಿ ಮಾಡಲು ಹೋದಾಗ ಅವರ ಪತ್ನಿ, ‘ನನ್ನ ಪತಿ ನನ್ಮ ಮಾಂಗಲ್ಯಸರ, ಚಿನ್ನಾಭರಣ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ದಿನಬೆಳಗಾದರೆ ಮೋದಿ, ಬಿಜೆಪಿ ಎನ್ನುತ್ತಿದ್ದರು. ಈಗ ಅವರೇ ಸಾವನ್ನಪ್ಪಿದ್ದಾರೆ’ ಎಂದು ಗೋಳಾಡಿದರು.

ನಂತರ ನಾವು ಕಾಮಗಾರಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದೆವು. ಆದರೆ ಅತೀಕ್ ಎಂಬ ಅಧಿಕಾರಿ ಮೂಲಕ ವರ್ಕ್ ಆರ್ಡರ್ ಆಗಿಲ್ಲ ಎಂದರು. ಆದರೆ ಸಚಿವ ಮುರುಗೇಶ್ ನಿರಾಣಿ, ಕಾರಜೋಳ ಅವರು ಕೆಲಸ ಆಗಿದೆ ಬಿಲ್ ಪಾವತಿ ಮಾಡಿಸುವುದಾಗಿ ಹೇಳಿದ್ದಾರೆ ಎಂದರು.

ಆತನಿಗೆ ಬಿಲ್ ಪಾವತಿ ಆಗದಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನರೇಗಾ ಮೂಲಕ ನಮ್ಮ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಮಾಡಿದ್ದರೂ ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಈಶ್ವರಪ್ಪ ನಮಗೆ ಪ್ರಶಸ್ತಿ ನೀಡಲಿಲ್ಲ, ನಮ್ಮ ಪಂಚಾಯ್ತಿ ಅವರನ್ನು ಕರೆಸಿ ಪ್ರಮಾಣ ಪತ್ರ ಕೊಟ್ಟು ಕಳಿಸಿದ್ದಾರೆ ಎಂದರು.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ:

ಕುಮಾರಸ್ವಾಮಿ ಅವರು ರಾಮನಗರದಿಂದಲೇ 2023ರ ಚುನಾವಣೆಗೆ ತಯಾರಿ ಮಾಡುವ ಶಪಥ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕುಮಾರಸ್ವಾಮಿ ಅವರು ರಾಮನಗರದಿಂದ ಶಪಥವಾದರೂ ಮಾಡಲಿ, ಸಂಕಲ್ಪವಾದರೂ ಮಾಡಲಿ, ಅವರಿಗೆ ಒಳ್ಳೆಯದಾಗಲಿ’ ಎಂದು ಡಿ.ಕೆ. ಶಿವಕುಮಾರ್ ಉತ್ತರಿಸಿದರು.

ಸಂತೋಷ್ ಪ್ರಕರಣ ಕುರಿತು ಕಾಂಗ್ರೆಸ್ ಹೋರಾಟದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಇದೊಂದು ಭ್ರಷ್ಟ ಸರ್ಕಾರ. ದೂರಿನಲ್ಲಿ ಭ್ರಷ್ಟಾಚಾರ ಪ್ರಸ್ತಾಪ ಸ್ಪಷ್ಟವಾಗಿದೆ. ಹೀಗಾಗಿ ಆತ್ಮಹತ್ಯೆಗೆ ಕಾರಣದ ಜತೆಗೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಬೆರೆಯವರಾಗಿದ್ದರೆ ಈ ಸರ್ಕಾರ ಸುಮ್ಮನೆ ಬಿಡುತ್ತಿತ್ತೆ? ನಾವು ಜನರಿಗೆ ಜಾಗೃತಿ ಮೂಡಿಸುವ ಹೋರಾಟ ಮಾಡುತ್ತೇವೆ’ ಎಂದರು.

ನಿಮ್ಮನ್ನು ಜೈಲಿಗೆ ಕಲಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ‘ಅವರು ನನ್ನನ್ನು ಜೈಲಿಗೆ ಹಾಕುತ್ತೇನೆ ಎಂದರೆ ಅದರ ಅರ್ಥ. ಜನ ಅವರನ್ನು ತಿರಸ್ಕರಿಸಿದ್ದಾರೆ ಏನಾದರೂ ಮಾಡಿ ಒಳಗೆ ಹಾಕಿ ಅವರು ದರ್ಬಾರ್ ಮಾಡಲು ಹೊರಟಿದ್ದಾರೆ. ಈ ಒಬ್ಬ ಶಿವಕುಮಾರ್ ಜೈಲಿಗೆ ಹಾಕಿದರೆ ನೂರುಜನ ಶಿವಕುಮಾರ್, ನೂರು ಜನ ಸಿದ್ದರಾಮಯ್ಯ, ನೂರು ಜನ ಖರ್ಗೆ ಅವರು ಹುಟ್ಟಿಕೊಳ್ಳುತ್ತಾರೆ. ಅವರು ಏನು ಮಾಡುತ್ತಾರೋ ಮಾಡಲಿ, ನಾವು ಅರಗಿಸಿಕೊಳ್ಳುತ್ತೇವೆ’ ಎಂದರು.

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕಟೀಲ್ ಅವರು ಕಾಂಗ್ರೆಸ್ ನಾಯಕರ ಕೈವಾಡದ ಶಂಕೆ ಬಗ್ಗೆ ಪ್ರಶ್ನಿಸಿದಾಗ, ‘ಸಂತೋಷ್ ಅವರ ಪ್ರಕರಣದಲ್ಲಿ ಕಟೀಲ್ ಒಂದು ರೀತಿ ಹೇಳಿದರೆ, ಯತ್ನಾಳ್ ಹೇಳುವ ಪ್ರಕಾರ ಇದರಲ್ಲಿ ಬಿಜೆಪಿಯವನು ಸೇರಿಕೊಂಡಿದ್ದಾನಂತೆ. ಅವರ ಹೇಳಿಕೆಗಳನ್ನು ಎಲ್ಲರೂ ದಾಖಲಿಸಿಕೊಳ್ಳಿ.

Leave a Reply

Your email address will not be published. Required fields are marked *