ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿ : ಬೆಳ್ಳಿ, ಕಂಚಿನ ಪದಕ
ಕನಕಪುರ : ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಕನಕಪುರ ಅನಿಕೇತನ ಸ್ಪೋರ್ಟ್ಸ್ ಅಕಾಡೆಮಿಗೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಲಭಿಸಿದೆ.
ಜಪಾನ್ ಕರಾಟೆ ಶೋಟೋಕಾನ್ ಸಂಸ್ಥೆಯು ಬೆಂಗಳೂರಿನಲ್ಲಿ ಭಾನುವಾರ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ನಡೆಸಿತು.
ಕನಕಪುರ ಅನಿಕೇತನ ಸ್ಪೋರ್ಟ್ಸ್ ಅಕಾಡೆಮಿಯ 6 ಮಂದಿ ಕರಾಟೆ ಪಟುಗಳು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಪಂದ್ಯದಲ್ಲಿ ಉತ್ತಮ ಹೋರಾಟ ನಡೆಸಿ ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಸೀನಿಯರ್ ವಿಭಾಗದ ಕಟಾ ಸ್ಪರ್ಧೆಯಲ್ಲಿ ಸಿ.ಸುರೇಶ್ ಬೆಳ್ಳಿಯ ಪದಕ, 60 ರಿಂದ 65 ಕೆ.ಜಿ. ವಿಭಾಗದ ಪೈಟಿಂಗ್ನಲ್ಲಿ ಎಂ.ವಿ.ನಂದೀಶ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಗೆದ್ದು ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಕನಕಪುರ ಅನಿಕೇತನ ಸ್ಪೋರ್ಟ್ಸ್ ಅಕಾಡೆಮಿಯ ನಿರ್ದೇಶಕಿ ಪುಷ್ಪಾವತಿ ಹಾಗೂ ತರಬೇತುದಾರ ಹೊನ್ನಗಂಗಪ್ಪ ಅಭಿನಂದಿಸಿದ್ದಾರೆ.