ಬಾಲು ಪಬ್ಲಿಕ್ ಶಾಲೆಯಲ್ಲಿ “ಆರ್ಟ್ ಆನ್ ದಿ ಸ್ಟ್ಯಾಂಡ್” ಕಾರ್ಯಕ್ರಮ
ಚನ್ನಪಟ್ಟಣ : ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ “ಆರ್ಟ್ ಆನ್ ದಿ ಸ್ಟ್ಯಾಂಡ್” ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ 28 ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಕಲಾವಿದರ ಸಹಯೋಗದೊಂದಿಗೆ ಆಯೋಜಿಸಿದ್ದ ವಾಲ್ ಪೇಂಟಿಂಗ್ ಕಾರ್ಯಾಗಾರದಲ್ಲಿ ಶಾಲೆಯ ಸೈಕಲ್ ಸ್ಟ್ಯಾಂಡ್ಗೆ ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಾಲಾ ಶಿಕ್ಷಕರು, ಹಿತೈಷಿಗಳು ಭಾಗವಹಿಸಿದ್ದರು.
ಥೀಮ್ – ನಾವು ಹೆಚ್ಚು ಕಲಿತಾಗ, ನಾವು ಮನುಷ್ಯರಾಗಿ ಹೆಚ್ಚು ಬೆಳೆಯುತ್ತೇವೆ. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವೆಂಕಟ ಸುಬ್ಬಯ್ಯ ಚೆಟ್ಟಿ ಮಾತನಾಡಿ ಈ ಕಾರ್ಯಕ್ರಮವು ಮುಂದಿನ ತಿಂಗಳುಗಳಲ್ಲಿ ಶಾಲೆಯು ಅಳವಡಿಸಿಕೊಳ್ಳಲಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧ ಕಾರ್ಯಕ್ರಮಗಳ ಭಾಗವಾಗಿದೆ ಎಂದು ಅವರು ತಿಳಿಸಿದರು.
ಶಾಲೆಯ ಜಂಟಿ ಕಾರ್ಯದರ್ಶಿ ಶ್ರೀ ಬಾಲಸುಬ್ರಮಣ್ಯಂ ಮಾತನಾಡಿ, ಈ ಕಾರ್ಯಕ್ರಮವು ಶಾಲೆಯು ವಿಶೇಷವಾಗಿ ಬಾಳು ಪಬ್ಲಿಕ್ ಶಾಲೆಯ ಮಕ್ಕಳಿಗಾಗಿ ಯೋಜಿಸಿರುವ ಬೇಸಿಗೆ ಚಟುವಟಿಕೆಗಳ ಮೊದಲ ಕಾರ್ಯಕ್ರಮವಾಗಿದೆ. ಮುಂದಿನ ಭಾನುವಾರ 8 ರಿಂದ 14 ವರ್ಷದೊಳಗಿನ ನಮ್ಮ ಊರಿನ ಎಲ್ಲಾ ಮಕ್ಕಳಿಗೆ ಉಚಿತ ನೇತ್ರ ಪರೀಕ್ಷೆಯನ್ನು ನಡೆಸಲು ಶಾಲೆ ಯೋಜಿಸಿದೆ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿರುತ್ತಾರೆ ಕಾರ್ಯಕ್ರಮದಲ್ಲಿ ವನ್ ಭೂಮಿ ಫೌಂಡೇಶನ್ ನ ನವನೀತ್ ಸಮೀಕ್ಷಾ ಮತ್ತು ಮೇಘನಾ ಮುಂತಾದವರು ಪಾಲ್ಗೊಂಡಿದ್ದರು.