ಮಠಕ್ಕೆ ಕೊಟ್ಟ ಅನುದಾನವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ : ಮೀಸಲಾತಿ ನೀಡಲು ಸರ್ಕಾರಕ್ಕೆ ಏ. 21 ರ ಅಂತಿಮ ಗಡುವು ನೀಡಲಾಗಿದೆ. ಇದು ಮಾಡು ಇಲ್ಲವೆ ಮಡಿ ಹೋರಾಟ, ಸ್ಪಂದಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ : ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು : ನಾವು ಮಠಕ್ಕೆ ಅನುದಾನವನ್ನೇ ಪಡೆಯುವುದಿಲ್ಲ.ಈ ಹಿಂದೆ ಕೊಟ್ಟ ಅನುದಾನ ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಮಠದಿಂದಲೂ 30 ಪರ್ಸೆಂಟ್ ಕಮಿಷನ್ ಪಡೆದು ಅನುದಾನ ನೀಡಲಾಗುತ್ತದೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾಡಿದ ಆರೋಪದ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಬಸವ ಜಯಮೃತ್ಯುಂಜಯಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.
ದಿಂಗಾಲೇಶ್ವರರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬಹುಶಃ ಅವರ ಬಳಿ ಆ ಕಮಿಷನ್ ಆರೋಪದ ಬಗ್ಗೆ ಮಾಹಿತಿ ಇರಬಹುದು. ಆದರೆ, ನಮಗಂತೂ ಸರ್ಕಾರದ ಅನುದಾನ ಬೇಕಾಗಿಲ್ಲ. ಸಮುದಾಯಕ್ಕೆ 2ಎ ಮೀಸಲಾತಿ ಬೇಕಷ್ಟೆ ಎಂದರು.
ಮೀಸಲಾತಿ ನೀಡಲು ಸರ್ಕಾರಕ್ಕೆ ಏ. 21 ರ ಅಂತಿಮ ಗಡುವು ನೀಡಲಾಗಿದೆ. ಇದು ಮಾಡು ಇಲ್ಲವೆ ಮಡಿ ಹೋರಾಟ, ಸ್ಪಂದಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *