ರಾಮನಗರಕ್ಕೆ ಆಗಮಿಸಿದ ಡಾ. ರಾಜ್ ಕುಮಾರ್ ಹಾಗೂ ಡಾ. ಪುನೀತ್ ರಾಜ್ ಕುಮಾರ್ ಅಮರ ಜ್ಯೋತಿ ರಥ ಯಾತ್ರೆಗೆ ಸ್ವಾಗತ ಕೋರಿದ ಭಗತ್ ಸಿಂಗ್ ಸೇನೆಯ ಪದಾಧಿಕಾರಿಗಳು

ರಾಮನಗರ : ಕನ್ನಡ ಚಿತ್ರ ರಂಗದ ಮೇರು ನಟ ಡಾ.ರಾಜ್‌ಕುಮಾರ್‌ರ ಜನ್ಮ ದಿನದ ಪ್ರಯುಕ್ತ ಡಾ. ರಾಜ್‌ಕುಮಾರ್ ಹಾಗೂ ಡಾ. ಪುನೀತ್ ರಾಜ್ ಕುಮಾರ್‌ರ ಅಮರ ಜ್ಯೋತಿ ರಥ ಯಾತ್ರೆ ಆರಂಭಗೊಂಡಿದ್ದು, ಶನಿವಾರ ರಾಮನಗರಕ್ಕೆ ಆಗಮಿಸಿತು.

ಡಾ. ರಾಜ್‌ಕುಮಾರ್ ಹಾಗೂ ಡಾ. ಪುನೀತ್ ರಾಜ್ ಕುಮಾರ್‌ರ ಅಮರ ಜ್ಯೋತಿ ರಥ ಯಾತ್ರೆಯನ್ನು ರಾಮನಗರದಲ್ಲಿ ಭಗತ್ ಸಿಂಗ್ ಸೇನೆಯ ಅಧ್ಯಕ್ಷರು, ವಕೀಲರು, ನೋಟರಿ ಆದ ವಿನೋದ್ ಭಗತ್, ಕಾರ್ಯದರ್ಶಿ ಕೆ. ಲೋಕೇಶ್ ಹಾಗೂ ಪದಾಧಿಕಾರಿಗಳು ಬರ ಮಾಡಿಕೊಂಡು, ಆತ್ಮೀಯವಾಗಿ ಬೀಳ್ಕೊಟ್ಟರು.

ಚಾಮರಾಜನಗರದ ದೊಡ್ಡಗಾಜನೂರಿನ ಡಾ. ರಾಜ್‌ಕುಮಾರ್ ಅವರ ನಿವಾಸದಲ್ಲಿ ಡಾ. ರಾಜ್‌ಕುಮಾರ್‌ರ ಸಹೋದರಿ ನಾಗಮ್ಮ ಈ ಅಮರ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.

ಡಾ. ರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ ಹಮ್ಮಿಕೊಂಡಿರುವ ಅಮರ ಜ್ಯೋತಿ ರಥ ಯಾತ್ರೆಯೂ ತಾಳವಾಡಿ ಮಾರ್ಗವಾಗಿ ಚಾಮರಾಜನಗರ, ಮೈಸೂರು, ಮಂಡ್ಯ,ರಾಮನಗರ ಮೂಲಕ ಏಪ್ರಿಲ್ 24ರಂದು ಬೆಂಗಳೂರಿನ ಡಾ. ರಾಜ್ ಕುಮಾರ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಸಮಾಧಿಗೆ ಆಗಮಿಸಲಿದೆ.

Leave a Reply

Your email address will not be published. Required fields are marked *