ಈ ನನ್ನ ಸಾವು ನಿನ್ನ ಮದುವೆಗೆ ನನ್ನ ಗಿಫ್ಟ್ : ಒನ್ ಸೈಡ್ ಲವ್ ಮಾಡಿ ದುರಂತ ಅಂತ್ಯ ಕಂಡ ಯುವಕ
ರಾಯ್ಪುರ್ : ಈ ನನ್ನ ಸಾವು ನಿನ್ನ ಮದುವೆಯ ಉಡುಗೊರೆ.. ಐ ಲವ್ ಯೂ ಎಂದು ಬರೆದು ಯುವಕನೊಬ್ಬ ಸಾವಿನ ಹಾದಿ ಹಿಡಿದಿರುವ ಆತಂಕಕಾರಿ ಘಟನೆ ಛತ್ತೀಸ್ ಗಡದ ಬಲೋದ್ ಜಿಲ್ಲೆಯ ಪರಾಸ್ ಏರಿಯಾ ದಲ್ಲಿ ನಡೆದಿದೆ.
ಯುವಕನದ್ದು ಒನ್ ಸೈಡ್ ಲವ್ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಕೋಣೆಯ ಗೋಡೆಯ ಮೇಲೆ ಈ ನನ್ನ ಸಾವು ನಿನ್ನ ಮದುವೆಗೆ ನಾನು ಕೊಡುತ್ತಿರುವ ಉಡುಗೊರೆ ಎಂದು ಬರೆದಿದ್ದಾನೆ. ಇದಲ್ಲದೆ, ಸಾಯುವ ಮುನ್ನ ವಿಡಿಯೋ ಮಾಡಿ ಅದನ್ನು ವಾಟ್ಸ್ಆ್ಯ ಪ್ ಸ್ಟೇಟಸ್ ಹಾಕಿ ಸಾವಿನ ಹಾದಿ ಹಿಡಿದಿದ್ದಾನೆ.
ಮೃತ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆ ಪ್ರೀತಿ ಒನ್ ಸೈಡ್ ಆಗಿತ್ತು. ಕೆಲವು ದಿನಗಳಿಂದ ಯುವತಿಯ
ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಈ ವಿಚಾರವನ್ನು ತಿಳಿದ ಯುವಕ ಖಿನ್ನತೆಗೆ ಜಾರಿದ್ದ. ಇದೇ ನೋವಿನಲ್ಲಿ ತನ್ನ ಕೊಠಡಿಯ ಫ್ಯಾನ್ ಗೆ
ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಈ ನನ್ನ ಸಾವು ನಿಮ್ಮ ಮದುವೆಗೆ ನನ್ನ ಉಡುಗೊರೆ. ಐ ಲವ್ ಯೂ ಎಂದು ಕೋಣೆಯ ಗೋಡೆಯ ಮೇಲೆ
ಇದ್ದಿಲಿನಿಂದ ಬರೆದಿದ್ದಾನೆ. ಅಲ್ಲದೆ, ಕುತ್ತಿಗೆಗೆ ಹಗ್ಗ ಹಾಕಿಕೊಳ್ಳುವುದನ್ನು ವಿಡಿಯೋ ಮಾಡಿ ವಾಟ್ಸ್ಆ್ಯ ಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿ
ಪ್ರಾಣ ಬಿಟ್ಟಿದ್ದಾನೆಂದು ಬಲೋದ್ ಡಿಎಸ್ಪಿ ಪ್ರತೀಕ್ ಚತುರ್ವೇದಿ ಅವರು ತಿಳಿಸಿದ್ದಾರೆ.
ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಶೇರ್ ಮಾಡಿರುವ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರತೀಕ್ ಚತುರ್ವೇದಿ ಮಾಹಿತಿ ನೀಡಿದರು.
(ಏಜೆನ್ಸೀಸ್)