ವಿಭೂತಿಕೆರೆ : ಆನೆ ದಾಳಿಗೆ ಬೆಳೆ ನಾಶ

ರಾಮನಗರ : ತಾಲ್ಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಾಲ್ಕು ಆನೆಗಳ ಹಿಂಡು ದಾಳಿ ನಡೆಸಿ, ಹೊಲದಲ್ಲಿನ ಫಸಲು ಹಾಗೂ ನೀರಾವರಿ ಪರಿಕರಗಳನ್ನು ನಾಶ ಮಾಡಿವೆ.

ವಿಮಲಾಂಬಿಕೆ ಎಂಬುವರಿಗೆ ಸೇರಿದ ಹಲಸಿಮರ, ಫಸಲು, ಮುಸುಕಿನ ಜೋಳ, ನೀರಾವರಿ ಪರಿಕರ, ಸೀಮೆಹುಲ್ಲು, ಬಾಗೇಮರಗಳು, ಮರಿಸ್ವಾಮಿ ಎಂಬುವರ ಹಲಸಿನಮರ, ಫಸಲು ನಟೇಶ್ ಎಂಬುವರ ತೆಂಗಿನಮರ, ಶಿವಲಿಂಗಯ್ಯ ಎಂಬುವರ ಸಫೋಟ ಗಿಡಗಳು, ಪಾಪಣ್ಣ ಎಂಬುವರ ಹಲಸು, ಮಾವಿನಮರ, ಫಸಲು, ನಾಗಣ್ಣ ಎಂಬುವರ ಹಲಸಿನ ಮರ ನಾಶಪಡಿಸಿ ಹೋಗಿವೆ.

ಆನೆಗಳ ಕಾಟ ವಿಪರೀತವಾಗಿದ್ದು ಪದೇ ಪದೇ ಬೆಳೆ ನಾಶವಾಗುತ್ತಿದೆ. ಆಗಿಂದಾಗ್ಗೆ ಆನೆಗಳ ಹಿಂಡು ಜಮೀನಿನ ಬಳಿ ಕಾಣಿಸಿಕೊಳ್ಳುವುದರಿಂದ ಬೆಳೆಗಳಿಗೆ ರಾತ್ರಿ ವೇಳೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಆನೆಗಳನ್ನು ಅರಣ್ಯ ಇಲಾಖೆ ಅವುಗಳ ಸ್ವಸ್ಥಾನ ಸೇರಿಸಲು ಮುಂದಾಗಬೇಕು ಎಂದು ಗ್ರಾಮದ ನವೀನ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *