ರಾಜ್ಯದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ 75 ಲಕ್ಷ : ರಘುನಂದನ್ ರಾಮಣ್ಣಗೆ ರಾಹುಲ್ ಗಾಂಧಿ ಅಭಿನಂದನೆ
ಬೆಂಗಳೂರು : ರಾಜ್ಯದಲ್ಲಿ ದಾಖಲೆಯ 75 ಲಕ್ಷ ಮಂದಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಪಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಐಸಿಸಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಕರ್ನಾಟಕದ ನೇತೃತ್ವವನ್ನು ರಘುನಂದನ್ ರಾಮಣ್ಣ ವಹಿಸಿದ್ದರು. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಡಿಜಿಟಲ್ ಸದಸ್ಯತ್ವಕ್ಕೆ ಕಾರಣರಾದ ರಘುನಂದನ್ ರಾಮಣ್ಣ ಅವರನ್ನು ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ಫೆ. 4ರಂದು ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಆರಂಭವಾಗಿತ್ತು. ಡಿ.ಕೆ. ಶಿವಕುಮಾರ್ ಅವರು ಎಲ್ಲ ಜಿಲ್ಲೆಗ ಳಲ್ಲಿ ಪ್ರವಾಸ ಕೈಗೊಂಡು, ಸದಸ್ಯತ್ವ ಅಭಿಯಾನದ ತರಬೇತಿ, ಪ್ರಗತಿ ಪರಿಶೀಲನೆ ಜತೆಗೆ ನಿರಂತರ ಜೂಮ್ ಸಭೆಗಳನ್ನು ನಡೆಸಿದ್ದರು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಸಿ, ಕಾರ್ಯಕ ರ್ತರು ಹಾಗೂ ಮತದಾರರ ಸಂಪರ್ಕ ಸಾಧಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ನೋಂದಣಿದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.