ಕೃಷ್ಣಾಪುರ ಡೇರಿ ಉಪಾಧ್ಯಕ್ಷರಾಗಿ ಭುಜಂಗ ಆಯ್ಕೆ
ಚನ್ನಪಟ್ಟಣ : ತಾಲ್ಲೂಕಿನ ಕೃಷ್ಣಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಭುಜಂಗ ಅವಿರೋಧ ಆಯ್ಕೆಯಾದರು.ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಭುಜಂಗ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಈ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಸುಭಾಷಿಣಿ ಅವರು ಘೋಷಣೆ ಮಾಡಿದರು.ಸಂಘದ ನಿರ್ದೇಶಕರಾದ ಶಿವಣ್ಣ, ಕೃಷ್ಣೇಗೌಡ, ಮಾಜಿಗೌಡ, ಹೊಂಬಾಳೇಗೌಡ, ಚನ್ನೇಗೌಡ, ಸೀನಯ್ಯ, ಸರೋಜಮ್ಮ, ತಾಯಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಡೇರಿ ಉಪಾಧ್ಯಕ್ಷರ ಅವಿರೋಧ ಆಯ್ಕೆಗೆ ಸಹಕರಿಸಿದರು.ಸಂಘದ ಮುಖ್ಯ ಕಾರ್ಯವಾಹಕ ಸಿ.ಚನ್ನಪ್ಪ, ಹಾಲು ಪರೀಕ್ಷಕ ಕರಿಯಪ್ಪ, ಗುಮಾಸ್ತ ಕೆ.ಆರ್.ಚಂದ್ರ, ಸಹಾಯಕ ಕೆ.ಸಿ.ಚಂದ್ರು, ಶುಚಿಗಾರ ಕೆ.ಸಿ.ಸಿದ್ದರಾಜು ಸುಗಮ ಚುನಾವಣೆಗೆ ನೆರವಾದರು.