ವಿದ್ಯಾರ್ಥಿಗಳಿಗೆ ಕ್ಯಾಪ್ಟನ್ ಸೋಮಶೇಖರ್ ಅವರಿಂದ ನೋಟ್ ಪುಸ್ತಕ ವಿತರಣೆ

ಚನ್ನಪಟ್ಟಣ: ಇಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಕ್ಯಾಪ್ಟನ್ ಸೋಮಶೇಖರ್ ಅವರು ನೋಟ್ ಪುಸ್ತಕ ವಿತರಣೆ ಮಾಡಿದರು.
ಸಂದರ್ಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳ ಸಂಕಷ್ಟ ತಿಳಿದಿದೆ, ನಾನೂ ಸಹ ಸಾಕಷ್ಟು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ, ಅವರಿಗೆ ಅನಾನುಕೂಲವಾಗದಿರಲಿ ಎನ್ನವ ದೃಷ್ಟಿಯಿಂದ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದೇನೆ. ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ನೀಡಿದ್ದೇನೆ, ಮುಂದೆಯೂ ಮುಂದುವರೆಸುತ್ತೇನೆ ಎಂದರು.

ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ, ಉತ್ತಮವಾಗಿ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆನೀಡಿದ ಸೋಮಶೇಖರ್, ಸರ್ಕಾರಿ ಶಾಲೆಯೆಂಬ ಕೀಳರಿಮೆ ಬೇಡ, ವಿದ್ಯಾರ್ಥಿದೆಸೆಯಲ್ಲಿ ಅನ್ಯ ವಿಚಾರಗಳತ್ತ ಗಮನಹರಿಸದೆ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಉತ್ತಮ ಫಲಿತಾಂಶ ಪಡೆಯುವ ಮೂಲಕ ಹೆತ್ತವರು, ಶಾಲೆಗೆ ಕೀರ್ತಿ ತರಬೇಕೆಂದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಮಾತನಾಡಿ, ಸರ್ಕಾರಿ ಶಾಲೆಗಳ ಉನ್ನತಿಗೆ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯಕವಾಗಿದೆ, ವಿದ್ಯಾರ್ಥಿನಿಯರು ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಉತ್ತಮವಾಗಿ ಅಭ್ಯಾಸ ಮಾಡಬೇಕು. ಕಲಿಕೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕೆಂದರು.

ಸಂದರ್ಭದಲ್ಲಿ ಕ್ಯಾ.ಸೋಮಶೇಖರ್ ಅವರ ಪತ್ನಿ ಭಾನುಪ್ರಿಯ, ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಪ್ರದೀಪ್, ವಾರ್ಡನ್ ಉಷಾರಾಣಿ, ಮುಖಂಡ ಪ್ರಕಾಶ್, ಅಪ್ಪಗೆರೆ ಕುಮಾರ್, ಮಂಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *