ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ 20 ಪುಸ್ತಕಗಳ ಬಿಡುಗಡೆ

ಬೆಂಗಳೂರು :ವಿಮರ್ಶೆಯಲ್ಲಿ ತಮಗೆ ಬೇಕಾದವರ ಸಾಹಿತ್ಯವನ್ನು ಹಾಡಿ ಹೊಗಳುವ ಕೆಲಸ ನಡೆಯುತ್ತಿದೆ. ಪೂರ್ವಗ್ರಹ ವಿಮರ್ಶೆ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿಮರ್ಶಾ ಕ್ಷೇತ್ರ ಅರ್ಥ ಕಳೆದುಕೊಳ್ಳುತ್ತಿದೆ ಎಂದು ಲೇಖಕ ಬಾಬು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಮತ್ತು ಸ್ವಾತಂತ್ರ್ಯದ ಅಮೃತಮಹೋತ್ಸವದ ಗೋಷ್ಠಿಯಲ್ಲಿ ಮಾತನಾಡಿದರು. ‘ಎಸ್‌.ಎಲ್‌.ಬೈರಪ್ಪ ಅವರ ಕೃತಿಗಳಲ್ಲಿ ನಿಜವಾದ ಮೌಲ್ಯಗಳಿದ್ದರೂ ಅಪಹಾಸ್ಯ ಮಾಡಲಾಗುತ್ತಿದೆ. ಟೀಕೆ ಮಾಡಲಿ. ಆದರೆ, ಅಪಹಾಸ್ಯ ಒಳ್ಳೆಯದಲ್ಲ ಎಂದರು.
ಸ್ವಾತಂತ್ರ್ಯ ಹೋರಾಟವನ್ನು ಹಿಂದಿನಿಂದಲೂ ಉತ್ತರ ಭಾರತಕ್ಕೆ ಸೀಮಿತಗೊಳಿಸಲಾಗಿದೆ. ದೇಶದ ಇತಿಹಾಸದಲ್ಲಿ ದಕ್ಷಿಣ ಭಾರತಕ್ಕೆ ಸಿಗಬೇಕಿದ್ದ ಮಾನ್ಯತೆ ಸಿಕ್ಕಿಲ್ಲ. ಅಖಂಡ ಭಾರತಕ್ಕೆ ಈ ಭಾಗದ ಕೊಡುಗೆ ಏನೆಂಬ ಮಾಹಿತಿ ದೇಶವ್ಯಾಪಿಯಾಗಿಲ್ಲ ಎಂದರು.

ವಿದ್ವಾಂಸ ಪ್ರಧಾನ ಗುರುದತ್ತ ಮಾತನಾಡಿ ಅನುವಾದಕರನ್ನು ಎರಡನೇ ದರ್ಜೆ ಯ ವ್ಯಕ್ತಿಗಳಾಗಿ ಕಾಣಲಾಗುತ್ತದೆ. ಈ ಪ್ರವೃತ್ತಿ ಹೋಗಬೇಕು. ಅನುವಾದ ಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಶಬ್ದ ಜೋಡಣೆಯಲ್ಲಿ ಎಡವಿ ದರೆ ಅಭಾಸವಾಗುತ್ತದೆ ಎಂದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾ ರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್ ಇದ್ದರು. ಪ್ರಾಧಿಕಾರ ಹೊರತಂದಿರುವ 20 ಪುಸ್ತಕಗಳನ್ನು ಬಾಬು ಕೃಷ್ಣಮೂರ್ತಿ ಬಿಡುಗಡೆ ಮಾಡಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ 20 ಪುಸ್ತಕಗಳು :

Leave a Reply

Your email address will not be published. Required fields are marked *