ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ : ಸಾಲುಮರದ ತಿಮ್ಮಕ್ಕ
ಮಾಗಡಿ : ದೇವರ ಆರಾಧನೆಯಿಂದ ಮನುಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಪದ್ಮಭೂಷಣ ಸಾಲುಮರದ ತಿಮ್ಮಕ್ಕ ಹೇಳಿದರು.
ತಾಲೂಕಿನ ವೀರಾಪುರ ಗ್ರಾಮ ಮುನ್ನೇಶ್ವರ ದೇವಾಲಯಕ್ಕೆ ಭಾನುವಾರ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡುವ ತಾಣ ದೇವಾಲಯಗಳು, ಮನುಷ್ಯ ತಾನು ಎಷ್ಟೆ ಸಂಪತ್ತು ಸಂಪಾದಿಸಿದರು ಹಣದಿಂದ ನೆಮ್ಮದಿ ಪಡೆಯಲು ಸಾಧ್ಯವಿಲ್ಲ, ಮನುಷ್ಯ ತಾನು ಸಂಪಾದಿಸಿದ 10 ರಷ್ಟು ಹಣವನ್ನು ದೇವಾಲಯಕ್ಕೆ ವಿನಿಯೋಗಿಸಿದರೆ ಅದರಿಂದ ಇನಷ್ಟು ಅರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ನಗರ ಪ್ರದೇಶಗಳಲ್ಲಿ ಅಭಿವೃದ್ದಿಯ ನೆಪದಲ್ಲಿ ಮರಗಳ ನಾಶ ಸರಿಯಲ್ಲ ಮರಗಳನ್ನು ನಾಶಪಡಿಸುವರ ವಿರುದ್ದ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕಿದೆ, ಒಂದು ಮರನಾಶಪಡಿಸಿದೆ ಒಬ್ಬ ಮನುಷ್ಯನನ್ನು ನಾಶಪಡಿಸಿದಂತಾಗಿದೆ ಈ ಬಗ್ಗೆ ಯುವಕರು ಜನಜಾಗೃತಿಗೊಳಿಸಬೇಕಿದೆ ಎಂದರು.
ಚಿಕ್ಕಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವ್ಯ ದೇವೇಂದ್ರ ಕುಮಾರು ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರ ಸಾಮಾಜಿಕ ಕಳಕಳಿ ಪ್ರತಿಯೊಬ್ಬರಲ್ಲೂ ಮೂಢಿದರೆ ಕರ್ನಾಟಕವನ್ನು ಹಸಿರುಮಯವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಮರಗಳ ಬಗ್ಗೆ ಸಾಲುಮರದ ತಿಮ್ಮಕ್ಕ ಅವರು ಇಟ್ಟಿರುವ ಪ್ರೀತಿ ನಮ್ಮೆಲ್ಲರಿಗೂ ಸ್ಪೂರ್ಥಿಯಾಗಬೇಕು ಎಂದರು.
ಇದೇ ವೇಳೆ ಭವ್ಯ ದೇವೇಂದ್ರ ಕುಮಾರು ಅವರು ಸಾಲುಮರದ ತಿಮ್ಮಕ್ಕ ಅವರಿಗೆ ಮೈಸೂರು ಪೇಟ ಧರಿಸಿ ಸನ್ಮಾನಿ ಗೌರವಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ದೇವೇಂದ್ರ ಕುಮಾರ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಕುಮಾರು, ಉಮೇಶ್, ಮೋನಿಷಾ, ಮುನಿರಾಜು, ಆಶೋಕ್, ಮಹೇಶ್, ಕೃಷ್ಣಮೂರ್ತಿ, ಸುರೇಶ್, ಹೊನ್ನಾಪುರ ಮಹೇಶ್ ಇತರರು ಇದ್ದರು.