ಶಿಕ್ಷಣ ಸಹಾಯಕ ಎಲಿಯೂರು ಎಸ್. ಈರಯ್ಯ ನಿಧನ

ಎಸ್ ಈರಯ್ಯ ಎಲಿಯೂರು (83) ಮೈಸೂರಿನಲ್ಲಿ ನಿನ್ನೆ ರಾತ್ರಿ‌ ನಿಧನರಾದರು.
ಮೃತರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಶಿಕ್ಷಣ ಸಹಾಯಕರಾಗಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ 1998 ರಲ್ಲಿ ನಿವೃತ್ತಿ ಹೊಂದಿದ್ದರು.

ನಿವೃತ್ತ ಜೀವನವನ್ನು ಅವರ ಪುತ್ರ ಈ ಧನಂಜಯ ರವರ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿರುವ ನಿವಾಸದಲ್ಲಿ ಕಳೆಯುತ್ತಿದ್ದರು.

ಮೃತರು ಪತ್ನಿ ಜಯಮ್ಮ,ಮಕ್ಕಳಾದ ಈ ಧನಂಜಯ, (ಪ್ರಗತಿಪರ ಚಿಂತಕರು ಹಾಗೂ ಬದುಕು ಟ್ರಸ್ಟ್ ನಿರ್ದೇಶಕರು) ಈ.ಜಯಪ್ರಕಾಶ್, (ವಾಕ್ ಶ್ರವಣ ತಜ್ಜರು ಯು.ಎಸ್.ಎ.)
ಈ. ಜಯಲಕ್ಷ್ಮಿ ನಂದಕುಮಾರ್, ಉಪನ್ಯಾಸಕರು, ಈ. ಇಂದುಮತಿ ಮಹದೇವ್ (ಪದವಿ ಪೂರ್ವ ಶಿಕ್ಷಣ ಇಲಾಖೆ) ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು-ಬಳಗ, ಶಿಷ್ಯಂದಿರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 03:30 ಗಂಟೆಗೆ ಸ್ವಗ್ರಾಮ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಎಲಿಯೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಅವರ ಪುತ್ರ ಈ. ಧನಂಜಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *